ಮುಂಬೈ: ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸರಕಾರ ವಿರೋಧಿ ವಿಷಯ, ಫೋಟೋ ಅಥವಾ ವೀಡಿಯೋ ಪೋಸ್ಟ್ ಮಾಡಬಾರದೆಂದು ಮುಂಬೈಯ ಟಾಟಾ ಇನ್‍ಸ್ಟಿಟ್ಯೂಟ್ ಆಫ್ ಫಂಡಮೆಂಟಲ್ ರಿಸರ್ಚ್ ತನ್ನ ಉದ್ಯೋಗಿಗಳು ಮತ್ತವರ ಕುಟುಂಬ ಸದಸ್ಯರಿಗೆ ಸೂಚನೆ ನೀಡಿದೆ ಎಂದು scroll.in ವರದಿ ಮಾಡಿದೆ.

ಈ ಕುರಿತಂತೆ ಸಂಸ್ಥೆಯ ರಿಜಿಸ್ಟ್ರಾರ್, ನಿವೃತ್ತ ವಿಂಗ್ ಕಮಾಂಡರ್ ಜಾರ್ಜ್ ಆಂಟನಿ ಅವರು ಎಪ್ರಿಲ್ 13ರಂದು ಪತ್ರ ಬರೆದಿದ್ದಾರೆ. ಕೆಲ ಅಸಮಾಧಾನ ಹೊಂದಿದ ಉದ್ಯೋಗಿಗಳು ಸಾಮಾಜಿಕ ಜಾಲತಾಣಗಳಲ್ಲಿ ಸರಕಾರ ವಿರೋಧಿ ವಿಷಯ ಶೇರ್ ಮಾಡುತ್ತಿರುವುದು ಕೇಂದ್ರದ ಏಜನ್ಸಿಗಳು ಮತ್ತು ಅಣು ವಿದ್ಯುತ್ ಇಲಾಖೆಯ ಗಮನಕ್ಕೆ ಬಂದಿದೆ ಎಂದು ಪತ್ರದಲ್ಲಿ ಹೇಳಲಾಗಿದೆ.
ಅಣು ವಿದ್ಯುತ್ ಇಲಾಖೆಯ ಕಚೇರಿಗಳು ಮತ್ತು ಇತರ ಘಟಕಗಳ ಫೋಟೋಗಳು ಮತ್ತು ವೀಡಿಯೋಗಳನ್ನು ಕೆಲ ಉದ್ಯೋಗಿಗಳು ಮತ್ತು ಅವರ ಕುಟುಂಬ ಸದಸ್ಯರು ಶೇರ್ ಮಾಡುತ್ತಿರುವುದು ಗಮನಕ್ಕೆ ಬಂದಿದ್ದು ಇದಕ್ಕೆ ಏಜನ್ಸಿಗಳು ಮತ್ತು ಇಲಾಖೆ ಆಕ್ಷೇಪಿಸಿದೆ ಎಂದು ಪತ್ರದಲ್ಲಿ ಹೇಳಲಾಗಿದೆ.
ಈ ರೀತಿ ಅಣು ವಿದ್ಯುತ್ ಕೇಂದ್ರ ಕಚೇರಿಗಳು, ವಸತಿ ಕಾಲನಿಗಳು ಅಥವಾ ಇತರ ಸರಕಾರಿ ಆಸ್ತಿಗಳ ಫೊಟೋಗಳು ಅಥವಾ ವೀಡಿಯೋಗಳನ್ನು ಶೇರ್ ಮಾಡುವುದು ಗಂಭೀರ ಭದ್ರತಾ ಪರಿಣಾಮಗಳಿಗೆ ಕಾರಣವಾಗಬಹುದು ಎಂದು ಪತ್ರದಲ್ಲಿ ಹೇಳಲಾಗಿದೆ.