ಕಾಸರಗೋಡು: ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಜನ್ಮದಿನಾಚರಣೆ ಜಿಲ್ಲೆಯ ವಿವಿಧೆಡೆ ಜರುಗಿತು. ಕೇರಳದ ಕೇಂದ್ರೀಯ ವಿಶ್ವವಿದ್ಯಾಲಯದ ಕಾಸರಗೋಡು ಪೆರಿಯ ಕ್ಯಾಂಪಸ್‍ನಲ್ಲಿ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಉಪಕುಲಪತಿ ಪೆÇ್ರ.ಎಚ್.ವೆಂಕಟೇಶ್ವರಲು ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ನಮನ ಸಲ್ಲಿಸಿದರು.
ಬಿಜೆಪಿ ಎಣ್ಮಕಜೆ ಪಂಚಾಯಿತಿ 15ನೇ ಬಜಕೂಡ್ಲು ಬೂತ್ ಸಮಿತಿ ವತಿಯಿಂದ ಬಜಕೂಡ್ಲು ಮಿನಿ ಸಟೇಡಿಯಂ ವಠಾರದಲ್ಲಿ ನಡೆದ ಸಮಾರಂಭದಲ್ಲಿ ಕಾಸರಗೋಡು ಜಿಪಂ ಸದಸ್ಯ ನಾರಾಯಣ ನಾಯ್ಕ್ ಪುಷ್ಪಾರ್ಚನೆ ನಡೆಸಿದರು. ಮಂಜೇಶ್ವರ ಬ್ಲಾಕ್ ಪಂಚಾಯಿತಿ ಸದಸ್ಯ ಅನಿಲ್‍ಕುಮಾರ್, ಎಣ್ಮಕಜೆ ಗ್ರಾಪಂ ಸದಸ್ಯೆ ಉಷಾಗಣೇಶ್ ಉಪಸ್ಥಿತರಿದ್ದರು. ಈ ಸಂದರ್ಭ ಹಿರಿಯ ದೈವನರ್ತನ ಕಲಾವಿದ ಮೋಹನ ಬಜಕೂಡ್ಲು ಅವರನ್ನು ಅಭಿನಂದಿಸಲಾಯಿತು. 16ನೇ ವಾರ್ಡು ಖಂಡಿಗೆಯಲ್ಲಿ ನಡೆದ ಸಮಾರಂಭದಲ್ಲಿ ಮಾಯಿಲ ಖಂಡಿಗೆ ಅವರ ನಿವಾಸದಲ್ಲಿ ನಡೆದ ಸಮಾರಂಭದಲ್ಲಿ ಮಹಿಳಾ ಮೋರ್ಚಾ ಕಾಸರಗೋಡು ಜಿಲ್ಲಾ ಸಮಿತಿ ಕಾರ್ಯದರ್ಶಿ ಲಲಿತಾ ಕೇಶವ ನಾಯ್ಕ್, ಬ್ಲಾಕ್ ಪಂಚಾಯಿತಿ ಸದಸ್ಯ ಅನಿಲ್ ಕುಮಾರ್ ಹಾಗೂ ಕಾರ್ಯಕರ್ತರು ಪಾಲ್ಗೊಂಡಿದ್ದರು. ಈ ಸಂದರ್ಭ ಹಿರಿಯರಾದ ಮಾಯಿಲ ಖಂಡಿಗೆ ಅವರನ್ನು ಗೌರವಿಸಲಾಯಿತು.