ನವದೆಹಲಿ: ದಕ್ಷಿಣ ದೆಹಲಿಯ ‘ಮಹಮ್ಮದ್ ಪುರ’ ಗ್ರಾಮವನ್ನು ‘ಮಾಧವಪುರಂ’ ಎಂದು ಮರುನಾಮಕರಣ ಮಾಡಲಾಗಿದೆ ಎಂದು ದೆಹಲಿ ಬಿಜೆಪಿ ನಾಯಕರು ಬುಧವಾರ ಘೋಷಿಸಿದ್ದಾರೆ.
ಮುನ್ಸಿಪಲ್ ಕಾರ್ಪೊರೇಷನ್ ಪ್ರಸ್ತಾವನೆಯನ್ನು ಅಂಗೀಕರಿಸಿದ ನಂತರ ಇಂದು ಮಾಧವಪುರದ ನಾಮಕರಣ ಪ್ರಕ್ರಿಯೆಯನ್ನು ಪೂರ್ಣಗೊಳಿಸಲಾಗಿದೆ ಎಂದು ದೆಹಲಿ ಘಟಕದ ಅಧ್ಯಕ್ಷ ಆದೇಶ್ ಗುಪ್ತಾ ಹೇಳಿದ್ದಾರೆ.
ಈಗ ಈ ಗ್ರಾಮವನ್ನು ಮಹಮ್ಮದ್ ಪುರದ ಬದಲಿಗೆ ಮಾಧವಪುರಂ ಎಂದು ಕರೆಯಲಾಗುವುದು. 75 ವರ್ಷಗಳ ಸ್ವಾತಂತ್ರ್ಯದ ಹೊರತಾಗಿಯೂ ಯಾವುದೇ ದೆಹಲಿಯ ಜನರು ಗುಲಾಮಗಿರಿಯ ಯಾವುದೇ ಸಂಕೇತದೊಂದಿಗೆ ಸಂಬಂಧ ಹೊಂದಲು ಬಯಸುವುದಿಲ್ಲ ಎಂದು ಗುಪ್ತಾ ತಿಳಿಸಿದ್ದಾರೆ.
‘ಮಹಮ್ಮದ್‌ಪುರ’ ಹೆಸರನ್ನು ‘ಮಾಧವಪುರಂ’ ಎಂದು ಬದಲಾಯಿಸುವ ಪ್ರಸ್ತಾವನೆಯನ್ನು ಅಂಗೀಕರಿಸಿ ಕಳೆದ ವರ್ಷ ಡಿಸೆಂಬರ್‌ನಲ್ಲಿ ದೆಹಲಿ ಸರ್ಕಾರಕ್ಕೆ ಕಳುಹಿಸಲಾಗಿತ್ತು.
ಕಳೆದ ವಾರ, ದೆಹಲಿ ಬಿಜೆಪಿ ಕೂಡ ಕೇಜ್ರಿವಾಲ್ ಸರ್ಕಾರಕ್ಕೆ ಪ್ರಸ್ತಾವನೆಯನ್ನು ಕಳುಹಿಸುವುದಾಗಿ ಹೇಳಿತ್ತು, ನಗರದ 40 ಹಳ್ಳಿಗಳ ಹೆಸರುಗಳು ಗುಲಾಮಗಿರಿಯನ್ನು ಸಂಕೇತಿಸುತ್ತಿದ್ದು, ಅವುಗಳ ಹೆಸರು ಬದಲಾಯಿಸಬೇಕೆಂದು ಒತ್ತಾಯಿಸಿದ್ದರು.