ನವದೆಹಲಿ: ನೇಪಾಳದಲ್ಲಿ ಭಾರತದ ರಾಯಭಾರಿಯಾಗಿರುವ ವಿನಯ್ ಮೋಹನ್ ಕ್ವಾತ್ರಾ ಅವರನ್ನು ಹೊಸ ವಿದೇಶಾಂಗ ಕಾರ್ಯದರ್ಶಿಯಾಗಿ ನೇಮಿಸಲಾಗಿದೆ.
ಪ್ರಸ್ತುತ ಹರ್ಷವರ್ಧನ್ ಶೃಂಗ್ಲಾ ವಿದೇಶಾಂಗ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿದ್ದು, ಇವರು ತಿಂಗಳಾಂತ್ಯದಲ್ಲಿ ಕಚೇರಿಯಿಂದ ನಿರ್ಗಮಿಸಲಿದ್ದಾರೆ.
ಕ್ಯಾಬಿನೆಟ್ ನೋಟ್‌ನ ನೇಮಕಾತಿ ಸಮಿತಿಯು 'ಕಠ್ಮಂಡುವಿನಲ್ಲಿ ರಾಯಭಾರಿಯಾಗಿದ್ದ ಶ್ರೀ ವಿನಯ್ ಮೋಹನ್ ಕ್ವಾತ್ರಾ (ಐಎಫ್ ಎಸ್: 1988) ಅವರನ್ನು 30.04 ರಂದು ಶ್ರೀ ಹರ್ಷವರ್ಧನ್ ಶೃಂಗ್ಲಾ (ಐಎಫ್ ಎಸ್: 1984) ಅವರ ನಿವೃತ್ತಿಯ ನಂತರ 2022ರ ವಿದೇಶಾಂಗ ಕಾರ್ಯದರ್ಶಿ ಹುದ್ದೆಗೆ ನೇಮಿಸಲು ಅನುಮೋದನೆ ನೀಡಿದೆ ಎಂದು ಹೇಳಿದೆ.