HEALTH TIPS

ತಾಯಿಯನ್ನೇ ಕೊಲೆ ಮಾಡಿದ ಆರೋಪ: ವಿದ್ಯಾರ್ಥಿಗೆ ದ್ವಿತೀಯ ಪಿಯುಸಿ ಪರೀಕ್ಷೆ ಬರೆಯಲು ಅವಕಾಶ ನಿರಾಕರಿಸಿದ ಕಾಲೇಜು

            ಬೆಂಗಳೂರು: ದುರದೃಷ್ಟಕರ ಘಟನೆಯೊಂದರಲ್ಲಿ, ತನ್ನ ತಾಯಿಯ ಕೊಲೆ ಪ್ರಕರಣದ ಆರೋಪಿಯಾಗಿದ್ದ 17 ವರ್ಷದ ತೇಜಸ್ವಿ ಎಂಬ ವಿದ್ಯಾರ್ಥಿಗೆ ನಾಳೆ ಶುಕ್ರವಾರ ಪ್ರಾರಂಭವಾಗಲಿರುವ ದ್ವಿತೀಯ ಪಿಯುಸಿ ಪರೀಕ್ಷೆಯನ್ನು ಬರೆಯಲು ಕಾಲೇಜು ಅನುಮತಿ ನಿರಾಕರಿಸಿದೆ. ತನ್ನ ಕಾಲೇಜಿನಿಂದ ಅನುಮತಿ ಪಡೆಯಲು ಅವನು ಮಾಡಿದ ಎಲ್ಲಾ ಪ್ರಯತ್ನಗಳು ವ್ಯರ್ಥವಾಗಿದೆ.

               ಹೆಸರು ಹೇಳಲಿಚ್ಛಿಸದವರು ನೀಡಿರುವ ಮಾಹಿತಿ ಪ್ರಕಾರ, ಬೆಂಗಳೂರಿನ ತಾವರೆಕೆರೆಯಲ್ಲಿ ತಂದೆ ಮತ್ತು ಐದು ವರ್ಷದ ಸಹೋದರನೊಂದಿಗೆ ವಾಸಿಸುತ್ತಿದ್ದ ಯಾದಗಿರಿ ಮೂಲದ ವಿಜಯ್ (ಹೆಸರು ಬದಲಾಯಿಸಲಾಗಿದೆ) ಫೆಬ್ರವರಿಯಲ್ಲಿ ತನ್ನ ತಾಯಿಯನ್ನು ಕೊಲೆ ಮಾಡಿದ ಆರೋಪಿಯಾಗಿದ್ದು, ಬೆಂಗಳೂರಿನ ವಿಚಕ್ಷಣಾ ಗೃಹಕ್ಕೆ ಕಳುಹಿಸಲಾಗಿದೆ.

                  ವಿಜಯ್ ಪ್ರಕರಣವು ಬೆಂಗಳೂರಿನ ಬಾಲ ನ್ಯಾಯ ಮಂಡಳಿಯ ಮುಂದೆ ವಿಚಾರಣೆಗೆ ಬಂದಿತು. ಆದಾಗ್ಯೂ, ಎರಡು ತಿಂಗಳ ಹಿಂದೆ ಅವರು ತಮ್ಮ 12ನೇ ತರಗತಿಯ ಪರೀಕ್ಷೆಗಳಿಗೆ ತಯಾರಿ ನಡೆಸಲು ಜಾಮೀನಿನ ಮೇಲೆ ಬಿಡುಗಡೆಗೊಂಡರು.

              ಆದರೆ, ದುರದೃಷ್ಟವಶಾತ್ ವಿಜಯ್ ಓದುತ್ತಿದ್ದ ಖಾಸಗಿ ಕಾಲೇಜಿನಿಂದ ಪರೀಕ್ಷೆ ಬರೆಯಲು ಅನುಮತಿ ನಿರಾಕರಿಸಲಾಗಿದೆ ಎಂದು ಎನ್‌ಜಿಒ ಮೂಲಗಳು ವಿವರಿಸಿವೆ. ಪ್ರಥಮ ಪಿಯುಸಿಯಲ್ಲಿ 96% ಮತ್ತು SSಐಅ ಯಲ್ಲಿ 85% ಅಂಕಗಳನ್ನು ಗಳಿಸಿದ ಹುಡುಗನಿಗೆ ಈಗ ಬೋರ್ಡ್ ಪರೀಕ್ಷೆಗಳನ್ನು ಬರೆಯಲು ಅನುಮತಿ ಇಲ್ಲದಾಗಿದೆ.

              ನಿರಾಶೆಯ ಭಾವನೆಯಿಂದ ಹುಡುಗನು ವಕೀಲರ ಮೂಲಕ, ಎನ್‌ಜಿಒಗಳು ಮತ್ತು ಸಂಘರ್ಷದಲ್ಲಿರುವ ಮಕ್ಕಳೊಂದಿಗೆ ವ್ಯವಹರಿಸುವ ಸರ್ಕಾರಿ ಸಂಸ್ಥೆಗಳ ಮೂಲಕ ಹೇಗಾದರೂ ಅನುಮತಿಯನ್ನು ಪಡೆಯಲು ಸಂಪರ್ಕಿಸಿದನು. ಆದರೆ ಎಲ್ಲರ ಪ್ರಯತ್ನಗಳು ವಿಫಲವಾಗಿದೆ. ಮುಂದಿನ ಶೈಕ್ಷಣಿಕ ವರ್ಷದಲ್ಲಿ ಪರೀಕ್ಷೆಗಳನ್ನು ಬರೆಯಲು ಪಿಯು ಬೋರ್ಡ್‌ನಿಂದ ಅನುಮತಿ ಪಡೆಯುವುದು ಮಾತ್ರ ಸಾಧ್ಯವಾಗಿದೆ ಎಂದು ಮೂಲಗಳು ತಿಳಿಸಿವೆ.

              ವಿಜ್ಞಾನ ವಿಷಯವನ್ನು ಓದುತ್ತಿರುವ ವಿಜಯ್ ದುರದೃಷ್ಟವಶಾತ್ ಪ್ರಾಯೋಗಿಕ ಪರೀಕ್ಷೆಗಳನ್ನು ಸಹ ಬರೆಯಲಾಗಿಲ್ಲ. ಸಾಕಷ್ಟು ಹಾಜರಾತಿ ಇದ್ದು, ಪಿಯುಸಿಯಲ್ಲಿ ಉತ್ತಮ ಅಂಕ ಹಾಗೂ ಎಸ್‌ಎಸ್‌ಎಲ್‌ಸಿಯಲ್ಲಿ ಶೇ.85 ಅಂಕ ಗಳಿಸಿದ್ದರೂ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿದ್ದು, ಕಾನೂನು ಸಂಘರ್ಷಕ್ಕೆ ಇಳಿದಿದ್ದ ಕಾರಣಕ್ಕೆ ಕಾಲೇಜು ಕುಂಟು ನೆಪ ಹೇಳಿ ಅನುಮತಿ ನೀಡಿಲ್ಲ. 

              ನಿರಾಶೆಗೊಂಡ ವಿಜಯ್ ಯಾದಗಿರಿಯಲ್ಲಿರುವ ತನ್ನ ಸ್ವಗ್ರಾಮಕ್ಕೆ ಮರಳಿದ್ದಾನೆ. ಈ ಬಗ್ಗೆ ಖಿಓIಇ ಯೊಂದಿಗೆ ಮಾತನಾಡಿದ ಮಕ್ಕಳ ಹಕ್ಕುಗಳ ಟ್ರಸ್ಟ್ ನಿರ್ದೇಶಕ ವಾಸುದೇವ ಶರ್ಮಾ, “ಅಂತಹ ವಿದ್ಯಾರ್ಥಿಗಳು ಪರೀಕ್ಷೆಗಳನ್ನು ತಪ್ಪಿಸಿಕೊಳ್ಳದಂತೆ ನೋಡಿಕೊಳ್ಳಲು ಸರ್ಕಾರ ಏನಾದರೂ ಮಾಡಬೇಕು. ಕಾನೂನಿನೊಂದಿಗೆ ಸಂಘರ್ಷದಲ್ಲಿರುವ ಅಂತಹ ಮಕ್ಕಳು ಪರೀಕ್ಷೆಗಳನ್ನು ಬರೆಯಲು ನಿಬಂಧನೆಗಳನ್ನು ಹೊಂದಿ ಅವರಿಗೆ ಅವಕಾಶ ನೀಡಬೇಕು ಎನ್ನುತ್ತಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

src="https://blogger.googleusercontent.com/img/b/R29vZ2xl/AVvXsEik3hLMvgO1WDICUKu_VF5lQRG3CMZau_AmC5MorS73B9lRYpLdDKJGTnB8c-U47BHqrAJ7dkiQUqiUWGQ6qg9A5jtCXrPkzIP4GPJfI00HmwhHX-3VG35FjkD_MxxI10r2v4FqSQ8LuyjG/w640-h360/samarasa+new+add.JPG" width="500px" / />



Qries