ಕಾಸರಗೋಡು: ಲಾಕ್‍ಡೌನ್ ಮತ್ತು ಕೋವಿಡ್ ಕಾರಣದಿಂದ ತೂಕ ಮತ್ತು ಅಳತೆ ಉಪಕರಣಗಳನ್ನು ಸಕಾಲಕ್ಕೆ ಸ್ಟಾಂಪಿಂಗ್ ಮಾಡಲು ಸಾಧ್ಯವಾಗದವರಿಗೆ ತೂಕದ ಉಪಕರಣದ ಗಾತ್ರವನ್ನು ಕಡಿಮೆ ಮಾಡಲು ಮತ್ತು ದಂಡ ಕಡಿತಗೊಳಿಸುವ ನಿಟ್ಟಿನಲ್ಲಿ ಅದಾಲತ್ ನಡೆಸಲಾಯಿತು. ಅದಾಲತ್‍ನ ಜಿಲ್ಲಾ ಮಟ್ಟದ ಉದ್ಘಾಟನೆಯನ್ನು ಕಾಸರಗೋಡು ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷ ಕೃಷ್ಣನ್ ಕಲರಿಕ್ಕಲ್ ನಿರ್ವಹಿಸಿದರು. ಕಾನೂನು ಮಾಪನಶಾಸ್ತ್ರ ಉಪ ನಿಯಂತ್ರಣಾಧಿಕಾರಿ ಪಿ.ಶ್ರೀನಿವಾಸ ಅಧ್ಯಕ್ಷತೆ ವಹಿಸಿದ್ದರು. ಫ್ಲೈಯಿಂಗ್ ಸ್ಕ್ವಾಡ್ರನ್ ಉಪ ನಿಯಂತ್ರಣಾಧಿಕಾರಿ ಎಸ್.ಎಸ್.ಅಭಿಲಾಷ್ ಮಾತನಾಡಿದರು. ಸಹಾಯಕ ನಿಯಂತ್ರಣಾಧಿಕಾರಿ ಟಿ.ಕೆ.ಕೃಷ್ಣಕುಮಾರ್ ಸ್ವಾಗತಿಸಿ, ತಹಶೀಲ್ದಾರ ಕೆ.ಶಶಿಕಲಾ ಧನ್ಯವಾದವಿತ್ತರು.