HEALTH TIPS

ಬಿಟ್-ಕಾಯಿನ್ ಹಗರಣದ ತನಿಖೆಗಾಗಿ ಅಮೆರಿಕದ ಎಫ್‌ ಬಿಐ ತಂಡ ಆಗಮಿಸಿಲ್ಲ: ಸಿಬಿಐ ಸ್ಪಷ್ಟನೆ

            ಕರ್ನಾಟಕದ ರಾಜಕೀಯ ವಲಯದಲ್ಲಿ ಕೋಲಾಹಲ ಸೃಷ್ಟಿಸಿದ ಬಿಟ್-ಕಾಯಿನ್ ಹಗರಣದ ತನಿಖೆಗಾಗಿ ಅಮೆರಿಕದ ಫೆಡರಲ್ ತನಿಖಾ ದಳ (ಎಫ್ಬಿಐ)ದ ಯಾವುದೇ ತಂಡ ಭಾರತಕ್ಕೆ ಆಗಮಿಸಿಲ್ಲವೆಂದು ಕೇಂದ್ರೀಯ ತನಿಖಾ ಸಂಸ್ಥೆ (ಸಿಬಿಐ) ರವಿವಾರ ಸ್ಪಷ್ಟಪಡಿಸಿದೆ. ಬಿಟ್-ಕಾಯಿನ್ ಹಗರಣಕ್ಕೆ ಸಂಬಂಧಿ ತನಿಖೆ ನಡೆಸಲು ಅಮೆರಿಕದ ಎಫ್ಬಿಐ ತನಿಖಾ ದಳವು ಭಾರತಕ್ಕೆ ಆಗಮಿಸಲಿದೆಯೆಂಬ ಮಾಧ್ಯಮಗಳಲ್ಲಿ ಪ್ರಕಟವಾದ ವರದಿಗಳು ಹಾಗೂ ಕಾಂಗ್ರೆಸ್ ನಾಯಕರ ಹೇಳಿಕೆಯ ಹಿನ್ನೆಲೆಯಲ್ಲಿ ಸಿಬಿಐ ಈ ಸ್ಟಷ್ಟನೆ ನೀಡಿದೆ.

           'ಬಿಟ್-ಕಾಯಿನ್ ಪ್ರಕರಣದ ತನಿಖೆಗಾಗಿ ಎಫ್ಬಿಐ ಭಾರತಕ್ಕೆ ಯಾವುದೇ ತಂಡವನ್ನು ಕಳುಹಿಸಿಲ್ಲ ಅಥವಾ ಭಾರತದಲ್ಲಿ ಈ ವಿಷಯವಾಗಿ ತನಿಖೆ ನಡೆಸುವಂತೆ ಸಿಬಿಐಗೆ ಯಾವುದೇ ಮನವಿಯನ್ನಾಗಲಿ ಮಾಡಿಲ್ಲವೆ. ಅದುದರಿಂದ ಪ್ರಕರಣದ ಬಗ್ಗೆ ತನಿಖೆ ನಡೆಸಲು ಭಾರತದ ಯಾವುದೇ ಇಲಾಖೆಯಿಂದ ಎಫ್ಬಿಐಗೆ ಅನುಮತಿ ನೀಡುವ ಪ್ರಶ್ನೆಯೇ ಉದ್ಭವಿಸುವುದಿಲ್ಲ' ಎಂದು ಕೇಂದ್ರೀಯ ತನಿಖಾ ಸಂಸ್ಥೆ ಹೇಳಿಕೆಯಲ್ಲಿ ತಿಳಿಸಿದೆ.

           ಕರ್ನಾಟಕದ ರಾಜಕೀಯ ವಲಯದಲ್ಲಿ ಭಾರೀ ಸಂಚಲನ ಸೃಷ್ಟಿಸಿದ್ದ ಬಿಟ್-ಕಾಯಿನ್ ಹಗರಣದ ಬಗ್ಗೆ ಎಫ್ಬಿಐ ತನಿಖೆ ನಡೆಸುತ್ತಿದೆಯೆಂದು ಎಂದು ಕಾಂಗ್ರೆಸ್ ನಾಯಕರು ಹೇಳಿಕೆ ನೀಡಿದ ಬೆನ್ನಲ್ಲೇ ಸಿಬಿಐ ಈ ಸ್ಪಷ್ಟೀಕರಣ ನೀಡಿದೆ. ಈ ಹಗರಣದಲ್ಲಿ ಶುದ್ಧಹಸ್ತರಾಗಿ ಹೊರಬರುವಂತೆಯೇ ಅವರು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರಿಗೆ ಸವಾಲೊಡ್ಡಿದ್ದರು. 2020ರಲ್ಲಿ ಡ್ರಗ್ಸ್ ಜಾಲ ಪ್ರಕರಠಣದಲ್ಲಿ ಬಂಧಿತನಾಗಿದ್ದ ಶ್ರೀಕೃಷ್ಣ ರಮೇಶ್ ಯಾನೆ ಶ್ರೀಕಿಯು ಬಿಟ್-ಕಾಯಿನ್ ಹಗರಣದ ರೂವಾರಿಯೆನ್ನಲಾಗಿದೆ. ಶ್ರೀಕಿ ಓರ್ವ ಹ್ಯಾಕರ್ ಆಗಿದ್ದು, ಹಲವಾರು ಅನ್ಲೈನ್ ಅಪರಾಧಗಳನ್ನು ಎಸಗಿದ್ದಾನೆಂದು ಪೊಲೀಸರು ಆರೋಪಿಸಿದ್ದಾರೆ.

              ಶ್ರೀಕಿ ತನ್ನ ಅಂತರ್ಜಾಲದಲ್ಲಿ ಬಿಟ್-ಕಾಯಿನ್ ಹಣದ ವಿನಿಮಯಗಳನ್ನು ಹಾಗೂ ಸರಕಾರಿ ವೆಬ್ಸೈಟ್ ಒಂದನ್ನು ಹ್ಯಾಕ್ ಮಾಡುತ್ತಿದ್ದ ಹಾಗೂ ಆತ ಹಲವಾರು ಅನ್ಲೈನ್ ಹಗರಣಗಳಲ್ಲಿ ಶಾಮೀಲಾಗಿದ್ದನೆಂದು ಪೊಲೀಸರು ಆಪಾದಿಸಿದ್ದಾರೆ.

           ಬಿಟ್-ಕಾಯಿನ್ ಹಗರಣಕ್ಕೆ ಸಂಬಂಧಿಸಿ ರಾಜ್ಯ ಪೊಲೀಸರು ನಡೆಸುತ್ತಿರುವ ತನಿಖೆಗಳಲ್ಲಿ ನ್ಯೂನತೆಗಳಿವೆ ಹಾಗೂ ಹಲವಾರು ಬಿಜೆಪಿ ನಾಯಕರು ಬಿಟ್-ಕಾಯಿನ್ ರೂಪದಲ್ಲಿ ಲಂಚ ಸ್ವೀಕರಿಸಿದ್ದಾರೆಂದು ರಾಜ್ಯದ ಕಾಂಗ್ರೆಸ್ ನಾಯಕರು ಆಪಾದಿಸಿದ್ದರು.
            ಕಾಂಗ್ರೆಸ್ ನಾಯಕ ಹಾಗೂ ಶಾಸಕ ಪ್ರಿಯಾಂಕ ಖರ್ಗೆ ಅವರು ಶುಕ್ರವಾರ ನೀಡಿ ಟ್ವಟ್ಟರ್ ಮೂಲಕ ಬಿಟ್-ಕಾಯಿನ್ ಹಗರಣದ ಬಗ್ಗೆ ತನಿಖೆ ನಡೆಸಲು ಅಮೆರಿಕದ ಎಫ್ಬಿಐ ತಂಡವು ದಿಲ್ಲಿಗೆ ಆಗಮಿಸಿದೆ ಎಂದ ಹೇಳಿಕೆ ನೀಡಿದ್ದರು. ''ಈ ಹಗರಣದಲ್ಲಿ ಬಿಜೆಪಿಯ ಹಲವಾರು ಅಸ್ಥಿಪಂಜರಗಳು ಹೊರಬೀಳಲಿವೆ' ಎಂದವರು ಟ್ವೀಟಿಸಿದ್ದರು.


ಇದಾದ ಬೆನ್ನಲ್ಲೇ, ಹಿರಿಯ ಕಾಂಗ್ರೆಸ್ ನಾಯಕ ರಣದೀಪ ಸುರ್ಜೆವಾಲಾ ಅವರು ಬಿಟ್-ಕಾಯಿನ್ ಹಗರಣಕ್ಕೆ ಸಂಬಂಧಿಸಿ ಅಮಿತ್ ಶಾ ಹಾಗೂ ಬೊಮ್ಮಾಯಿ ಅವರಿಗೆ ಹಲವಾರು ಪ್ರಶ್ನೆಗಳನ್ನು ಒಡ್ಡಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries