ನವದೆಹಲಿ: ಐದು ವರ್ಷದ ಕಂದಮ್ಮ ತನ್ನ ಅಂಗಾಗಗಳನ್ನು ದಾನ ಮಾಡಿ ಎರಡು ಜೀವಗಳನ್ನು ಉಳಿಸುವ ಮೂಲಕ ಸಾರ್ಥಕತೆ ಮೆರೆದಿದ್ದಾಳೆ. ಇಂತಹ ಅಪರೂಪದ ಘಟನೆ ಏಮ್ಸ್ ಆಸ್ಪತ್ರೆಯ ಇತಿಹಾಸದಲ್ಲೇ ಮೊದಲು ಕೂಡ.
ನೊಯ್ಡಾದ ರೋಲಿ ಎಂಬಾಕೆಯೇ ಅಂಗಾಗಳನ್ನು ದಾನ ಮಾಡಿದ ಬಾಲಕಿ. ಮನೆಯ ಹೊರಗಡೆ ಇದ್ದ ವೇಳೆ ಈಕೆಯ ತಲೆಗೆ ಗುಂಡು ತಗುಲಿತು. ಕೂಡಲೇ ಆಕೆಯನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು, ಅಲ್ಲಿ ವೈದ್ಯರು ಆಕೆಯ ತಲೆಯ ಎರಡು ಮೂಳೆಗಳು ಮುರಿದಿವೆ. ಗಾಯದಿಂದಾಗಿ ರೋಲಿ ಕೋಮಾ ಸ್ಥಿತಿ ತಲುಪಿದ್ದಳು. ನಂತರ ರೋಲಿಯನ್ನು ದೆಹಲಿಯ ಏಮ್ಸ್‌ಗೆ ಕಳುಹಿಸಲಾಯಿತು. ಎರಡು ದಿನಗಳ ಕಾಲ ಬಾಲಕಿಯನ್ನು ರಕ್ಷಿಸಲು ವೈದ್ಯರು ಶತಪ್ರತ್ನ ಮಾಡಿದ್ದರು. ಆದರೆ ಶುಕ್ರವಾರ ಆಕೆಯ ಮೆದುಳು ನಿಷ್ಕ್ರೀಯಗೊಂಡಿತು.
ರೋಲಿಯ ಪೋಷಕರಿಗೆ ಅಂಗಾಂಗ ದಾನದ ಪ್ರಕ್ರಿಯೆಯ ಬಗ್ಗೆ ವಿವರಿಸಲಾಯಿತು. ಪೋಷಕರು ಆರಂಭದಲ್ಲಿ ನಿರಾಕರಿಸಿದರು, ಆದರೆ ನಂತರ ತಮ್ಮ ಮಗಳ ಅಂಗಾಂಗಗಳ ದಾನಕ್ಕೆ ಒಪ್ಪಿಕೊಂಡರು. ತಮ್ಮ ಮಗುವನ್ನು ಕಳೆದುಕೊಂಡ ನೋವನ್ನು ಬೇರೆ ಯಾವುದೇ ಕುಟುಂಬ ಅನುಭವಿಸಬಾರದು ಎಂದು ಅಂಗಾಂಗ ದಾನ ಮಾಡಲು ನಿರ್ಧರಿಸಿದ್ದೇವೆ ಎಂದು ರೋಲಿಯ ತಂದೆ ಹರಿನಾರಾಯಣ್ ತಿಳಿಸಿದ್ದಾರೆ.
ರೋಲಿಯ ಅಂಗಾಂಗ ದಾನದಿಂದಾಗಿ ಯಕೃತ್ತು ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ಇಬ್ಬರು ಮಕ್ಕಳು ಹೊಸ ಬದುಕು ಕಟ್ಟಿಕೊಂಡಿದ್ದಾರೆ.