HEALTH TIPS

ಐಎನ್‍ಟಿಯುಸಿ ಹಾಗೂ ವಿಡಿ ಸತೀಶನ್ ಜೊತೆಗಿನ ಬಗೆಹರಿದ ವಿವಾದ : ಪ್ರತಿಭಟನಾಕಾರರ ವಿರುದ್ಧ ಕ್ರಮ: ವಿ.ಡಿ.ಸತೀಶನ್

                                

                ತಿರುವನಂತಪುರ: ಐಎನ್‍ಟಿಯುಸಿ ಸಮಸ್ಯೆ ಬಗೆಹರಿದಿದೆ ಎಂದು ಕೆಪಿಸಿಸಿ ಅಧ್ಯಕ್ಷ ಕೆ.ಸುಧಾಕರನ್ ಹೇಳಿದ್ದಾರೆ. ಐಎನ್‍ಟಿಯುಸಿ ಕಾಂಗ್ರೆಸ್‍ನ ಅವಿಭಾಜ್ಯ ಅಂಗವಾಗಿದ್ದು, ಫೆಡರೇಶನ್‍ಗಿಂತ ಅದರ ಸ್ಥಾನ ಶ್ರೇಷ್ಠವಾಗಿದೆ ಎಂದರು.

             ಎಲ್ಲ ಸಮಸ್ಯೆಗಳನ್ನು ಚರ್ಚೆಯ ಮೂಲಕ ಬಗೆಹರಿಸಿಕೊಳ್ಳಲಾಗಿದೆ ಎಂದರು. ಐಎನ್‍ಟಿಯುಸಿ ಅಧ್ಯಕ್ಷರು ಕಾಂಗ್ರೆಸ್‍ನ ಭಾಗವಾಗಿರುವ ಸಂಸ್ಥೆಗಳಿಂದ ಕಾಂಗ್ರೆಸ್ ಕಾರ್ಯಕಾರಿ ಸಮಿತಿಯ ಏಕೈಕ ಸದಸ್ಯರಾಗಿದ್ದಾರೆ. ಇದು ಅವರಿಗೆ ಕಾಂಗ್ರೆಸ್ ಕೊಡುತ್ತಿರುವ ಮಹತ್ವವನ್ನು ತೋರಿಸುತ್ತದೆ ಎಂದು ತಿಳಿಸಿದರು.

                ಕೇರಳವೊಂದರಲ್ಲೇ ಐಎನ್‍ಟಿಯುಸಿ 17 ಲಕ್ಷ ಕಾರ್ಯಕರ್ತರನ್ನು ಹೊಂದಿದ್ದು, ಅವರಿಲ್ಲದೆ ಕಾಂಗ್ರೆಸ್ ಮುಂದುವರಿಯಲು ಸಾಧ್ಯವಿಲ್ಲ ಮತ್ತು ಪಕ್ಷದಲ್ಲಿ ಅಂತಹ ಚಿಂತನೆ ಇಲ್ಲ ಎಂದು ಅವರು ಹೇಳಿದರು. ವಿವಾದಗಳು ಮಾಧ್ಯಮಗಳ ಕೆಲಸ ಎಂದು ಆರೋಪಿಸಿದರು. ಪ್ರತಿಪಕ್ಷ ನಾಯಕನ ವಿರುದ್ಧ ಪ್ರತಿಭಟನೆ ನಡೆಸಿದವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದರು.

              ಐಎನ್‍ಟಿಯುಸಿ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಪಿ.ಪಿ.ಥಾಮಸ್ ನೇತೃತ್ವದಲ್ಲಿ ಮೊನ್ನೆ ಚಂಗನಾಶ್ಶೇರಿಯಲ್ಲಿ ವಿ.ಡಿ.ಸತೀಶನವರ ಹೇಳಿಕೆಯನ್ನು ವಿರೋಧಿಸಿ ಪ್ರತಿಭಟನೆ ನಡೆಸಲಾಯಿತು.ಪ್ರದರ್ಶನದಲ್ಲಿ ವಿ.ಡಿ.ಸತೀಶನ ವಿರುದ್ಧ ಘೋಷಣೆ ಮೊಳಗಿತು. ಐಎನ್‍ಟಿಯುಸಿಯ ಸಾರ್ವಜನಿಕ ಪ್ರತಿಭಟನೆಯ ಕುರಿತು ಚರ್ಚಿಸಿದ ನಂತರ ಒಮ್ಮತದ ಚರ್ಚೆಗಾಗಿ ಕೆ ಸುಧಾಕರನ್ ಐಎನ್‍ಟಿಯುಸಿ ಅಧ್ಯಕ್ಷ ಮತ್ತು ವಿಡಿ ಸತೀಶನನ್ನು ಭೇಟಿ ಮಾಡಿದರು.

                ರಾಷ್ಟ್ರೀಯ ಮುಷ್ಕರಕ್ಕೆ ಪ್ರತಿಕ್ರಿಯೆಯಾಗಿ ವಿಡಿ ಸತೀಶನ್ ಮೊನ್ನೆ ಐಎನ್‍ಟಿಯುಸಿಯನ್ನು ಉಲ್ಲೇಖಿಸಿದ್ದಾರೆ. ಮುಷ್ಕರದ ಭಾಗವಾಗಿ ಹಿಂಸಾಚಾರದಲ್ಲಿ ಕಾಂಗ್ರೆಸಿಗರು ಭಾಗಿಯಾಗಿದ್ದರೆ ಕ್ರಮ ಕೈಗೊಳ್ಳಲಾಗುವುದು ಎಂದು ವಿ.ಡಿ.ಸತೀಶನ್ ಹೇಳಿದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries