ನವದೆಹಲಿ: ಭಾರತದ ಸರಹದ್ದಿನಲ್ಲಿ ಇಂದು ಶತ್ರುರಾಷ್ಟ್ರದ ಕ್ವಾಡ್ಕಾಪ್ಟರ್ ಹಾರಾಟ ನಡೆಸಿದ್ದು, ಗಡಿಭದ್ರತಾ ಪಡೆ (ಬಿಎಸ್ಎಫ್) ಸಿಬ್ಬಂದಿ ಅದನ್ನು ಹೊಡೆದುರುಳಿಸಿದ್ದಾರೆ. ಚೀನಾ ನಿರ್ಮಿತ ಈ ಕ್ವಾಡ್ಕಾಪ್ಟರ್ ಪಾಕಿಸ್ತಾನ ಕಡೆಯಿಂದ ಭಾರತಕ್ಕೆ ಪ್ರವೇಶಿಸಿದೆ ಎನ್ನಲಾಗಿದೆ.

ತಡರಾತ್ರಿ 1.15ರ ಸುಮಾರಿಗೆ ಅಮೃತಸರ ಸೆಕ್ಟರ್ನ ಧನೋಕಲನ್ ಗ್ರಾಮದ ಪ್ರದೇಶದಲ್ಲಿ ಪಾಕಿಸ್ತಾನ ಕಡೆಯಿಂದ ಅನುಮಾನಾಸ್ಪದವಾಗಿ ಹಾರಾಟ ನಡೆಸುತ್ತಿದ್ದ ವಸ್ತುವೊಂದು ಭಾರತೀಯ ಸರಹದ್ದಿನ ಒಳಹೊಕ್ಕಿರುವ ಸುಳಿವು ಬಿಎಸ್ಎಫ್ ಸಿಬ್ಬಂದಿಗೆ ಸಿಕ್ಕಿತು.
ತಕ್ಷಣ ಕಾರ್ಯಪ್ರವೃತ್ತರಾದ ಬಿಎಸ್ಎಫ್ ಸಿಬ್ಬಂದಿ ಶೂಟ್ ಮಾಡಿ ಅದನ್ನು ಹೊಡೆದುರುಳಿಸಿದ್ದಾರೆ. ಬಳಿಕ ಸುತ್ತುವರಿದು ಸೂಕ್ತ ಮುನ್ನೆಚ್ಚರಿಕೆ ವಹಿಸಿ ಕಪ್ಪು ಬಣ್ಣದ ಚೀನಿ ನಿರ್ಮಿತ ಕ್ವಾಡ್ಕಾಪ್ಟರ್ (ಮಾಡೆಲ್-ಡಿಜೆಐ ಮ್ಯಾಟ್ರಿಸ್-300) ಬಿಎಸ್ಎಫ್ ವಶಕ್ಕೆ ಪಡೆದಿದೆ.