ಕುಂಬಳೆ: ಕೆಥೋಲಿಕ್ ಸಭಾ ಕಯ್ಯಾರ್ ಘಟಕ ಹಾಗೂ ಶ್ರೀ ಸಾಮಾನ್ಯ ಮತ್ತು ಶಿಕ್ಷಣ ಆಯೋಗ ಕ್ರಿಸ್ತರಾಜರ ಇಗರ್ಜಿ ಇವರ ಸಹಯೋಗದೊಂದಿಗೆ ಮಂಜೇಶ್ವರ ಶಾಸಕ ಎ . ಕೆ . ಎಂ ಅಶ್ರಫ್ ರವರಿಗೆ ಅಭಿನಂದನಾ ಕಾರ್ಯಕ್ರಮ ಭಾನುವಾರ ಚರ್ಚ್ ಸಭಾಂಗಣದಲ್ಲಿ ನಡೆಯಿತು.
ಕಯ್ಯಾರ್ ಕ್ರಿಸ್ತರಾಜರ ಇಗರ್ಜಿಯ ಧರ್ಮಗುರು ವಂದನೀಯ ಫಾದರ್ ಹ್ಯಾರಿ ಡಿ ಸೋಜ ಅಧ್ಯಕ್ಷತೆ ವಹಿಸಿದ್ದರು. ಪೈವಳಿಕೆ ಗ್ರಾಮ ಪಂಚಾಯತಿ ಸದಸ್ಯ ಅವಿನಾಶ್ ಮಚಾದೋ, ಚರ್ಚ್ ಪಾಲನಾ ಸಮಿತಿ ಉಪಾಧ್ಯಕ್ಷ ಜೋರ್ಜ್ ಡಿ ಅಲ್ಮೇಡಾ , ಕಾರ್ಯದರ್ಶಿ ರೀನಾ ಡಿ ಸೋಜ , ಕಯ್ಯಾರು ಡೋನ್ ಬೋಸ್ಕೊ ಶಾಲೆಯ ಹಿರಿಯ ಶಿಕ್ಷಕಿ ಮಾಗ್ದಲೆನ್ ಕ್ರಾಸ್ತಾ, ಕೆಥೋಲಿಕ್ ಸಭಾದ ನಿಯೋಜಿತ ಅಧ್ಯಕ್ಷ ಪ್ರವೀಣ್ ಪ್ರಕಾಶ್ ಕ್ರಾಸ್ತ ಮೊದಲಾದವರು ಉಪಸ್ಥಿತರಿದ್ದರು.
ಸಮಾರಂಭದಲ್ಲಿ ವಿವಿಧ ಬೇಡಿಕೆಗಳನ್ನು ಒಳಗೊಂಡ ಮನವಿಯನ್ನು ಮಾಗ್ದಲೆನ್ ಕ್ರಾಸ್ತಾ ಶಾಸಕರಿಗೆ ಸಲ್ಲಿಸಿದರು. ಪ್ರತಿಭಾನ್ವಿತ ವಿದ್ಯಾರ್ಥಿ ಗಳಿಗೆ ಪ್ರತಿಭಾ ಪುರಸ್ಕಾರಗಳನ್ನು ಶಾಸಕರು ವಿತರಿಸಿದರು. ಕೆಥೋಲಿಕ್ ಸಭಾದ ನಿಕಟಪೂರ್ವ ಅಧ್ಯಕ್ಷ ರಾಜ್ ಕುಮಾರ್ ಡಿ ಸೋಜ ಸ್ವಾಗತಿಸಿ,ಆಯೋಗದ ಸಂಚಾಲಕ ರೋಶನ್ ಡಿ ಸೋಜ ವಂದಿಸಿದರು. ಆಶಿಕಾ ಡಿಸೋಜ ಕಾರ್ಯಕ್ರಮ ನಿರೂಪಿಸಿದರು.