ಇಂಧೋರ್: ಪ್ರಶಾಂತ್ ಕಿಶೋರ್ ಅವರು ಕಾಂಗ್ರೆಸ್ ಸೇರಿಕೊಂಡರೆ ಅವರ ಅನುಭವದ ಲಾಭವನ್ನು ಪಕ್ಷ ಪಡೆದುಕೊಳ್ಳಬೇಕು ಎಂದು ಮಧ್ಯಪ್ರದೇಶ ಮಾಜಿ ಮುಖ್ಯಮಂತ್ರಿ ಕಮಲ್ ನಾಥ್ ಹೇಳಿದ್ದಾರೆ.
ಇಂಧೋರ್: ಪ್ರಶಾಂತ್ ಕಿಶೋರ್ ಅವರು ಕಾಂಗ್ರೆಸ್ ಸೇರಿಕೊಂಡರೆ ಅವರ ಅನುಭವದ ಲಾಭವನ್ನು ಪಕ್ಷ ಪಡೆದುಕೊಳ್ಳಬೇಕು ಎಂದು ಮಧ್ಯಪ್ರದೇಶ ಮಾಜಿ ಮುಖ್ಯಮಂತ್ರಿ ಕಮಲ್ ನಾಥ್ ಹೇಳಿದ್ದಾರೆ.
ಪ್ರಶಾಂತ್ ಅವರು ಇತ್ತೀಚೆಗೆ ಎರಡು ಸಲ ಪಕ್ಷದ ಮುಖ್ಯಸ್ಥೆ ಸೋನಿಯಾ ಗಾಂಧಿ ಅವರನ್ನು ಭೇಟಿಯಾಗಿದ್ದಾರೆ.
ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಕಮಲ್, 'ಪ್ರಶಾಂತ್ ಅವರು ಚುನಾವಣಾ ತಂತ್ರಗಾರಿಕೆಯಲ್ಲಿ ನಿಪುಣರು. ಹಲವು ಪಕ್ಷಗಳೊಂದಿಗೆ ಕೆಲಸ ಮಾಡಿದ್ದಾರೆ. ಅವರು ಕಾಂಗ್ರೆಸ್ ದೇಶದ ಭವಿಷ್ಯ ಎಂದು ಅವರು ಭಾವಿಸಿದರೆ, ಪಕ್ಷಕ್ಕೆ ಸಹಾಯ ಮಾಡಲು ಬಯಸಿದ್ದರೆ, ಅದರಲ್ಲಿ ತಪ್ಪೇನು?' ಎಂದು ಪ್ರಶ್ನಿಸಿದ್ದಾರೆ.
'ಒಂದು ವೇಳೆ ಪ್ರಶಾಂತ್ ಅವರು ಕಾಂಗ್ರೆಸ್‌ಗೆ ಸೇರ್ಪಡೆಯಾದರೆ, ಪಕ್ಷವು ಅದರ ಲಾಭ ಪಡೆಯಬೇಕು' ಎಂದೂ ಮಧ್ಯಪ್ರದೇಶ ಕಾಂಗ್ರೆಸ್ ಮುಖ್ಯಸ್ಥ ಹೇಳಿದ್ದಾರೆ.