HEALTH TIPS

ಯೋಜನಾ ಅನುಷ್ಠಾನ: ಕಾಞಂಗಾಡು ಬ್ಲಾಕ್ ಪಂಚಾಯತ್ ಗೆ ರಾಜ್ಯದಲ್ಲಿ ಐದನೇ ಸ್ಥಾನ

                                                    

                ಕಾಸರಗೋಡು: ಕಾಞಂಗಾಡು ಬ್ಲಾಕ್ ಪಂಚಾಯತ್ ಪ್ರಸಕ್ತ ಆರ್ಥಿಕ ವರ್ಷದಲ್ಲಿ `5 ಕೋಟಿ 28 ಲಕ್ಷ 19 ಸಾವಿರ ವೆಚ್ಚದಲ್ಲಿ ಶೇ.106.18 ಯೋಜನೆಗಳನ್ನು ಅನುಷ್ಠಾನಗೊಳಿಸುವ ಮೂಲಕ ರಾಜ್ಯದಲ್ಲಿ ಐದನೇ ಸ್ಥಾನ ಗಳಿಸಿದೆ.

                 ಎಲ್ಲ ಕ್ಷೇತ್ರಗಳ ಸಮಗ್ರ ಅಭಿವೃದ್ಧಿಗೆ ಆಡಳಿತ ಮಂಡಳಿ, ಸಿಬ್ಬಂದಿ ಹಾಗೂ ಜಿಲ್ಲಾ ಯೋಜನಾ ಸಮಿತಿಯ ದೂರದೃಷ್ಟಿ ಹಾಗೂ ಪ್ರಾಮಾಣಿಕ ಪ್ರಯತ್ನದಿಂದಾಗಿ ಈ ಸಾಧನೆಯಾಗಿದೆ ಎಂದು ಬ್ಲಾಕ್ ಪಂಚಾಯಿತಿ ಅಧ್ಯಕ್ಷ ಕೆ.ಮಣಿಕಂಠನ್ ಹೇಳಿರುವರು. 

                    ವಸತಿ ಯೋಜನೆಗಳಿಗೆ 75 ಲಕ್ಷ ಮತ್ತು ಕುಡಿಯುವ ನೀರಿನ ಯೋಜನೆಗಳಿಗೆ 48,91,000 ಮೊತ್ತ ವಿನಿಯೋಗಿಸಲಾಗಿದೆ.  ನೈರ್ಮಲ್ಯ ವಲಯದ ಚಟುವಟಿಕೆಗಳಿಗೆ ರೂ.48,91,000, ಎಸ್‍ಸಿ/ಎಸ್‍ಟಿ ವಿದ್ಯಾರ್ಥಿ ವೇತನ ಮತ್ತು ಅಧ್ಯಯನ ಕೊಠಡಿಗೆ ರೂ.69,69,000, ಆರೋಗ್ಯಕ್ಕೆ ರೂ.94,17,000, ಉತ್ಪಾದನೆಗೆ ರೂ.95,55,000, ಮಹಿಳೆಯರ ಉದ್ಯೋಗಕ್ಕಾಗಿ ರೂ.30,32,000. ಮತ್ತು ಮೂಲಸೌಕರ್ಯಕ್ಕಾಗಿ 96,15,000 ರೂ.ಗಳನ್ನು ಪಂಚಾಯತ್ ವೆಚ್ಚ ಮಾಡಿದೆ.

                 ಕೋವಿಡ್ ಯುಗದಲ್ಲಿ ರೋಗಿಗಳಿಗೆ ಆಂಬ್ಯುಲೆನ್ಸ್‍ಗಳು, ತೃತೀಯಲಿಂಗಿಗಳಿಗೆ ಆನ್‍ಲೈನ್ ಕಲಾ ಮೇಳ, ತೃತೀಯಲಿಂಗಿಗಳ ಶಾಶ್ವತ ಕಲಾ ತಂಡ, ಸ್ಮಾರ್ಟ್ ಅಂಗನವಾಡಿಗಳು, ಮಹಿಳಾ ಸ್ನೇಹಿ ಶೌಚಾಲಯಗಳು, ಅಂಗವಿಕಲರ ಸಹಾಯಗಳ ವಿತರಣೆ, ಡಯಾಲಿಸಿಸ್ ಕೇಂದ್ರ, ನೈರ್ಮಲ್ಯ ಘಟಕ ಮತ್ತು ಸಂಚಾರಿ ಪಶುವೈದ್ಯಕೀಯ ಚಿಕಿತ್ಸಾಲಯಗಳಿವೆ. ಕಾಞಂಗಾಡು ಬ್ಲಾಕ್ ಪಂಚಾಯತ್ ವ್ಯಾಪ್ತಿಯ ಶಾಲೆಗಳಲ್ಲಿ ಸ್ಯಾನಿಟರಿ ನ್ಯಾಪ್ಕಿನ್ ಸೌಲಭ್ಯಗಳನ್ನು ಒದಗಿಸಿದ ಶೀಪ್ಯಾಡ್ ಯೋಜನೆ, ಯುವಕರಿಗೆ ಉದ್ಯೋಗಾವಕಾಶಗಳನ್ನು ಸೃಷ್ಟಿಸಲು ಮೆಗಾ ಉದ್ಯೋಗ ಮೇಳ ಮತ್ತು ಯುವ ಕ್ರಿಯಾ ಪಡೆ ಮುಂತಾದ ಗಮನಾರ್ಹ ಯೋಜನೆಗಳನ್ನು ಜಾರಿಗೆ ತಂದಿದೆ. ಕೊರೋನಾ ಅವಧಿಯಲ್ಲಿ ತನ್ನ ಮಿತಿಗಳ ನಡುವೆಯೂ ಕಾಞಂಗಾಡು ಬ್ಲಾಕ್ ಪಂಚಾಯತ್ ಜಿಲ್ಲೆಗೆ ಮಾದರಿಯಾಗುವ ಮೂಲಕ ಇದನ್ನು ಸಾಧಿಸಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries