ಕಾಸರಗೋಡು: ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮವು ಜಿಲ್ಲಾ ಕಛೇರಿ ಸಹಯೋಗದಲ್ಲಿ ಚೆಂಗಳ ಸಿಡಿಎಸ್‍ಗೆ ಮೈಕ್ರೋ ಕ್ರೆಡಿಟ್ ಸಾಲ ವಿತರಿಸಲಾಯಿತು. ಸಾಲ ವಿತರಣೆಯನ್ನು ಶಾಸಕ ಎನ್.ಎ.ನೆಲ್ಲಿಕುನ್ನು ಉದ್ಘಾಟಿಸಿದರು. ಚೆಂಗಳ ಗ್ರಾಮ ಪಂಚಾಯಿತಿ ಅಧ್ಯಕ್ಷ ಖಾದರ್ ಬದ್ರಿಯಾ ಅಧ್ಯಕ್ಷತೆ ವಹಿಸಿದ್ದರು. ನೆರೆಕೆರೆ ಕೂಟಗಳ 48 ಗುಂಪುಗಳಿಗೆ 2,26,50,000 ವಿತರಿಸಲಾಯಿತು. ಕೆ ಎಸ್ ಬಿಸಿಡಿಸಿ ವ್ಯವಸ್ಥಾಪಕ ನಿರ್ದೇಶಕ ದೇವಿದಾಸ್ ನೆರೆಕರೆ ಕೂಟಗಳಿಗೆ ಸಾಲ ವಿತರಿಸಿದರು.
ಕೆಎಸ್ ಬಿಸಿಡಿಸಿ ಜಿಲ್ಲಾ ವ್ಯವಸ್ಥಾಪಕ ಎನ್.ಎಂ.ಮೋಹನನ್ ವರದಿ ಮಂಡಿಸಿದರು. ಕಾಸರಗೋಡು ಜಿಲ್ಲಾ ಮಿಷನ್ ಕೋ-ಆರ್ಡಿನೇಟರ್ ಟಿ.ಟಿ.ಸುರೇಂದ್ರನ್, ಚೆಂಗಳ ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಸಫಿಯಾ ಹಾಶಿಮ್, ಚೆಂಗಳ ಗ್ರಾಮ ಪಂಚಾಯತ್ ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷ ಹಸೈನಾರ್ ಬದ್ರಿಯಾ, ಚೆಂಗಳ ಗ್ರಾಮ ಪಂಚಾಯತ್ ಆರೋಗ್ಯ ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ಸಲೀಂ ಎಡನೀರು, ಚೆಂಗಳ ಗ್ರಾಮ ಪಂಚಾಯತ್ ಕ್ಷೇಮಾಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷ ಅರ್ಶಿಪಾ ಅರ್ಶಾದ್ ಉಪಸ್ಥಿತರಿದ್ದರು. ಕೆಎಸ್ ಬಿಸಿಡಿಸಿ ಕಾಸರಗೋಡು ಕಿರಿಯ ಸಹಾಯಕ ಅರವಿಂದ್ ರಾಜ್ ನಿಗಮದ ವಿವಿಧ ಸಾಲ ಯೋಜನೆಗಳ ಬಗ್ಗೆ ವಿವರಿಸಿದರು. ಚೆಂಗಳ ಗ್ರಾಮ ಪಂಚಾಯಿತಿ ಸಿಡಿಎಸ್ ಅಧ್ಯಕ್ಷೆ ಎಸ್.ಸುನೀತಾ ಸ್ವಾಗತಿಸಿ, ಚೆಂಗಳ ಗ್ರಾಮ ಪಂಚಾಯಿತಿ ಸದಸ್ಯ ಕಾರ್ಯದರ್ಶಿ ಕೆ.ಜಿ.ಗೀತಾ ವಂದಿಸಿದರು.