ಬದಿಯಡ್ಕ: ಸಮಾಜದ ಶಾಂತಿ ಮತ್ತು ಒಗ್ಗಟ್ಟಿಗಾಗಿ ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತಿ ಸ್ವಾಮೀಜಿ 'ಭಕ್ತರ ನಡಿಗೆ ಭಗವಂತನೆಡೆಗೆ' ಎಂಬ ಸಂದೇಶವನ್ನು ಸಾರುವ ಪಾದಯಾತ್ರೆ ಕಾರ್ಯಕ್ರವಸಿಂದು(ಏ. 13) ಎಡನೀರು ಶ್ರೀ ಮಠದಿಂದ ಪ್ರಾರಂಂಭಗೊಂಡಿದೆ.
. ಬೆಳಗ್ಗೆ 6ಕ್ಕೆ ಶ್ರೀ ಮಠದಲ್ಲಿ ಶ್ರೀಮಹಾಗಣಪತಿ ಹವನ, ಪೂರ್ಣಾಹುತಿ ಬಳಿಕ ಪ್ರಾರಂಭ ವಾದ ಪಾದಯಾತ್ರೆ 7ಕ್ಕೆ ವಿದ್ಯಾನಗರ, 7.15ಕ್ಕೆ ಅಣಂಗೂರು, 7.30ಕ್ಕೆ ನುಳ್ಳಿಪ್ಪಾಡಿ ,8ಕ್ಕೆ ಕಾಸರಗೋಡು ಶ್ರೀ ಮಲ್ಲಿಕಾರ್ಜುನ ದೇವಸ್ಥಾನ, 8.15ಕ್ಕೆ ಕರಂದಕ್ಕಾಡು, 8.30ಕ್ಕೆ ಸೂರ್ಲು ಗಣೇಶ ಮಂದಿರ 9ಕ್ಕೆ ರಾಮದಾಸನಗರ, 9.30ಕ್ಕೆ ಉಳಿಯತ್ತಡ್ಕ, 10ಕ್ಕೆ ಶ್ರೀ ಮಧೂರು ದೇವಸ್ಥಾನ ವನ್ನು ತಲುಪಲಿದೆ. ಪಾದಯಾತ್ರೆಯ ಸಂಕಲ್ಪದಂತೆ ಕ್ಷೇತ್ರದಲ್ಲಿ 108 ತೆಂಗಿನಕಾಯಿ ವಿಶೇಷ ಗಣಹೋಮ ಜರಗಲಿದೆ. ಪಾದ ಯಾತ್ರೆಯ ಯಶಸ್ವಿಗಾಗಿ ಊರ ಪರವೂರ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಶ್ರೀಮಠದ ಪ್ರಕಟಣೆ ತಿಳಿಸಿದೆ.