ಕಾಸರಗೋಡು: ಜನರನ್ನು ಕೃಷಿಯತ್ತ ಆಕರ್ಷಿಸಲು ಹಾಗೂ ಸುರಕ್ಷಿತ ಆಹಾರ ಖಚಿತಪಡಿಸುವ ನಿಟ್ಟಿನಲ್ಲಿ ಕೃಷಿ ಇಲಾಖೆಯು ಮುಖ್ಯಮಂತ್ರಿಗಳ 100 ದಿನದ ಕ್ರಿಯಾ ಯೋಜನೆ ಪ್ರಕಾರ 'ನಾವೂ ಕೃಷಿಗೆ ತೆರಳುತ್ತೇವೆ'ಕಾರ್ಯಕ್ರಮದನ್ವಯ ತರಕಾರಿ ಬೀಜಗಳ ವಿತರಣೆ ಉದುಮ ಗ್ರಾಮ ಪಂಚಾಯಿತಿಯಲ್ಲಿ ಜರುಗಿತು.
ಉದುಮ ಕೃಷಿ ಭವನದಲ್ಲಿ ನಡೆದ ಸಮಾರಂಭವನ್ನು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪಿ.ಲಕ್ಷ್ಮಿ ಉದ್ಘಾಟಿಸಿದರು. ಕೃಷಿ ಅಧಿಕಾರಿ ಕೆ.ನಾನು ಕುಟ್ಟನ್ ಯೋಜನೆ ಬಗ್ಗೆ ಮಾಹಿತಿ ನೀಡಿದರು. ಸ್ಥಾಯಿ ಸಮಿತಿ ಅಧ್ಯಕ್ಷ ಸುಧಾಕರನ್, ಬ್ಲಾಕ್ ಪಂಚಾಯಿತಿ ಸದಸ್ಯ ಕೆ.ವಿ.ರಾಜೇಂದ್ರನ್, ಸದಸ್ಯರಾದ ಚಂದ್ರನ್, ಪಿ.ಆರ್.ಪುಷ್ಪಾವತಿ, ನೆಬಿಸಾ ಪಾಕ್ಯಾರಾಮ್, ಕೆ.ವಿನಯಕುಮಾರ್, ಎ.ಸುನೀಲ್ಕುಮಾರ್, ಕೃಷಿ ಸಹಾಯಕ ಎಂ.ಗೋಪಿನಾಥನ್ ನಾಯರ್ ಉಪಸ್ಥಿತರಿದ್ದರು.