ಕುಂಬಳೆ: ಕನ್ನಡ ಸಾಹಿತ್ಯ ಪರಿಷತ್ತಿನ ಆಶ್ರಯದಲ್ಲಿ ದಿ.ಪ್ರೊ.ಸುಬ್ರಾಯ ಭಟ್ಟರ ಜನ್ಮ ಶತಮಾನೋತ್ಸವ ಸಮಾರಂಭವನ್ನು ಆಚರಿಸುತ್ತಿರುವುದು ಸ್ವಾಗತಾರ್ಹ ಮತ್ತು ಅರ್ಥಪೂರ್ಣ. ಬಹುಭಾಷಾ ವಿದ್ವಾಂಸರಾದ ಅವರು ಸಾಹಿತಿಯಷ್ಟೇ ಅಲ್ಲದೆ ಶ್ರೇಷ್ಠ ಪ್ರಾಚಾರ್ಯರಾಗಿದ್ದರು. ವಾಗ್ಮಿಗಳಾದ ಅವರ ಪ್ರತಿಭೆ ಅನ್ಯಾದೃಶ್ಯವಾದುದು ಎಂದು ಹಿರಿಯ ನ್ಯಾಯವಾದಿ, ಕಸಾಪ ಕೇರಳ ಗಡಿನಾಡ ಘಟಕದ ಮಾಜೀ ಅಧ್ಯಕ್ಷ ಐ.ವಿ.ಭಟ್ ಅ|ಭಿಪ್ರಾಯ ವ್ಯಕ್ತಪಡಿಸಿದರು.
ಕಸಾಪ ಕೇರಳ ಗಡಿನಾಡ ಘಟಕದ ಆ|ಶ್ರಯದಲ್ಲಿ ಇತ್ತೀಚೆಗೆ ಮಾಯಿಪ್ಪಾಡಿ ಶಿಕ್ಷಕ ತರಬೇತಿ ಕೇಂದ್ರದಲ್ಲಿ ಆಯೋಜಿಸಲಾಗಿದ್ದ ಪ್ರೊ.ಸುಬ್ರಾಯ ಭಟ್ಟ ದತ್ತಿ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಈ ಸಂದರ್ಭ ಅವರು ನಿವೃತ್ತ ಪ್ರಾ|ಧ್ಯಾಪಿಕೆ ಡಾ.ಪ್ರಮೀಳಾ ಮಾಧವ ಅವರ ಗದಾ|ಯುದ್ದ ದರ್ಪಣ ಕೃತಿಯನ್ನು ಸೊಗಸಾಗಿ ಅವಲೋಕನ ನಡೆಸಿದರು. ಸಾಹಿತಿ, ನಿವೃತ್ತ ಪ್ರಾಂಶುಪಾಲ ಪ್ರೊ.ಪಿ.ಎನ್.ಮೂಡಿತ್ತಾಯ ಅವರ ಬದುಕು-ಬರಹಗಳ ಕುರಿತು ಉಪನ್ಯಾಸ ನಡೆಯಿತು. ಡಯಟ್ ಉಪನ್ಯಾಸಕ |ಶಶಿಧರ ಹಾಗೂ ರಘುರಾಮ ಉಪಸ್ಥಿತರಿದ್ದು ಶುಭಹಾರೈಸಿದರು. ದಿ.ಸುಬ್ರಾಯ ಭಟ್ಟರ ಸುಪುತ್ರಿ, ಶಿಕ್ಷಕಿ ವಾಣಿ ಪಿ.ಎಸ್ ಅವರು ತಮ್ಮ ತೀರ್ಥರೂಪರ ಸೇವಾ ಭಾವನೆ, ಸವರ್|ರೊಂದಿಗಿನ ಒಡನಾಡಗಳನ್ನು ನೆನಪಿಸಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕಸಾಪ ಕೇರಳ ಗಡಿನಾಡ ಘಟಕದ ಅಧ್ಯಕ್ಷ ಎಸ್.ವಿ.ಭಟ್ ಅವರು ಗಣೇಶ ಪ್ರಸಾದ್ ಪಾಣೂರು ಸಂಗ್ರಹಿಸಿದ ಮಕ್ಕಳಿಗಾಗಿ ಜನರಲ್ ನಾಲೆಜ್ ಕೃತಿ ಬಿಡುಗಡೆಗೊಳಿಸಿದರು. ಕೃತಿಕಾರ ಗಣೇಶ್ ಪ್ರಸಾದ್ ಪಾಣೂರು ಅನಿಸಿಕೆ ವ್ಯಕ್ತಪಡಿಸಿದರು. ಕಸಾ|ಪ ಗೌರವ ಕಾರ್ಯದರ್ಶಿ ಪ್ರದೀಪ್ ಕುಮಾರ್ ಶೆಟ್ಟಿ ಸ್ವಾಗತಿಸಿ, ಶೇಖರ ಶೆಟ್ಟಿ ಕೆ. ನಿರೂಪಿಸಿ ವಂದಿಸಿದರು.