HEALTH TIPS

ಗುಜರಾತ್, ತೆಲಂಗಣಗಳು ಕೇರಳಕ್ಕಿಂತ ಮುಂದಿದೆ: ಒಳ್ಳೆಯ ವಿಚಾರ ಅಧ್ಯಯನಗೈದು ಅಳವಡಿಸುವುದರಲ್ಲಿ ತಪ್ಪೇನು?: ಸಚಿವ ಸಾಜಿ ಚೆರಿಯನ್

                        ಪತ್ತನಂತಿಟ್ಟ: ಗುಜರಾತ್ ನ ಆಡಳಿತ ಸುಧಾರಣೆಯನ್ನು ಕೇರಳ ಮಾದರಿಯಾಗಿ  ಅನುಸರಿಸುವುದರಲ್ಲಿ ತಪ್ಪೇನಿದೆ ಎಂದು ಸಚಿವ ಸಾಜಿ ಚೆರಿಯನ್ ಕೇಳಿರುವರು. ಮುಖ್ಯಮಂತ್ರಿಗಳಿಗೆ ಎಲ್ಲ ಯೋಜನೆಗಳ ಮೇಲೆ ನೇರವಾಗಿ ನಿಗಾ ಇಡುವ ವ್ಯವಸ್ಥೆ ಬೇಕು. ಈ ಬಗ್ಗೆ ತಿಳಿಯಲು ಮುಖ್ಯ ಕಾರ್ಯದರ್ಶಿ ನೇತೃತ್ವದ ನಿಯೋಗ ಗುಜರಾತ್‍ಗೆ ಭೇಟಿ ನೀಡಿದೆ.  ಮೀನುಗಾರಿಕೆ ಇಲಾಖೆಯಲ್ಲಿ ತೆಲಂಗಾಣ ಕೇರಳಕ್ಕಿಂತ ಬಹಳ ಮುಂದಿದೆ. ಅದರ ಬಗ್ಗೆ ತಿಳಿದುಕೊಳ್ಳಲು ತೆಲಂಗಾಣಕ್ಕೆ ಹೋಗುವುದಾಗಿ ಹೇಳಿದರು.

                ಈ ಆಡಳಿತಕ್ಕಾಗಿ ಜಾರಿಗೊಳಿಸಲಾದ ಡ್ಯಾಶ್‍ಬೋರ್ಡ್ ವ್ಯವಸ್ಥೆಯನ್ನು ಅಧ್ಯಯನ ಮಾಡಲು ಮುಖ್ಯ ಕಾರ್ಯದರ್ಶಿ ಮತ್ತು ಸಿಬ್ಬಂದಿ ಅಧಿಕಾರಿ ಗುಜರಾತ್‍ಗೆ ತೆರಳಿರುವರು.  ವಿಜಯ್ ರೂಪಾನಿ ಮುಖ್ಯಮಂತ್ರಿಯಾಗಿದ್ದಾಗ 2019 ರಲ್ಲಿ ಡ್ಯಾಶ್‍ಬೋರ್ಡ್ ವ್ಯವಸ್ಥೆಯನ್ನು ಜಾರಿಗೆ ತರಲಾಗಿತ್ತು. 

                  ಡ್ಯಾಶ್ ಬೋರ್ಡ್ ವ್ಯವಸ್ಥೆಯಿಂದ ಸಿಎಂ ಒಂದೇ ಕ್ಲಿಕ್ ನಲ್ಲಿ ಪ್ರಮುಖ ಯೋಜನೆಗಳು ಸೇರಿದಂತೆ ಮಾಹಿತಿ ಸಂಗ್ರಹವನ್ನು ತಿಳಿದುಕೊಳ್ಳಬಹುದಾಗಿದೆ. ಯೋಜನೆಗಳ ಅನುಷ್ಠಾನಕ್ಕೆ ಅನುಗುಣವಾಗಿ ಸ್ಟಾರ್ ರೇಟಿಂಗ್ ಕೂಡ ನೀಡಲಾಗುವುದು. ವೀಡಿಯೋ ಪರದೆಯ ಮೂಲಕ ಯೋಜನೆಯ ಅನುಷ್ಠಾನವನ್ನು ತಿಳಿದುಕೊಂಡು ಮುಖ್ಯಮಂತ್ರಿಗಳೇ ಮಧ್ಯಸ್ಥಿಕೆ ವಹಿಸಬಹುದು.

                   ಗುಜರಾತ್ ಸರ್ಕಾರವು ಜಾರಿಗೆ ತಂದಿರುವ ವಿವಿಧ ಯೋಜನೆಗಳ ಡೇಟಾಬೇಸ್ ವ್ಯವಸ್ಥೆಯಾದ ಡ್ಯಾಶ್‍ಬೋರ್ಡ್ ವ್ಯವಸ್ಥೆಯು ಮುಖ್ಯಮಂತ್ರಿಗಳ ನಿರ್ದೇಶನದಂತೆ ವಿವರವಾದ ಅಧ್ಯಯನ ಮತ್ತು ವರದಿಯನ್ನು ಒದಗಿಸುತ್ತದೆ.

                   2013ರಲ್ಲಿ ಗುಜರಾತ್‍ನ  ಕೌಶಲ್ಯಾಭಿವೃದ್ಧಿ ಅಧ್ಯಯನಕ್ಕಾಗಿ ಮಾತನಾಡಿದ್ದ ಅಂದಿನ ಕಾರ್ಮಿಕ ಸಚಿವರಾದ ಶಿಬು ಬೇಬಿಜೋನ್ ಅವರು ಸಿಪಿಎಂನಲ್ಲಿ ದೊಡ್ಡ ರಾಜಕೀಯ ವಿವಾದಕ್ಕೆ ಕಾರಣರಾಗಿದ್ದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries