HEALTH TIPS

ಲೇಖಕಿ ವಿಜಯಾ ಸುಬ್ರಹ್ಮಣ್ಯ ಅವರ ಆತ್ಮಕಥೆ `ವಿಜಯ ವಿಕಾಸ' ಬಿಡುಗಡೆ: ಆತ್ಮಚರಿತ್ರೆಯ ಮೂಲಕ ಸಾರಸ್ವತ ಲೋಕಕ್ಕೆ ಬಲುದೊಡ್ಡ ಕೊಡುಗೆ: ಪುನರೂರು

     

               ಕುಂಬಳೆ:  ಗಡಿನಾಡು ಕಾಸರಗೋಡು ಜಿಲ್ಲೆಯಲ್ಲಿ ನಿರಂತರವಾಗಿ ಕನ್ನಡದ ಚಟುವಟಿಕೆಗಳು ನಡೆಯುತ್ತಿರುವುದು ಮನಸ್ಸಿಗೆ ಮುದವನ್ನು ನೀಡುವ ವಿಚಾರವಾಗಿದೆ. ಮಹಿಳೆಯೋರ್ವರ ಬಲು ಅಪರೂಪದ ಆತ್ಮಕಥೆಯು ಇಂದು ಲೋಕಾರ್ಪಣೆಗೊಂಡಿದೆ. ಲೇಖಕಿ ವಿಜಯಾ ಸುಬ್ರಹ್ಮಣ್ಯ ಅವರು ತನ್ನ ಆತ್ಮಚರಿತ್ರೆಯನ್ನು ನೀಡುವ ಮೂಲಕ ಸಾರಸ್ವತ ಲೋಕಕ್ಕೆ ಬಲುದೊಡ್ಡ ಕೊಡುಗೆಯನ್ನು ನೀಡಿದ್ದಾರೆ ಎಂದು ಧರ್ಮದರ್ಶಿ ಹರಿಕೃಷ್ಣ ಪುನರೂರು ಅಭಿಪ್ರಾಯಪಟ್ಟರು.

                     ಕನ್ನಡ ಸಾಹಿತ್ಯ ಪರಿಷತ್ತು ಕೇರಳ ಗಡಿನಾಡ ಘಟಕ ಕಾಸರಗೋಡು ಹಾಗೂ ಮುಜುಂಗಾವು ಶ್ರೀ ಭಾರತೀ ವಿದ್ಯಾಪೀಠದ ಸಹಯೋಗದೊಂದಿಗೆ ಮುಜುಂಗಾವು ಶ್ರೀ ಭಾರತೀ ವಿದ್ಯಾಪೀಠದ ಸಭಾಂಗಣದಲ್ಲಿ ಲೇಖಕಿ ವಿಜಯಾ ಸುಬ್ರಹ್ಮಣ್ಯ ಕುಂಬಳೆ ಅವರ ಆತ್ಮಕಥೆ ವಿಜಯ ವಿಕಾಸ ಕೃತಿ ಬಿಡುಗಡೆ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

             ಮಹಿಳೆಯೋರ್ವಳು ತನ್ನ ಆತ್ಮ ಚರಿತ್ರೆಯನ್ನು ಹೊರತಂದು ಮಾದರಿಯಾಗಿದ್ದಾರೆ. ಇಂತಹ ಇನ್ನಷ್ಟು ಕೃತಿಗಳು ಗಡಿನಾಡಿನಿಂದ ಹೊರಬರಲಿ ಎಂದರು.

                   ಕನ್ನಡ ಸಾಹಿತ್ಯ ಪರಿಷತ್ತು ಗಡಿನಾಡ ಘಟಕದ ಅಧ್ಯಕ್ಷ ಎಸ್.ವಿ.ಭಟ್ ವಿಜಯವಿಕಾಸ ಕೃತಿಯನ್ನು ಲೋಕಾರ್ಪಣೆಗೈದು ಮಾತನಾಡಿ,  ಲೇಖಕಿ ವಿಜಯಾ ಸುಬ್ರಹ್ಮಣ್ಯ ಅವರು ಸಾಹಿತ್ಯ ಕ್ಷೇತ್ರದಲ್ಲಿ ನಿರಂತರವಾಗಿ ತೊಡಗಿಸಿಕೊಂಡು ಎಲ್ಲರೊಂದಿಗೆ ಬೆರೆತು ಕಷ್ಟದ ಜೀವನವನ್ನು ಮರೆತು ಸಂತಸವನ್ನನುಭÀವಿಸುತ್ತಿದ್ದಾರೆ. ಆಧುನಿಕತೆಗೆ ಹೊಂದಿಕೊಂಡು ತಾನು ಯಾವುದಕ್ಕೂ ಸೈ ಎಂಬುದನ್ನು ತೋರ್ಪಡಿಸಿದ್ದಾರೆ ಎಂದರು. ನಿವೃತ್ತ ಅಧ್ಯಾಪಕ, ಸಾಹಿತಿ, ನಿಘಂಟು ತಜ್ಞ ವಿ.ಬಿ.ಕುಳಮರ್ವ ಕೃತಿ ಅವಲೋಕನ ಮಾಡಿದರು. ಮುಖ್ಯ ಅತಿಥಿಗಳಾಗಿ ಹಿರಿಯರಾದ ಡಾ.ರಮಾನಂದ ಬನಾರಿ, ವಿ.ಬಿ.ಅರ್ತಿಕಜೆ, ಹರಿಕೃಷ್ಣ ಭರಣ್ಯ, ಕೃಷಿಕ ಕೃಷ್ಣಮೋಹನ ಭಟ್ಟ ಮಾಯಿಪ್ಪಾಡಿ, ಶ್ರೀರಾಮಚಂದ್ರಾಪುರ ಮಠದ ಕೇಂದ್ರ ಮಾತೃತ್ವಂ ಅಧ್ಯಕ್ಷೆ ಈಶ್ವರಿ ಬೇರ್ಕಡವು, ವೆಂಕಟಕೃಷ್ಣ ಶಂಕರಮೂಲೆ, ಮುಜುಂಗಾವು ಶ್ರೀ ಭಾರತೀ ವಿದ್ಯಾಪೀಠದ ಆಡಳಿತಾಧಿಕಾರಿ ಶ್ಯಾಂ ಭಟ್ ದರ್ಬೆಮಾರ್ಗ ಉಪಸ್ಥಿತರಿದ್ದು ಶುಭಕೋರಿದರು. ಲೇಖಕಿ ವಿಜಯಾ ಸುಬ್ರಹ್ಮಣ್ಯ ಪ್ರಾಸ್ತಾವಿಕ ಮಾತುಗಳನ್ನಾಡಿ ಕನ್ನಡ ಸಾಹಿತ್ಯಕ್ಕೆ ಪೂರಕವಾದ ಈ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಎಲ್ಲಾ ಗಣ್ಯರೂ ಉಪಸ್ಥಿತರಿದ್ದು, ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿರುವುದು ಗಡಿನಾಡಿನವರಾದ ನಮಗೆ ಹೆಮ್ಮೆಯೆನಿಸುತ್ತಿದೆ. ಕನ್ನಡ ಸಾಹಿತ್ಯ ಉಳಿಯಬೇಕು, ಬೆಳೆಯಬೇಕು ಎನ್ನುವ ಮಹದಾಸೆ ಮನದಲ್ಲಿದೆ. ಸಾಮಾಜಿಕ ಜಾಲತಾಣದಲ್ಲಿ ಅದೆಷ್ಟೋ ಮಹಿಳೆಯರು ಕಥೆ, ಕವನಗಳನ್ನು ಪ್ರಸ್ತುತಪಡಿಸುತ್ತಿದ್ದಾರೆ ಎಂದರು. ನಿವೃತ್ತ ಶಿಕ್ಷಕ ಎಚ್ ರಾಮ ಭಟ್ ಹಳೆಮನೆ ಕಾರ್ಯಕ್ರಮ ನಿರೂಪಿಸಿದರು. ಕೇಶವಪ್ರಕಾಶ ಶಂಕರಮೂಲೆ ಸ್ವಾಗತಿಸಿ, ಮಂಜುನಾಥ ಪ್ರಸಾದ ಶಂಕರಮೂಲೆ ವಂದಿಸಿದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries