HEALTH TIPS

ನಾಗ ಪ್ರತಿಷ್ಠಾ ವಾರ್ಷಿಕೋತ್ಸವ ಮತ್ತು ಉಚಿತ ಆರೋಗ್ಯ ಶಿಬಿರ


                ಮುಳ್ಳೇರಿಯ: ದೇಲಂಪಾಡಿ ಮುದಿಯಾರಿನ ಶ್ರೀ ನಾಗೇಂದ್ರ ಸನ್ನಿಧಿಯಲ್ಲಿ 11 ನೇ ವರ್ಷದ ವಾರ್ಷಿಕ ಧಾರ್ಮಿಕ ಕಾರ್ಯಕ್ರಮ ಮತ್ತು ಒಂಬತ್ತನೆಯ ವರ್ಷದ ಉಚಿತ ಆರೋಗ್ಯ ಮಾಹಿತಿ ಮತ್ತು ವೈದ್ಯಕೀಯ ಶಿಬಿರವು ಜರಗಿತು. ಮುದಿಯಾರು ಮನೆಯವರಾದ ಬಾಯಾರು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಪ್ರಭಾಕರ ರೈ ಯವರು ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಮುದಿಯಾರು ದಿ. ನಾರಾಯಣ ರೈ, ರಾಮಯ್ಯ ರೈ, ಮುತ್ತಣ್ಣ ರೈ ಮತ್ತು ನೇಮಿರಾಜ ರೈಯವರ ಸ್ಮರಣಾರ್ಥವಾಗಿ ಆಯೋಜಿಸಿದ ಈ ಶಿಬಿರದ ಉದ್ಘಾಟನೆಯನ್ನು ಡಾ. ಪ್ರಭಾಕರ ರೈಯವರ ಮಾತೃಶ್ರೀ ಸರಸ್ವತಿ ನಾರಾಯಣ ರೈಯವರು ದೀಪ ಬೆಳಗಿಸುವುದರ ಮೂಲಕ ನೆರವೇರಿಸಿದರು. ಈ ವರ್ಷ ಪ್ರತ್ಯೇಕವಾಗಿ ಅಸ್ತಮಾ ಹಾಗೂ ಝೀಕಾ ವೈರಸ್ ಬಗ್ಗೆ ಮಾಹಿತಿ, ಅಲೋಪಥಿ ಮತ್ತು ಆಯುರ್ವೇದ ವಿಭಾಗಗಳಲ್ಲಿ ಶಿಬಿರವನ್ನು ಆಯೋಜಿಸಲಾಗಿತ್ತು. 

                    ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ದೇಲಂಪಾಡಿ ಒಕ್ಕೂಟದ ಅಧ್ಯಕ್ಷ ಎಂ ಸಂಜೀವ ರೈ ಅಧ್ಯಕ್ಷತೆಯನ್ನು ವಹಿಸಿದ್ದರು. ದೇಲಂಪಾಡಿ ಶ್ರೀ ರಾಮ ಭಜನಾ ಮಂದಿರದ ಗೌರವಾಧ್ಯಕ್ಷ ಬೆಳ್ಳಿಪಾಡಿ ಬಾಲಕೃಷ್ಣ ಗೌಡ ದೇಲಂಪಾಡಿ ಮತ್ತು ಡಾ. ರಂಜಿತ್ ಶೆಟ್ಟಿ ಮಂಗಳೂರು ಇವರು ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು. ಪ್ರಾಸ್ತಾವಿಕವಾಗಿ ಮಾತನಾಡಿದ  ನಾರಾಯಣ ದೇಲಂಪಾಡಿಯವರು ಧಾರ್ಮಿಕ ಆಚರಣೆಗಳ ಮಹತ್ವ ಮತ್ತು ಆಧುನಿಕತೆಯ ಭರಾಟೆಯಲ್ಲಿ ಕಳೆದು ಹೋಗುತ್ತಿರುವ ನಮ್ಮ ಸಂಸ್ಕೃತಿ ಆಚಾರ ವಿಚಾರಗಳನ್ನು ನಮ್ಮ ಮಕ್ಕಳಿಗೂ ತಿಳಿಸಿಕೊಡಬೇಕಾದ ಅಗತ್ಯತೆ ಮತ್ತು ರೀತಿಗಳ ಬಗ್ಗೆ ಹೇಳಿದರು. ಹಳ್ಳಿ ಪ್ರದೇಶದಲ್ಲಿ ಕಲಿತ ಡಾ. ಪ್ರಭಾಕರ ರೈಯವರು ತನ್ನ ಊರಿನ ಜನರಿಗಾಗಿ ಪ್ರತಿ ವರ್ಷ ಹಮ್ಮಿಕೊಳ್ಳುವ ಈ ಆರೋಗ್ಯ ಶಿಬಿರವು ತನ್ನ ಊರಿನ ಜನರ ಮೇಲೆ ಅವರಿಗಿರುವ ಪ್ರೀತಿ ಮತ್ತು ಅಭಿಮಾನವನ್ನು ಎತ್ತಿ ತೋರಿಸುತ್ತದೆ. ಯಾವನೇ ವ್ಯಕ್ತಿ ಎಷ್ಟೇ ಉನ್ನತ ಹ0ತಕ್ಕೆ ಏರಿದರೂ ತನ್ನ ಊರನ್ನು ಮತ್ತು ಊರಿನ ಜನರನ್ನು ಮರೆಯಬಾರದು. ಈ ನಿಟ್ಟಿನಲ್ಲಿ ಪ್ರಭಾಕರ ರೈಯವರು ಆದರ್ಶಪ್ರಾಯರು ಎ0ದರು. ವೈಶಾಲಿ ರಂಜಿತ್ ಶೆಟ್ಟಿ ಮಂಗಳೂರು ವಂದಿಸಿದರು.  ಶಿಬಿರದಲ್ಲಿ ಅಲೋಪಥಿ ಮತ್ತು ಆಯುರ್ವೇದ ವಿಭಾಗಗಳಲ್ಲಿ 100ಕ್ಕಿಂತಲೂ ಹೆಚ್ಚು ಜನರನ್ನು ತಪಾಸಣೆ ಮಾಡಿ ಅವರಿಗೆ ಉಚಿತವಾಗಿ ಔಷಧಿಗಳನ್ನು ವಿತರಿಸಲಾಯಿತು. ಊಜಂಪಾಡಿ ಮಣಿಯೂರು ತ್ರಿವಿಕ್ರಮ ಮನೋಳಿತ್ತಾಯರು ವೈದಿಕ ಕಾರ್ಯಕ್ರಮದ ನೇತೃತ್ವವನ್ನು ವಹಿಸಿದ್ದರು. ಎಂ ರಾಧಾಕೃಷ್ಣ ರೈ,  ಎಂ ಚಂದ್ರಶೇಖರ ರೈ, ಎಂ ರಮಾನಂದ ರೈ, ಎಂ ಸುಧಾಕರ ರೈ,  ಸುಮಲತ ರೈ ಮತ್ತು ಪದ್ಮಾವತಿ ರೈ ವಿವಿಧ ವಿಭಾಗಗಳಲ್ಲಿ ಸಹಕರಿಸಿದರು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries