HEALTH TIPS

ಈ ವರ್ಷದಿಂದ ನಾಗರಿಕರಿಗೆ ಇ-ಪಾಸ್‌ಪೋರ್ಟ್ ವಿತರಿಸಲು ಕೇಂದ್ರ ಚಿಂತನೆ: ಸಚಿವ ವಿ. ಮುರಳೀಧರನ್

              ನವದೆಹಲಿ :ತನ್ನ ನಾಗರಿಕರಿಗೆ ಈ ವರ್ಷದಿಂದ ಇ-ಪಾಸ್‌ಪೋರ್ಟ್ ನೀಡಲು ಕೇಂದ್ರ ಸರಕಾರ ಯೋಜಿಸಿದೆ ಎಂದು ಕೇಂದ್ರ ವಿದೇಶಾಂಗ ವ್ಯವಹಾರಗಳ ಸಹಾಯಕ ಸಚಿವ ವಿ. ಮುರಳೀಧರನ್ ಅವರು ಗುರುವಾರ ಹೇಳಿದ್ದಾರೆ. 2022ರಲ್ಲಿ ಇ-ಪಾಸ್‌ಪೋರ್ಟ್ ನೀಡುವ ಸರಕಾರದ ಯೋಜನೆ ಹಾಗೂ ಅದರ ವಿವರಗಳ ಕುರಿತ ಪ್ರಶ್ನೆಗೆ ರಾಜ್ಯ ಸಭೆಯಲ್ಲಿ ಪ್ರತಿಕ್ರಿಯೆ ನೀಡುವ ಸಂದರ್ಭ ವಿ.ಮುರಳೀರನ್ ಅವರು ಈ ಹೇಳಿಕೆ ನೀಡಿದ್ದಾರೆ.

              ಇ-ಪಾಸ್‌ಪೋರ್ಟ್ ಕಾಗದ ಹಾಗೂ ಇಲೆಕ್ಟ್ರಾನಿಕ್ಸ್ ಪಾಸ್‌ಪೋರ್ಟ್‌ನ ಸಂಯೋಜನೆಯಾಗಿರಲಿದೆ. ಇಲೆಕ್ಟ್ರಾನಿಕ್ಸ್ ಪಾಸ್‌ಪೋರ್ಟ್‌ನಲ್ಲಿ ರೇಡಿಯೋ ಆವರ್ತನ ಗುರುತಿಸುವ ಚಿಪ್ (ಆರ್‌ಎಫ್‌ಐಡಿ) ಹಾಗೂ ಹಿಬದಿ ಕವರಿನ ಒಳಗೆ ಆಯಂಟೆನಾವನ್ನು ಅಳವಡಿಸಲಾಗುವುದು ಎಂದು ಅವರು ಮಾಹಿತಿ ನೀಡಿದರು.

             ''ಪಾಸ್‌ಪೋರ್ಟ್‌ನ ನಿರ್ಣಾಯಕ ಮಾಹಿತಿಯನ್ನು ಇ-ಪಾಸ್‌ಪೋರ್ಟ್‌ನ ದತ್ತಾಂಶ ಪುಟದಲ್ಲಿ ಮುದ್ರಿಸಲಾಗುವುದು ಹಾಗೂ ಚಿಪ್‌ನಲ್ಲಿ ಸಂಗ್ರಹಿಸಿ ಇರಿಸಲಾಗುವುದು. ಚಿಪ್ ಹಾಗೂ ದಾಖಲೆಯ ಗುಣಲಕ್ಷಣ ಅಂತರರಾಷ್ಟ್ರೀಯ ನಾಗರಿಕ ವಾಯು ಯಾನ ಸಂಸ್ಥೆ (ಐಸಿಎಒ) ದಾಖಲೆ 9303ರಲ್ಲಿ ಅಧಿಸೂಚಿಸಲಾಗಿದೆ'' ಎಂದು ವಿ.ಮುರಳೀಧರನ್ ತಿಳಿಸಿದ್ದಾರೆ.

           ಇ-ಪಾಸ್‌ಪೋರ್ಟ್ ನೀಡುವುದಕ್ಕೆ ಸಂಬಂಧಿಸಿದ ತಾಂತ್ರಿಕ ಜವಾಬ್ದಾರಿಯನ್ನು ವಿದೇಶಾಂಗ ವ್ಯವಹಾರಗಳ ಸಚಿವಾಲಯ ರಾಷ್ಟ್ರೀಯ ಇನ್‌ಫಾರ್ಮೇಟಿಕ್ ಕೇಂದ್ರಕ್ಕೆ ವಹಿಸಲಿದೆ ಎಂದು ಅವರು ತಿಳಿಸಿದರು.

         ನಾಸಿಕ್‌ನ ಇಂಡಿಯಾ ಸೆಕ್ಯುರಿಟಿ ಪ್ರೆಸ್‌ನಲ್ಲಿ ಇ-ಪಾಸ್‌ಪೋರ್ಟ್‌ಗಳನ್ನು ಉತ್ಪಾದಿಸಲಾಗುವುದು. ಅದಕ್ಕಾಗಿ ಐಸಿಎಒಗೆ ಹೊಂದಿಕೊಳ್ಳುವ 4.5 ಕೋಟಿ ಇಲೆಕ್ಟ್ರಾನಿಕ್ಸ್ ಚಿಪ್‌ಗಳು ಹಾಗೂ ಅದರೊಂದಿಗೆ ನಿರ್ವಹಣಾ ವ್ಯವಸ್ಥೆಯನ್ನು ಖರೀದಿಸುವುದಕ್ಕಾಗಿ ಟೆಂಡರ್ ಆಹ್ವಾನಿಸಲಾಗಿದೆ ಎಂದು ಅವರು ಹೇಳಿದ್ದಾರೆ.

           ಇ-ಪಾಸ್‌ಪೋರ್ಟ್ ಮಾದರಿಯನ್ನು ಪ್ರಸ್ತುತ ಪರೀಕ್ಷಿಸಲಾಗಿದೆ. ಸಂಪೂರ್ಣ ಪ್ರಮಾಣದ ಉತ್ಪಾದನೆ ಹಾಗೂ ವಿತರಣೆಯು ತಾಂತ್ರಿಕ ಹಾಗೂ ಮೂಲಭೂತ ಸೌಲಭ್ಯ ಸಂಪೂರ್ಣವಾದ ಬಳಿಕ ಆರಂಭವಾಗಲಿದೆ ಎಂದು ವಿ.ಮುರಳೀಧರನ್ ತಿಳಿಸಿದರು.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries