HEALTH TIPS

ರೆಸಿಪಿ: ಲೆಮನ್‌ ಸೋಡಾ ಹೀಗೆ ಮಾಡಿದರೆ ಅದರ ಫೀಲೇ ಬೇರೆ

 ದಾಹವಾದಾಗ ಅಥವಾ ಹೊಟ್ಟೆ ತುಂಬಾ ತಿಂದಾಗ ಲೆಮನ್‌ ಸೋಡಾ ಕುಡಿಯಬೇಕೆನಿಸುವುದು ಸಹಜ. ಲೆಮನ್‌ ಸೋಡಾ ಮಾಡಲು ಎಲ್ಲರಿಗೆ ಬರುತ್ತೆ, ಆದರೆ ಈ ರೀತಿ ಟೇಸ್ಟಿ ಲೆಮನ್‌ ಸೋಡಾ ಮಾಡಲು ಕೆಲವರಿಗಷ್ಟೇ ಬರುತ್ತೆ. ನಾವು ನಿಮಗೆ ಆ ಸೀಕ್ರೆಟ್ ತಿಳಿಸುತ್ತಿದ್ದೇವೆ. ಇದು ತುಂಬಾ ಸಿಂಪಲ್ ರೆಸಿಪಿ ಆದರೆ ಟೇಸ್ಟ್‌ ಮಾತ್ರ ಭಿನ್ನವಾಗಿರುತ್ತೆ.

ಬನ್ನಿ ಇದನ್ನು ಮಾಡುವುದು ಹೇಗೆ ಎಂದು ನೋಡೋಣ:

ಲೆಮನ್‌ ಸೋಡಾ ರೆಸಿಪಿ

ಬೇಕಾಗುವ ಸಾಮಗ್ರಿ 2 ಚಮಚ ನಿಂಬೆ ರಸ 2 ನಿಂಬೆ ಹಣ್ಣಿನ ಚಿಕ್ಕ ತುಂಡುಗಳು ಸ್ವಲ್ಪ ಐಸ್‌ಕ್ಯೂಬ್ಸ್ 1 ಚಮಚ ಸಕ್ಕರೆ ಪುಡಿ/ಜೇನು 1/2 ಚಮಚ ಕತ್ತರಿಸಿದ ಪುದೀನಾ 1 ಚಮಚ ಬ್ಲ್ಯಾಕ್‌ ಸಾಲ್ಟ್ 1 ಕಪ್‌ ನೀರು/ಕೋಲ್ಡ್ ವಾಟರ್

ಮಾಡುವುದು ಹೇಗೆ? * ಒಂದು ಬೌಲ್‌ಗೆ ನೀರು ಹಾಕಿ ನಿಂಬೆರಸ, ಬ್ಲ್ಯಾಕ್ ಸಾಲ್ಟ್‌ ಹಾಕಿ ಮಿಕ್ಸ್‌ ಮಾಡಿ. * ಈಗ ರಸವನ್ನು ಗ್ಲಾಸ್‌ಗೆ ಸುರಿದು ಅದಕ್ಕೆ ಸ್ವಲ್ಪ ಐಸ್‌ಕ್ಯೂಬ್ಸ್ (Optional) ಹಾಕಿ ನಿಂಬೆಹಣ್ಣಿನ ಹೋಳು ಹಾಕಿ, ಪುದೀನಾ ಹಾಕಿ ಸರ್ವ್‌ ಮಾಡಿ. ಬೇಸಿಗೆಯಲ್ಲಿ ಈ ಜ್ಯೂಸ್‌ ಕುಡಿದರೆ ತುಂಬಾ ರಿಫ್ರೆಷ್ ಅನಿಸುವುದು.

NUTRITIONAL INFORMATION ಸರ್ವ್ - 1 ಗ್ಲಾಸ್ ಕ್ಯಾಲೋರಿ - 164ಕ್ಯಾ ಪ್ರೊಟೀನ್‌ - 2.5ಗ್ರಾಂ ನಾರಿನಂಶ - 4.2 ಗ್ರಾಂ





Tags

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries