ಮುಂಬೈ: ಮಸೀದಿಗಳ ಮೇಲೆ ಅಳವಡಿಸಿರುವ ಧ್ವನಿವರ್ಧಕಗಳ ವಿವಾದಕ್ಕೆ ಸಂಬಂಧಿಸಿದಂತೆ ತಾವು ಮೇ 3ರ ಬಳಿಕ ಮುಂದಿನ ನಿರ್ಧಾರ ಕೈಗೊಳ್ಳುವುದಾಗಿ ಮಹಾರಾಷ್ಟ್ರ ನವನಿರ್ಮಾಣ ಸೇನೆ ಮುಖ್ಯಸ್ಥ ರಾಜ್ ಠಾಕ್ರೆ ಹೇಳಿದ್ದಾರೆ.
ಈ ಕುರಿತು ಎಎನ್ಐ ಸುದ್ದಿಸಂಸ್ಥೆಯೊಂದಿಗೆ ಮಾತನಾಡಿರುವ ಠಾಕ್ರೆ, ಧ್ವನಿವರ್ಧಕ ವಿವಾದಕ್ಕೆ ಸಂಬಂಧಿಸಿದಂತೆ ರಾಜ್ಯದಲ್ಲಿ ಗಲಭೆಗಳನ್ನು ನಾವು ಬಯಸುವುದಿಲ್ಲ ಮತ್ತು ಮೇ 3 ರ ನಂತರ ಏನು ಮಾಡಬೇಕೆಂದು ನಿರ್ಧರಿಸುತ್ತೇವೆ ಎಂದು ಹೇಳಿದ್ದಾರೆ.
'ನಮಗೆ ಮಹಾರಾಷ್ಟ್ರದಲ್ಲಿ ಗಲಭೆಗಳು ಬೇಡ, ನಾವು ಯಾರೂ ಪ್ರಾರ್ಥನೆಯನ್ನು ವಿರೋಧಿಸಿಲ್ಲ. ಆದರೆ ನೀವು (ಮುಸ್ಲಿಮರು) ಧ್ವನಿವರ್ಧಕದಲ್ಲಿ ಅದನ್ನು ಮಾಡಿದರೆ, ನಾವು ಅದಕ್ಕೆ ದೇಗುಲಗಳಲ್ಲಿ ಧ್ವನಿವರ್ಧಕಗಳನ್ನು ಬಳಸುತ್ತೇವೆ. ಕಾನೂನಿಗಿಂತ ಧರ್ಮ ದೊಡ್ಡದಲ್ಲ ಎಂಬುದನ್ನು ಮುಸ್ಲಿಮರು ಅರ್ಥಮಾಡಿಕೊಳ್ಳಬೇಕು ಎಂದು ಹೇಳಿದರು.
ಅಂತೆಯೇ ಮೇ 3 ರ ನಂತರ, ನಾನು ಏನು ಮಾಡಬೇಕೆಂದು ನೋಡುತ್ತೇನೆ ಎಂದು ಠಾಕ್ರೆ ಹೇಳಿದರು.