ಚೆನ್ನೈ: ಇತ್ತೀಚೆಗೆ ಎಲೆಕ್ಟ್ರಿಕ್ ಬೈಕ್ ಗುಣಮಟ್ಟ ಕುರಿತು ಭಾರೀ ಚರ್ಚೆಗೆ ಗ್ರಾಸವಾಗಿದ್ದು, ಈಗಾಗಲೇ ಖರೀದಿಸಿರುವ ಗ್ರಾಹಕರಿಗೆ ಮಾತ್ರ ಹಣವೂ ಇಲ್ಲ, ಬೈಕೂ ಇಲ್ಲದಂತಾಗಿದೆ. ಖರೀದಿಸಿದ ಕೆಲವೇ ದಿನಗಳಲ್ಲಿ ಬೈಕ್ ಕೆಟ್ಟುಹೋಗುತ್ತಿರುವುದರಿಂದ ಸಂಸ್ಥೆಯ ವಿರುದ್ಧ ಆಕ್ರೋಶ ಹೊರಹಾಕುತ್ತಿದ್ದಾರೆ.

ಗುಣಮಟ್ಟ ಚೆನ್ನಾಗಿದೆ ಎಂದು ನಂಬಿಸಿ ಖರೀದಿಸಿದ ಕೆಲವೇ ತಿಂಗಳಲ್ಲಿ ಎಲೆಕ್ಟ್ರಿಕ್ ಬೈಕ್ ಕೆಟ್ಟುಹೋಗಿದ್ದರಿಂದ ಮಾಲೀಕ ಬೈಕಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಸುಟ್ಟಿರುವ ವಿಡಿಯೋ ಭಾರೀ ವೈರಲ್ ಆಗುತ್ತಿದೆ.
ಇತ್ತೀಚೆಗೆ ಓಲಾ ಕಂಪನಿಯ ಎಲೆಕ್ಟ್ರಿಕ್ ಬೈಕ್ಗಳಲ್ಲಿ ತಾಂತ್ರಿಕ ದೋಷ ಕಂಡುಬಂದಿದ್ದು, ಈ ಹಿನ್ನಲೆಯಲ್ಲಿ ಸ್ವತಃ ಸಂಸ್ಥೆಯೇ 1400 ಕ್ಕೂ ಅಧಿಕ ಬೈಕನ್ನು ಹಿಂಪಡೆದಿದೆ. ಈ ಬೆನ್ನಲ್ಲೇ ಗ್ರಾಹಕರೂ ಕೂಡ ಇಷ್ಟಪಟ್ಟು ಖರೀದಿಸಿದ ಬೈಕ್ ಅಲ್ಪ ದಿನವೂ ಬಾಳಿಕೆ ಬರಲಿಲ್ಲ ಎಂದು ಹೇಳಿದ್ದಾರೆ.
ತಮಿಳುನಾಡಿದ ಫೃಥ್ವಿರಾಜ್ ಎಂಬ ವ್ಯಕ್ತಿ ಜನವರಿಯಲ್ಲಿ ಎಲೆಕ್ಟ್ರಿಕ್ ಬೈಕ್ ಖರೀದಿಸಿದ್ದಾರೆ. ಆ ವೇಳೆ ಸಂಸ್ಥೆ ಬೈಕ್ ಉತ್ತಮ ಗುಣಮಟ್ಟದ್ದಾಗಿದೆ ಎಂದು ಹೇಳಿತ್ತು. ಖರೀದಿಸಿದ ಮೂರೇ ತಿಂಗಳಿಗೆ ಬಣ್ಣ ಬಯಲಾಗಿದ್ದು, ಹಾಗಾಗಿ ಬೈಕನ್ನೇ ಸುಟ್ಟಾಕುತ್ತಿದ್ದೇನೆ ಎಂದು ಹೇಳಿದ್ದಾರೆ.