HEALTH TIPS

ದೇಶದಲ್ಲಿ ಹಾಲು ಉತ್ಪಾದಕರಿಗೆ ಪ್ರತ್ಯೇಕ ಬ್ಯಾಂಕ್ ಸ್ಥಾಪನೆ, ಕ್ರೆಡಿಟ್ ಕಾರ್ಡ್ ನೀಡಲು ಯೋಜನೆ- ಅಮಿತ್ ಶಾ

             ಬೆಂಗಳೂರು: ದೇಶದಲ್ಲಿ ಹಾಲು ಉತ್ಪಾದಕರಿಗೆ ಪ್ರತ್ಯೇಕ ಬ್ಯಾಂಕ್ ಸ್ಥಾಪನೆ ಹಾಗೂ ಪ್ರತ್ಯೇಕ ಕ್ರೆಡಿಟ್ ಕಾರ್ಡ್ ನೀಡಲು ಯೋಜನೆ ರೂಪಿಸಲಾಗುತ್ತಿದೆ ಎಂದು ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಅಮಿತ್ ಶಾ ಹೇಳಿದ್ದಾರೆ.

            ಅರಮನೆ ಅವರಣದಲ್ಲಿ ಇಂದು ಆಯೋಜಿಸಲಾಗಿದ್ದ ಸಹಕಾರ ಸಮ್ಮೇಳನದಲ್ಲಿ ಮಾತನಾಡಿದ ಅಮಿತ್ ಶಾ, ಸಹಕಾರ ಕ್ಷೇತ್ರದಲ್ಲಿ ಪಾರದರ್ಶಕತೆ ತರಲು ಎಲ್ಲಾ ರೀತಿಯ ಪ್ರಯತ್ನ ಮಾಡಲಾಗುತ್ತಿದೆ. ಹಾಲು ಉತ್ಪಾದಕರಿಗೆ ಪ್ರತ್ಯೇಕ ಬ್ಯಾಂಕ್ ಸ್ಥಾಪನೆ ಹಾಗೂ ಪ್ರತ್ಯೇಕ ಕ್ರೆಡಿಟ್ ಕಾರ್ಡ್ ನೀಡುವುದರಿಂದ ಹಾಲು ಉತ್ಪಾದಕರ ಸಮಗ್ರ ಅಭಿವೃದ್ಧಿಗೆ ಅನುಕೂಲವಾಗಲಿದೆ ಎಂದರು.

             ಸಹಕಾರ ಕ್ಷೇತ್ರದಲ್ಲಿ ಕರ್ನಾಟಕ ಎ ಗ್ರೇಡ್ ಹೊಂದಿದೆ. ಕರ್ನಾಟಕ ಸಹಕಾರ ಕ್ಷೇತ್ರ ಐತಿಹಾಸಿಕವಾಗಿದೆ. ಕರ್ನಾಟಕಕ್ಕೆ ಬಂದಾಗಲೆಲ್ಲ ಸಹಕಾರ ಮೂಲ ಪುರುಷ ಗದಗ ಜಿಲ್ಲೆಯ ಸಿದ್ದನಗೌಡ ಸಂಗನಗೌಡ ಪಾಟೀರನ್ನು ನೆನಪಿಸುತ್ತೇನೆ.  ಸಹಕಾರ ಸೌಹಾರ್ದ ಕೋ ಆಪರೇಟಿವ್ ಬ್ಯಾಂಕ್ ಕಟ್ಟಡ ಉದ್ಘಾಟಿಸಲಾಗಿದೆ. ನಂದಿನಿ 17, 000 ಕೋಟಿ ವ್ಯವಹಾರ ಮಾಡಿ ದೊಡ್ಡ ಸಂಸ್ಥೆಯಾಗಿದೆ ಬೆಳೆಯಲಿದೆ. ಮುಂಬರುವ ದಿನಗಳಲ್ಲಿ ಸಹಕಾರಿ ಕ್ಷೇತ್ರ ದೊಡ್ಡ ಮಟ್ಟದಲ್ಲಿ ಬೆಳೆಯಲಿದೆ ಎಂಬ ಆಶಯ ವ್ಯಕ್ತಪಡಿಸಿದರು.

          ಇದು ಸ್ವಾತಂತ್ರೋತ್ಸವದ ಅಮೃತ ಮಹೋತ್ಸವ ವರ್ಷವಾಗಿದ್ದು, 100 ವರ್ಷಗಳವರೆಗೆ ಅಮೃತ ಘಳಿಗೆ ಎಂದು ಆಚರಿಸಲಾಗುತ್ತದೆ. ದೇಶದ ಸ್ವಾತಂತ್ರೋತ್ಸವಕ್ಕೆ 100 ವರ್ಷ ತುಂಬಿದಾಗ ಕರ್ನಾಟಕದ ಪ್ರತಿಯೊಂದು ಗ್ರಾಮದಲ್ಲಿ ಸಹಕಾರ ಬ್ಯಾಂಕ್ ಇರುವಂತೆ ನೋಡಿಕೊಳ್ಳಲಾಗುವುದು, ಸಹಕಾರ ಕ್ಷೇತ್ರದಲ್ಲಿ ಹಾಲು ಉತ್ಪಾದನೆ, ಮೀನು ಸಾಕಾಣಿಕೆಯನ್ನು ಪ್ರೋತ್ಸಾಹಿಸಲಾಗುವುದು ಎಂದು ಅವರು ತಿಳಿಸಿದರು.

           ಸಹಕಾರ ಇಲಾಖೆಗೆ ಕೇಂದ್ರದ ಹಣಕಾಸು ಸಚಿವರು 900 ಕೋಟಿ ರೂ. ನೀಡಿದ್ದಾರೆ. ದೇಶದ 63 ಸಾವಿರ ಪ್ಯಾಕ್ಸ್ ಗಳನ್ನು ಕಂಪ್ಯೂಟರೀಕರಣ ಮಾಡಲು ತೀರ್ಮಾನಿಸಲಾಗಿದ್ದು, ಎಲ್ಲ ಪ್ರಾದೇಶಿಕ ಭಾಷೆಗಳಲ್ಲಿ ಜಾರಿಗೆ ತರುತ್ತೇವೆ ಎಂದು ಅವರು ಹೇಳಿದರು. 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries