ಕಾಸರಗೋಡು: ಸೇವೆಯಿಂದ ನಿವೃತ್ತರಾದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಕಾಸರಗೋಡು ಜಿಲ್ಲಾ ಯೋಜನಾಧಿಕಾರಿ ಬೀನಮ್ಮ ಜೇಕಬ್ ಅವರಿಗೆ ಬೀಳ್ಕೊಡುಗೆ ಸಮಾರಂಭ ನಡೆಯಿತು.ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಜಿಲ್ಲಾ ಪ್ರಧಾನ ಸಿಬ್ಬಂದಿ ಪರಿಷತ್ ವತಿಯಿಂದ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಚೆರ್ಕಳ ಮಾರ್ಥೋಮ ಶಾಲಾ ಜುಬಿಲಿ ಸಭಾಂಗಣದಲ್ಲಿ ನಡೆದ ಸಮಾರಂಭವನ್ನು ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಅಧಿಕಾರಿ ಶಿಮ್ನಾ ವಿ.ಎಸ್ ಉದ್ಘಾಟಿಸಿದರು. ನಿವೃತ್ತರಾಗುತ್ತಿರುವ ಬೀನಮ್ಮ ಜೇಕಬ್ ಅವರಿಗೆ ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು. ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಬಿಂದು ಸಿ.ಎ ಅಧ್ಯಕ್ಷತೆ ವಹಿಸಿದ್ದರು.
ಹಿರಿಯ ಅಧೀಕ್ಷಕಿ ಕ್ರಿಸ್ಟಿ ಸಿ ಉತ್ತುಪ್, ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳಾದ ರಜಿಯಾ ಕೆ.ಎಂ. ಶೈನಿ ಐಸಾಕ್, ಲೀನಾ ಕೂಟ್ಟಾಯಿ, ಆದಿರಾ ಪಿ, ಲತಿಕಾ ಜ್ಯೋತಿ ಪಿ, ಲತಿಕಾ ಪತ್ರವಳಪ್ಪಿಲ್. ಬಿಜಿ ಇ ಕೆ, ಸ್ಟಾಫ್ ಕೌನ್ಸಿಲ್ ಕನ್ವೀನರ್ ಎ.ಟಿ. ಶಶಿ ಉಪಸ್ಥಿತರಿದ್ದರು.