ಮಧೂರು: ಭÀಕ್ತಿಯಿಂದ ಭಗವಂತನಿಗೆ ನೀಡಿದೆಲ್ಲವೂ ಭಗವಂತ ಇಮ್ಮಡಿಯಾಗಿ ನಮಗೇ ಕರುಣಿಸುತ್ತಾನೆ. ಭಕ್ತಿ, ಶ್ರದ್ಧೆಯಿಂದ ಭಗವಂತನ ಸೇವೆಯಲ್ಲಿ ತೊಡಗಿಸಿಕೊಳ್ಳುವುದರಿಂದ ನಮ್ಮ ಜೀವನ ಪಾವನವಾಗುತ್ತದೆ ಎಂದು ಕೊಂಡೆವೂರು ನಿತ್ಯಾನಂದ ಯೋಗಾಶ್ರಮದ ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿ ಹೇಳಿದರು.
ಅವರು ಮಧೂರು ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ದೇವಸ್ಥಾನದ ನವೀಕರಣ ಸಮಿತಿಯ ನೇತೃತ್ವದಲ್ಲಿ ಮಧೂರು ದೇವಸ್ಥಾನದ ಕಲ್ಯಾಣ ಮಂಟಪದಲ್ಲಿ ಜರಗಿದ ರಾಜಗೋಪುರಗಳ ನಿಧಿ ಸಂಗ್ರಹಣಾ ಅಭಿಯಾನವನ್ನು ಉದ್ಘಾಟಿಸಿ ಆಶೀರ್ವಚನ ನೀಡಿದರು.
ಮಧೂರು ದೇವಸ್ಥಾನ ನವೀಕರಣ ಸಮಿತಿಯ ಉಪಾಧ್ಯಕ್ಷ ಡಾ.ಬಿ.ಎಸ್.ರಾವ್ ಸಭೆಯ ಅಧ್ಯಕ್ಷತೆ ವಹಿಸಿದರು. ಹಿರಿಯ ಉದ್ಯಮಿ ಸದಾಶಿವ ಶೆಟ್ಟಿ ಕುಳೂರು ಕನ್ಯಾನ, ನಿವೃತ್ತ ಬಿ.ಎಸ್.ಎನ್.ಎಲ್. ಉದ್ಯೋಗಿ ಎ.ಕೆ.ಮಣಿಯಾಣಿ, ಡಾ.ಜಯಪ್ರಕಾಶ್ ತೊಟ್ಟೆತ್ತೋಡಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು.
ಯೋಗಾಚಾರ್ಯ ಪುಂಡರೀಕಾಕ್ಷ ಬೆಳ್ಳೂರು, ರಾಜಗೋಪುರ ಸಮಿತಿಯ ಉಪಾಧ್ಯಕ್ಷ ಮಧುಸೂದನ ಅಯಾರ್, ವಾಮನ್ ರಾವ್ ಬೇಕಲ್ ಶುಭಹಾರೈಸಿದರು. ನವೀಕರಣ ಸಮಿತಿಯ ಪ್ರಧಾನ ಕಾರ್ಯದರ್ಶಿ ಜಯದೇವ ಖಂಡಿಗೆ ಪ್ರಾಸ್ತಾವಿಕವಾಗಿ ಮಾತನಾಡಿದರು.
ಮಧೂರು ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಎಂ.ಬಾಬು, ಕ್ಷೇತ್ರ ಸಂರಕ್ಷಣಾ ಸಮಿತಿ ರಾಜ್ಯ ಕಾರ್ಯಕಾರಿ ಸದಸ್ಯ ಅಪ್ಪಯ್ಯ ನಾೈಕ್ ಮಧೂರು, ನವೀಕರಣ ಸಮಿತಿಯ ಕಾರ್ಯದರ್ಶಿ ಮುರಳಿ ಗಟ್ಟಿ, ನಿವೃತ್ತ ಎ.ಡಿ.ಎಂ. ವಿದ್ಯಾರತ್ನ, ನವೀಕರಣ ಸಮಿತಿಯ ಮಂಜುನಾಥ ಕಾಮತ್, ಸುರೇಶ್ ನಾೈಕ್, ಎ.ಮನೋಹರ್, ಪ್ರಭಾಶಂಕರ ಮಧೂರು, ಗಿರೀಶ್, ಸಂತೋಷ್ ಮಧೂರು ಮೊದಲಾದವರು ಉಪಸ್ಥಿತರಿದ್ದರು.
ರಾಜಗೋಪುರ ಸಮಿತಿಯ ಅಧ್ಯಕ್ಷ ನ್ಯಾಯವಾದಿ ಅನಂತರಾಮ ಸ್ವಾಗತಿಸಿ, ಕಾರ್ಯದರ್ಶಿ ರವೀಂದ್ರ ರೈ ಸಿರಿಬಾಗಿಲು ವಂದಿಸಿದರು. ಕೆ.ಜಗದೀಶ್ ಕೂಡ್ಲು ಕಾರ್ಯಕ್ರಮ ನಿರೂಪಿಸಿದರು.