ವರದಕ್ಷಿಣೆ ವ್ಯವಸ್ಥೆಯ "ಅನುಕೂಲಗಳನ್ನು" ಪಟ್ಟಿ ಮಾಡುವ ಪುಸ್ತಕ ಪುಟದ ಚಿತ್ರವೊಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಅಂತಹ ಪುಸ್ತಕವನ್ನು ಓದುವುದರಿಂದ ಯುವಕರಿಗೆ ಹಾಗೂ ಸಮಾಜಕ್ಕೆ ಯಾವ ರೀತಿಯ ಸಂದೇಶವನ್ನು ರವಾನಿಸುತ್ತದೆ ಎಂಬ ಪ್ರಶ್ನೆಯನ್ನು ಹುಟ್ಟುಹಾಕಿದೆ.
ವರದಕ್ಷಿಣೆ ವ್ಯವಸ್ಥೆಯ "ಅನುಕೂಲಗಳನ್ನು" ಪಟ್ಟಿ ಮಾಡುವ ಪುಸ್ತಕ ಪುಟದ ಚಿತ್ರವೊಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಅಂತಹ ಪುಸ್ತಕವನ್ನು ಓದುವುದರಿಂದ ಯುವಕರಿಗೆ ಹಾಗೂ ಸಮಾಜಕ್ಕೆ ಯಾವ ರೀತಿಯ ಸಂದೇಶವನ್ನು ರವಾನಿಸುತ್ತದೆ ಎಂಬ ಪ್ರಶ್ನೆಯನ್ನು ಹುಟ್ಟುಹಾಕಿದೆ.
ಟಿ.ಕೆ. ಇಂದ್ರಾಣಿ ಅವರ ನರ್ಸಿಂಗ್ ವಿದ್ಯಾರ್ಥಿಗಳಿಗಿರುವ ಸಮಾಜಶಾಸ್ತ್ರದ ಪಠ್ಯಪುಸ್ತಕದಲ್ಲಿ "ವರದಕ್ಷಿಣೆಯ ಲಾಭಗಳು" ಎಂಬ ಉಪಶೀರ್ಷಿಕೆಯ ಅಡಿಯಲ್ಲಿ ಬರೆಯಲಾಗಿದೆ ಎಂದು ಸಾಮಾಜಿಕ ಮಾಧ್ಯಮ ಬಳಕೆದಾರರು ಹೇಳಿದ್ದಾರೆ. ಈ ಪುಸ್ತಕವು ನರ್ಸಿಂಗ್ ವಿದ್ಯಾರ್ಥಿಗಳಿಗೆ ಓದುವ ವಸ್ತುವಾಗಿದೆ ಹಾಗೂ ಅದರ ಮುಖಪುಟದಲ್ಲಿ ಇದನ್ನು ಭಾರತೀಯ ನರ್ಸಿಂಗ್ ಕೌನ್ಸಿಲ್ ಪಠ್ಯಕ್ರಮದ ಪ್ರಕಾರ ಬರೆಯಲಾಗಿದೆ ಎಂದು ತಿಳಿಸಲಾಗಿದೆ.
ನವದೆಹಲಿ:ಪುಟದ ಚಿತ್ರವನ್ನು ಹಂಚಿಕೊಂಡ ಶಿವಸೇನಾ ನಾಯಕಿ ಹಾಗೂ ರಾಜ್ಯಸಭಾ ಸಂಸದ ಪ್ರಿಯಾಂಕಾ ಚತುರ್ವೇದಿ ಅವರು ಇಂತಹ ಪಠ್ಯವನ್ನು ತೆಗೆದುಹಾಕುವಂತೆ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಗೆ ಕರೆ ನೀಡಿದರು ಹಾಗೂ ನಮ್ಮ ಪಠ್ಯಕ್ರಮದಲ್ಲಿ ಇಂತಹ ವಿಚಾರ ಇರುವುದು "ನಾಚಿಕೆಗೇಡಿನ ಸಂಗತಿ" ಎಂದು ಒತ್ತಿ ಹೇಳಿದ್ದಾರೆ.
ವರದಕ್ಷಿಣೆಯು ಪೀಠೋಪಕರಣಗಳು, ರೆಫ್ರಿಜರೇಟರ್ಗಳು ಹಾಗೂ ವಾಹನಗಳಂತಹ ವಸ್ತುಗಳೊಂದಿಗೆ "ಹೊಸ ಮನೆಯನ್ನು ಸ್ಥಾಪಿಸಲು ಸಹಾಯಕವಾಗಿದೆ" ಎಂದು ಪುಸ್ತಕದಲ್ಲಿ ಹೇಳಲಾಗಿದೆ. ವರದಕ್ಷಿಣೆಯ ಮೂಲಕ ಹುಡುಗಿಯರು ಪೋಷಕರ ಆಸ್ತಿಯಲ್ಲಿ ಪಾಲನ್ನು ಪಡೆಯುವ ಅರ್ಹತೆ ಪಡೆಯುತ್ತಾರೆ ಎಂದು ಬರೆಯಲಾಗಿದೆ.
ವರದಕ್ಷಿಣೆ ವ್ಯವಸ್ಥೆಯ "ಪರೋಕ್ಷ ಪ್ರಯೋಜನ" ಎಂದರೆ ಪೋಷಕರು ಈಗ ತಮ್ಮ ಹೆಣ್ಣುಮಕ್ಕಳಿಗೆ ಕಡಿಮೆ ವರದಕ್ಷಿಣೆ ನೀಡಬೇಕೆಂದು ಶಿಕ್ಷಣವನ್ನು ನೀಡಲು ಆರಂಭಿಸಿದ್ದಾರೆ ಎಂದು ಪುಸ್ತಕದಲ್ಲಿ ಹೇಳಲಾಗಿದೆ. ವರದಕ್ಷಿಣೆ ವ್ಯವಸ್ಥೆಯು ʼಕೆಟ್ಟದ್ದಾಗಿ ಕಾಣುವ ಹುಡುಗಿಯರನ್ನುʼ ಮದುವೆಯಾಗಲು ಸಹಾಯ ಮಾಡುತ್ತದೆ ಎಂಬ ಅಂಶವನ್ನು ಪುಟದಲ್ಲಿ ಕೊನೆಯಲ್ಲಿ ಸೇರಿಸಲಾಗಿದೆ.