ಕಾಸರಗೋಡು: ಕೃಷಿಯಲ್ಲಿ ಹೊಸ ತಂತ್ರಜ್ಞಾನವನ್ನು ಅಳವಡಿಸಿಕೊಂಡು ಕಡಿಮೆ ವೆಚ್ಚದಲ್ಲಿ ಹೆಚ್ಚಿನ ಉತ್ಪನ್ನ ಪಡೆಯುವ ಮೂಲಕ ಕೃಷಿಯನ್ನು ಮತ್ತಷ್ಟು ಅಭಿವೃದ್ಧಿಪಡಿಸಬೇಕು ಎಂದು ಶಾಸಕ ಎನ್.ಎ.ನೆಲ್ಲಿಕುನ್ನು ತಿಳಿಸಿದ್ದಾರೆ.
ಅವರು ಆಜಾದಿ ಕಾ ಅಮೃತ ಮಹೋತ್ಸವದ ಅಂಗವಾಗಿ ಕಾಸರಗೋಡು ಕೇಂದ್ರ ಕೃಷಿ ಸಚಿವಾಲಯದ 'ಕಿಸಾನ್ ಭಾಗೀದಾರಿ ಪ್ರಾಥಮಿಕತಾ ಹಮಾರಿ'ಯೋಜನೆಯನ್ವಯ ಕಸರಗೋಡು ಸಿಪಿಸಿಆರ್ ಐ ಆಯೋಜಿಸಿದ್ದ ಕಿಸಾನ್ ಮೇಳ ಉದ್ಘಾಟಿಸಿ ಮಾತನಾಡಿದರು. ಜಿಲ್ಲಾ ಮಟ್ಟದ ಕೃಷಿ ವಸ್ತು ಪ್ರದರ್ಶನವನ್ನು ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಪಿ.ಬೇಬಿ ಬಾಲಕೃಷ್ಣನ್ ಉದ್ಘಾಟಿಸಿದರು. ಕೃಷಿ ಕ್ಷೇತ್ರದಲ್ಲಿ ಗಣನೀಯ ಸಾಧನೆ ತೋರಿದವರು ಹಾಗೂ ರಾಜ್ಯ ರೈತ ಪ್ರಶಸ್ತಿ ವಿಜೇತರನ್ನು ಈ ಸಂದರ್ಭ ಸನ್ಮಾನಿಸಲಾಯಿತು. ಮೊಗ್ರಾಲ್ ಪುತ್ತೂರು ಗ್ರಾಮ ಪಂಚಾಯತ್ ಅಧ್ಯಕ್ಷೆ, ವಕೀಲೆ ಟಿ.ಕೆ.ಶಮೀರ ಉಪಸ್ಥಿತರಿದ್ದರು. ಸಿಪಿಸಿಆರ್‍ಐ ನಿರ್ದೇಶಕಿ ಡಾ. ಅನಿತಾ ಕರುಣ್ ಮುಖ್ಯ ಭಾಷಣ ಮಾಡಿದರು.
ಕೇಂದ್ರೀಕೃತ ಕೃಷಿ ಯೋಜನೆಗಳ ವಿವರಣೆ ಕಾಸರಗೋಡುಪ್ರಧಾನ ಕೃಷಿ ಅಧಿಕಾರಿ ಆರ್.ವೀಣಾರಾಣಿ ನಿರ್ವಹಿಸಿದರು.
ನೀಲೇಶ್ವgಂ ಕೃಷಿ ಅಧಿಕಾರಿ ಕೆ.ಎ.ಶಿಜೋ ಮನೆ ತೋಟದ ಔಷಧೀಯ ಉದ್ಯಾನ ವಿಷಯ ಕುರಿತು ಮಾತನಾಡಿದರು. ಐಸಿಎಆರ್ ಪ್ರಧಾನ ವಿಜ್ಞಾನಿ ಡಾ. ಸಿ. ತಂಬಾನ್ ನೇತೃತ್ವ ವಹಿಸಿದ್ದರು. ಕಾಸರಗೋಡು ಪಶುವೈದ್ಯಕೀಯ ತಂಡದ ನೇತೃತ್ವದಲ್ಲಿ ಪಶುಆರೋಗ್ಯ ಅಭಿಯಾನ ನಡೆಯಿತು. ಕಾಸರಗೋಡು ಆತ್ಮ ಯೋಜನೆಯ ನಿರ್ದೇಶಕಿ ಟಿ ಸುಶೀಲ ಸ್ವಾಗತಿಸಿದರು. ಕೆವಿಕೆ ಮುಖ್ಯಸ್ಥ ಡಾ.ಟಿ.ಎಸ್.ಮನೋಜಕುಮಾರ್ ವಂದಿಸಿದರು. ಕಿಸಾನ್ ಮೇಳದ ಅಂಗವಾಗಿ 20ಕ್ಕೂ ಹೆಚ್ಚು ಪ್ರದರ್ಶನ ಮಳಿಗೆಗಳನ್ನು ಸ್ಥಾಪಿಸಲಾಗಿತ್ತು. ಕಾರ್ಯಕ್ರಮದಲ್ಲಿ ಸುಮಾರು 500 ರೈತರು ಭಾಗವಹಿಸಿದ್ದರು.