HEALTH TIPS

ಕ್ಯಾಥೊಲಿಕ್ ಶಾಲೆಗಳಲ್ಲಿ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣ; ಕ್ಷಮೆ ಯಾಚಿಸಿದ ಪೋಪ್ ಫ್ರಾನ್ಸಿಸ್

Top Post Ad

Click to join Samarasasudhi Official Whatsapp Group

Qries

             ವ್ಯಾಟಿಕನ್ ಸಿಟಿ: ಕೆನಡಾದ ವಸತಿ ಶಾಲೆಗಳಲ್ಲಿ ರೋಮನ್ ಕ್ಯಾಥೊಲಿಕ್ ಚರ್ಚ್ ನ ಸದಸ್ಯರು ಎಸಗಿದ ಶೋಚನೀಯ ಲೈಂಗಿಕ ದೌರ್ಜನ್ಯಕ್ಕೆ ಪೋಪ್ ಫ್ರಾನ್ಸಿಸ್ ಕ್ಷಮೆ ಯಾಚಿಸಿದ್ದಾರೆ.

          ವ್ಯಾಟಿಕನ್ ನಲ್ಲಿ ಶುಕ್ರವಾರ ಬುಡಕಟ್ಟು ಸಮುದಾಯದ ನಿಯೋಗದ ಜತೆ ಮಾತನಾಡಿದ ಪೋಪ್, ಶಾಲೆಯಲ್ಲಿದ್ದಾಗ ಬುಡಕಟ್ಟು ಸಮುದಾಯದ ಮಕ್ಕಳು ಅನುಭವಿಸಿದ ನೋವು, ಯಾತನೆಯಲ್ಲಿ ಕ್ಯಾಥೊಲಿಕರು ವಹಿಸಿದ ಪಾತ್ರಕ್ಕಾಗಿ ಕ್ಷಮೆ ಯಾಚಿಸುವುದಾಗಿ ಹೇಳಿದರು.

              ಹಲವು ಕ್ಯಾಥೊಲಿಕರು, ಅದರಲ್ಲೂ ಶಿಕ್ಷಣದ ಜವಾಬ್ದಾರಿ ಹೊಂದಿದವರು ಎಸಗಿದ ಕೃತ್ಯದಿಂದ ನನಗೆ ದುಃಖ ಮತ್ತು ಅವಮಾನವಾಗಿದೆ. ನಿಮಗೆ ಆದ ಹಾನಿ, ನೀವು ಅನುಭವಿಸಿದ ತೊಂದರೆ, ನಿಮ್ಮ ಸಂಸ್ಕೃತಿ, ಆಧ್ಯಾತ್ಮಿಕ ಮೌಲ್ಯ, ಅನನ್ಯತೆಯ ಬಗ್ಗೆ ಅವರು ತೋರಿದ ಅಗೌರವದಿಂದ ಅಪಾರ ನೋವಾಗಿದೆ. ಕ್ಯಾಥೊಲಿಕ್ ಚರ್ಚ್ ನ ಈ ಸದಸ್ಯರು ತೋರಿದ ವರ್ತನೆಗಾಗಿ ದೇವರ ಕ್ಷಮೆ ಯಾಚಿಸುತ್ತೇನೆ. ಅಲ್ಲದೆ ಹೃದಯಾಂತರಾಳದಿಂದ ನನ್ನನ್ನು ಕ್ಷಮಿಸಿ ಎಂದು ಕೇಳಿಕೊಳ್ಳುತ್ತೇನೆ. ಅಲ್ಲದೆ ನಿಮ್ಮ ಕ್ಷಮೆ ಯಾಚಿಸಿದ ಕೆನಡಾದ ಬಿಷಪರ ಜತೆ ನಾನೂ ಸೇರುತ್ತೇನೆ ಎಂದು ಹೇಳಿದರು.

ಕೆನಡಾದಲ್ಲಿ 1800ರ ಅಂತಿಮ ದಶಕ ಹಾಗೂ 1990ರಲ್ಲಿ 1,50,000ಕ್ಕೂ ಅಧಿಕ ಬುಡಕಟ್ಟು ಸಮುದಾಯದ ಮಕ್ಕಳನ್ನು ಬಲವಂತವಾಗಿ ರೋಮನ್ ಕ್ಯಾಥೊಲಿಕ್ ಚರ್ಚ್ ಗಳ ಅಧೀನದ ವಸತಿ ಶಾಲೆಗೆ ಸೇರಿಸಲಾಗಿತ್ತು. ಈ ಮಕ್ಕಳನ್ನು ಬುಡಕಟ್ಟು ಸಮುದಾಯದ ಭಾಷೆ, ಸಂಸ್ಕೃತಿಯಿಂದ ವಿಮುಖಗೊಳಿಸಿ, ಹೆತ್ತವರಿಂದ ದೂರಗೊಳಿಸಿ ಅವರ ಮೇಲೆ ಮಾನಸಿಕ, ದೈಹಿಕ ಹಿಂಸೆಯ ಜತೆಗೆ ಲೈಂಗಿಕ ದೌರ್ಜನ್ಯವನ್ನೂ ಎಸಗಿರುವುದು ಸಾಬೀತಾಗಿದೆ ಎಂದು ಫೆಡರಲ್ ತನಿಖಾ ಸಂಸ್ಥೆ 2015ರಲ್ಲಿ ವರದಿ ನೀಡಿತ್ತು.


Below Post Ad

src="https://blogger.googleusercontent.com/img/b/R29vZ2xl/AVvXsEik3hLMvgO1WDICUKu_VF5lQRG3CMZau_AmC5MorS73B9lRYpLdDKJGTnB8c-U47BHqrAJ7dkiQUqiUWGQ6qg9A5jtCXrPkzIP4GPJfI00HmwhHX-3VG35FjkD_MxxI10r2v4FqSQ8LuyjG/w640-h360/samarasa+new+add.JPG" width="500px" / />



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.
Qries