ಕುಂಬಳೆ: 2021-22 ನೇ ಸಾಲಿನ ಭರತನಾಟ್ಯ ವಿದ್ವತ್ ಅಂತಿಮ ಪರೀಕ್ಷೆಯಲ್ಲಿ 441 (88 ಶೇ.) ಅಂಕಗಳೊಂದಿಗೆ ಶ್ರೀಮತಿ ಶ್ರೀಪಂಚಮಿ ನೇರೊಳು ಮಂಗಳೂರು ವಿಭಾಗಕ್ಕೆ ಪ್ರಥಮ ಸ್ಥಾನ ವನ್ನು ಪಡೆದಿದ್ದಾರೆ. ನಾಟ್ಯ ವಿದ್ಯಾನಿಲಯ ಕುಂಬಳೆ ಇದರ ನೃತ್ಯ ನಿರ್ದೇಶಕಿಯಾದ ವಿದುಷಿ ವಿದ್ಯಾಲಕ್ಷ್ಮಿ ಕುಂಬ್ಳೆ ಇವರ ಶಿಷ್ಯೆ ಹಾಗೂ,ಧರ್ಮತಡ್ಕ ಶ್ರೀ ದುರ್ಗಾಪರಮೇಶ್ವರಿ ಉನ್ನತ ಪ್ರೌಢಶಾಲಾ ಪ್ರಾಂಶುಪಾಲ ರಾಮಚಂದ್ರ ಭಟ್ ಮತ್ತು ವಿದ್ಯಾ ಸರಸ್ವತಿ ಟೀಚರ್ ಇವರ ಪುತ್ರಿಯಾದ ಈಕೆ ನಿರಂಜನ್ ಎಡಪ್ಪಾಡಿ ಅವರ ಧರ್ಮಪತ್ನಿಯಾಗಿದ್ದಾರೆ.