ತ್ರಿಶೂರ್: ಯುವತಿಯೊಬ್ಬಳು ತನ್ನ ಕಳವಾದ ಮೊಬೈಲ್ ನ್ನು ತಾನೇ ಸ್ವತಃ ಪತ್ತೆಹಚ್ಚಿದ್ದಾಳೆ. ಘಟನೆ ನಡೆದ 24 ಗಂಟೆಯೊಳಗೆ ಕಳ್ಳ ಸಿಕ್ಕಿಬಿದ್ದಿದ್ದಾನೆ. ಪೂಪತಿ ಮೂಲದ ಇಳಂತುರುತ್ತಿ ಜಸ್ನಾ ಸುಬ್ರಮಣಿಯನ್ ಅವರ ಪೋನ್ ಶನಿವಾರ ಸಂಜೆ ಕಳ್ಳತನವಾಗಿತ್ತು. ಇದೇ ವೇಳೆ ಪಕ್ಕದ ಮನೆಯ ಮೊಬೈಲ್ ಫೆÇೀನ್ ಕೂಡ ಕಳ್ಳತನವಾಗಿರುವುದು ಗಮನಕ್ಕೆ ಬಂತು. ಇದರೊಂದಿಗೆ ಹೇಗಾದರೂ ಮಾಡಿ ಕಳ್ಳನನ್ನು ಪತ್ತೆ ಹಚ್ಚಬೇಕೆಂದು ಜೆಸ್ಸಿ ನಿರ್ಧರಿಸಿದಳು.
ಸಮೀಪದ ಮನೆಯೊಂದರಲ್ಲಿ ತಪಾಸಣೆ ನಡೆಸಿದಾಗ ಕಳವಾದ ವೇಳೆ ಯುವಕನೊಬ್ಬ ಆಯುರ್ವೇದ ಉತ್ಪನ್ನಗಳೊಂದಿಗೆ ಬಂದಿರುವುದು ಬೆಳಕಿಗೆ ಬಂದಿದೆ. ನಂತರ ಜೇಸಿ ಮಾಳ ಪೋಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಿದಳು. ವಾಪಸ್ಸು ಬರುವಾಗ ಅದೇ ಕಂಪನಿಯ ಆಯುರ್ವೇದ ಉತ್ಪನ್ನಗಳನ್ನು ಮಾರಲು ಬರುತ್ತಿದ್ದವರನ್ನು ಕಂಡಳು. ಅವರೊಂದಿಗೆ ಮಾಹಿತಿ ಹಂಚಿಕೊಂಡಿದ್ದು, ಕಂಪನಿಯವರು ಅವರಿಂದ ಮ್ಯಾನೇಜರ್ ನಂಬರ್ ಪಡೆದು ಮಾಹಿತಿ ನೀಡಿದರು.
ನೆರೆಹೊರೆಯವರಿಂದ ಬಂದ ಮಾಹಿತಿಯ ಆಧಾರದ ಮೇಲೆ ಅಲ್ಲಿಗೆ ಬಂದ ವ್ಯಕ್ತಿಯ ಅಂದಾಜು ಗುರುತನ್ನು ಮ್ಯಾನೇಜರರಿಗೆ ತಿಳಿಸಲಾಯಿತು. ನಂತರ ಮ್ಯಾನೇಜರ್ ನಾಲ್ವರ ಚಿತ್ರಗಳನ್ನು ಜೆಸ್ಸಿಗೆ ಕಳುಹಿಸಿದರು. ಅಕ್ಕಪಕ್ಕದವರಿಗೆ ತೋರಿಸಿ ಅಲ್ಲಿ ಮಾರಾಟಕ್ಕೆ ಬಂದವರ ಚಿತ್ರ ಗುರುತಿಸಿ ಮ್ಯಾನೇಜರ್ ಗೆ ಮಾಹಿತಿ ನೀಡಿದಳು. ಮ್ಯಾನೇಜರ್ ನೇರವಾಗಿ ಕರೆ ಮಾಡಿ ವಿಚಾರಿಸಿದಾಗ ಕಳ್ಳತನ ಮಾಡಿದ್ದನ್ನು ಆ ಖದೀಮ ಒಪ್ಪಿಕೊಂಡ. ಬಳಿಕ ಜೆಸ್ಸಿಯ ಪೋನ್ ನ್ನು ಮ್ಯಾನೇಜರರಿಗೆ ಮರಳಿಸಿದ ಬಳಿಕ ಆ ವ್ಯಕ್ತಿ ಮರೆಯಾದ. ಮ್ಯಾನೇಜರ್ ನೇರವಾಗಿ ಮಾಲಾ ನಿಲ್ದಾಣದಲ್ಲಿ ಜೆಸ್ಸಿಗೆ ಪೋನ್ ನೀಡಿದರು. |ಆದರೆ ಜೆಸ್ಸಿಯ ಪೋನಷ್ಟೇ ಸಿಕ್ಕಿದ್ದು ಕಳವಾದ ಅಕ್ಕಪಕ್ಕದವರ ಪೋನ್ ವಾಪಸ್ ಆಗಿಲ್ಲ ಎಂದು ತಿಳಿದುಬಂದಿದೆ.