ಕಾಸರಗೋಡು: ಪ್ರಧಾನಿ ನರೇಂದ್ರ ಮೋದಿ ದೇಶಾದ್ಯಂತ ವಿದ್ಯಾರ್ಥಿಗಳೊಂದಿಗೆ ನಡೆಸಿದ ಪರೀಕ್ಷಾ ಪೆ ಚರ್ಚಾ ನೇರ ಪ್ರಸಾರದ ವೀಕ್ಷಣೆಗೆ ಕೇರಳ ಕೇಂದ್ರೀಯ ವಿಶ್ವ ವಿದ್ಯಾಲಯ ವಿವಿಧೆಡೆ ಸೌಲಭ್ಯ ಒದಗಿಸಿಕೊಟ್ಟಿತು.
ಕೇರಳದ ಕೇಂದ್ರೀಯ ವಿಶ್ವವಿದ್ಯಾಲಯ ಪೆರಿಯಾ ವಿಶ್ವವಿದ್ಯಾಲಯದ ಪ್ರಧಾನ ಕಛೇರಿ, ತಿರುವಲ್ಲಾ ಕಾನೂನು ಅಧ್ಯಯನ ಕ್ಯಾಂಪಸ್ ಮತ್ತು ತಿರುವನಂತಪುರಂ ಕ್ಯಾಪಿಟಲ್ ಸೆಂಟರ್‍ನಲ್ಲಿ 20 ಕ್ಕೂ ಹೆಚ್ಚು ಸ್ಥಳಗಳಲ್ಲಿ ವೀಕ್ಷಣೆಗೆ ವ್ಯಾಪಕವಾದ ಸೌಲಭ್ಯಗಳನ್ನು ಒದಗಿಸಲಾಗಿತ್ತು. ವಿದ್ಯಾರ್ಥಿಗಳು ಶಿಕ್ಷಕರು ಸಹ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಪ್ರಭಾರ ಉಪಕುಲಪತಿ ಪೆÇ್ರ. ವಿನ್ಸೆಂಟ್ ಮ್ಯಾಥ್ಯೂ, ರಿಜಿಸ್ಟ್ರಾರ್ ಡಾ.ಎನ್. ಸಂತೋಷ್ ಕುಮಾರ್, ಡೀನ್, ಶೈಕ್ಷಣಿಕ ಪೆÇ್ರ.ಅಮೃತ್ ಜಿ.ಕುಮಾರ್, ಹಣಕಾಸು ಅಧಿಕಾರಿ ಡಾ.ಜೋಜೋ ಕೆ. ಜೋಸೆಫ್, ಪರೀಕ್ಷಾ ನಿಯಂತ್ರಣಾಧಿಕಾರಿ ಡಾ.ಎಂ. ಮುರಳೀಧರನ್ ನಂಬಿಯಾರ್, ಡೀನ್‍ಗಳು ಮತ್ತು ವಿಭಾಗದ ಮುಖ್ಯಸ್ಥರು ಪಾಲ್ಗೊಂಡಿದ್ದರು.