ತಿರುವನಂತಪುರ: ಎಸ್‍ಡಿಪಿಐಯನ್ನು ನಿಷೇಧಿಸುವುದು ಪ್ರಾಯೋಗಿಕವಲ್ಲ ಎಂದು ಸಿಪಿಎಂ ರಾಜ್ಯ ಕಾರ್ಯದರ್ಶಿ ಕೊಡಿಯೇರಿ ಬಾಲಕೃಷ್ಣನ್ ಹೇಳಿದ್ದಾರೆ. ಇಬ್ಬರೂ ಕೋಮುಗಲಭೆ ಸೃಷ್ಟಿಸಲು ಯತ್ನಿಸುತ್ತಿದ್ದಾರೆ. ಎಸ್‍ಡಿಪಿಐ ನಿಷೇಧ ಪ್ರಾಯೋಗಿಕವಲ್ಲ. ಕಲ್ಪನೆಯನ್ನು ನಿಷೇಧಿಸಲಾಗುವುದಿಲ್ಲ, ನಿಷೇಧಿಸಿದರೆ ಅದು ಇನ್ನೊಂದು ಹೆಸರಿನಲ್ಲಿ ಬರುತ್ತದೆ. ಧರ್ಮವನ್ನು ರಾಜಕೀಯ ಲಾಭಕ್ಕೆ ಬಳಸಿಕೊಳ್ಳುವುದು ರಾಜಕೀಯ ನಾಟಕ ಎಂದಿರುವರು.
ಪಾಲಕ್ಕಾಡ್ ಹತ್ಯೆಗಳ ಬಗ್ಗೆ ಯುಡಿಎಫ್ ಸಂಕುಚಿತ ನಿಲುವು ಹೊಂದಿದೆ ಎಂದು ಕೊಡಿಯೇರಿ ಹೇಳಿದರು. ಯುಡಿಎಫ್ ಹತ್ಯೆಯನ್ನು ಖಂಡಿಸಲಿಲ್ಲ. ಸರಕಾರವನ್ನು ದೂರುವ ಪ್ರಯತ್ನ ಮಾಡಿತು. ಯುಡಿಎಫ್ ನಿಲುವು ಕೇರಳದ ಜಾತ್ಯತೀತ ಸಂಪ್ರದಾಯಕ್ಕೆ ಅನುಗುಣವಾಗಿಲ್ಲ ಎಂದು ಅವರು ಟೀಕಿಸಿದರು.
ಲವ್ ಜಿಹಾದ್ ಕುರಿತಂತೆ ಜಾರ್ಜ್ ಎಂ.ಥಾಮಸ್ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಜಾರ್ಜ್ ಎಂ.ಥಾಮಸ್ ಹೇಳಿಕೆ ಪಕ್ಷದ ನಿಲುವಿಗೆ ವಿರುದ್ಧವಾಗಿದೆ ಎಂದು ಕೊಡಿಯೇರಿ ಹೇಳಿದರು.