ಕಾಸರಗೋಡು: ಪೊಯಿನಾಚಿಯಲ್ಲಿ ಸ್ಫೋಟಕ ಸ್ಫೋಟಗೊಂಡು 70 ವರ್ಷದ ಮಹಿಳೆ ಗಾಯಗೊಂಡಿದ್ದಾರೆ. ಮೀನಾಕ್ಷಿಯಮ್ಮ ಎಂಬವರು ಗಾಯಗೊಂಡವರು. ಹಿತ್ತಲಿನಲ್ಲಿ ಕಂಡುಬಂದ ಐಸ್ ಕ್ರೀಂ ಆಕೃತಿಯ ಚೆಂಡನ್ನು ಎಸೆದಿದ್ದು, ಈ ವೇಳೆ ಸ್ಫೋಟಗೊಂಡು ಅವರು ಗಾಯಗೊಂಡರು. ನಿನ್ನೆ ಬೆಳಗ್ಗೆ 9 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ. ಅಡ್ಕ ವಯಲ್ ಎಂಬಲ್ಲಿ ನಿವಾಸಿ ಮೀನಾಕ್ಷಿಯಮ್ಮ.
ಹಿತ್ತಲಲ್ಲಿ ಕೆಲಸ ಮಾಡುವಾಗ ಐಸ್ ಕ್ರೀಮ್ ಬಾಲ್ ಪತ್ತೆಯಾಯಿತು. ಇದನ್ನು ಎಸೆಯುವ ಹಂತದಲ್ಲಿ ಸ್ಪೋಟ ಉಂಟಾಯಿತು. ಮೀನಾಕ್ಷಿ ಅವರ ಕೈ ಮತ್ತು ಮುಖಕ್ಕೆ ಗಾಯಗಳಾಗಿವೆ. ಮೀನಾಕ್ಷಿ ಅವರನ್ನು ಕಾಸರಗೋಡಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಗಂಭೀರ ಗಾಯಗಳಾಗಿವೆ ಎಂದು ಆಸ್ಪತ್ರೆ ಅಧಿಕಾರಿಗಳು ತಿಳಿಸಿದ್ದಾರೆ.
ಘಟನೆ ಕುರಿತು ಪೆÇಲೀಸರು ತನಿಖೆ ಆರಂಭಿಸಿದ್ದಾರೆ. ಪೆÇಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದರು. ಹಂದಿಯನ್ನು ಓಡಿಸಲು ಬಳಸಿದ ಸ್ಫೋಟಕ ಆಗಿರಬಹುದೆಂದು ಪ್ರಾಥಮಿಕ ಮಾಹಿತಿ.