ಉಪ್ಪಳ: ಝಕಾತ್ ಪದ್ಧತಿ ಜಾರಿಯಿಂದ ಬಡತನ ನಿರ್ಮೂಲನೆ ಸಾಧ್ಯವಾಗಬೇಕಿದ್ದು, ಇಸ್ಲಾಂ ಇತಿಹಾಸದಲ್ಲಿ ಅದು ನಡೆದುಕೊಂಡು ಬಂದಿದೆ ಎಂದು ಶಾಸಕ ಎ.ಕೆ.ಎಂ.ಅಶ್ರಫ್ ಹೇಳಿದರು.
ಬೈತುಸ್ಸಕಾತ್ ಕೇರಳದ ಸಹಯೋಗದಲ್ಲಿ ಅಡ್ಕದಲ್ಲಿ ಸ್ವ ಉದ್ಯೋಗ ಯೋಜನೆಯಡಿ ಒದಗಿಸಲಾದ ಮಿಲ್ಮಾ ಬೂತ್ ನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಝಕಾತ್ ನ್ನು ವ್ಯವಸ್ಥಿತವಾಗಿ ಸಂಗ್ರಹಿಸಿ ವಿತರಿಸುವ ಬೈತುಸ್ಸಕಾತ್ ಈ ನಿಟ್ಟಿನಲ್ಲಿ ಅನುಕರಣೀಯವಾಗಿದೆ ಎಂದವರು ತಿಳಿಸಿದರು.
ಬೈತುಸ್ಸಕಾತ್ ಕುಂಬಳೆ ವಲಯ ಪೋಷಕ ಪಿ.ಎಸ್.ಅಬ್ದುಲಕುಂಞÂ್ಞ ಅಧ್ಯಕ್ಷತೆ ವಹಿಸಿದ್ದರು. ಮಂಗಲ್ಪಾಡಿ ಗ್ರಾಮ ಪಂಚಾಯತಿ ಸ್ಥಾಯಿ ಸಮಿತಿ ಅಧ್ಯಕ್ಷೆ ಖೈರುನ್ನೀಸಾ ಉಮರ್, ವೆಲ್ಫೇರ್ ಪಾರ್ಟಿ ಜಿಲ್ಲಾ ಸಮಿತಿ ಸದಸ್ಯ ಕೆ ರಾಮಕೃಷ್ಣನ್, ಕುಂಬಳೆ ಪಂಚಾಯತಿ ಸಮಿತಿ ಕಾರ್ಯದರ್ಶಿ ಅಸ್ಲಂ ಸೂರಂಬೈಲು, ಮುಸ್ಲಿಂ ಲೀಗ್ ಮಂಗಲ್ಪಾಡಿ ಪಂಚಾಯತಿ ಕಾರ್ಯದರ್ಶಿ ಉಮರ್ ಅಪೋಲೋ
ಶುಭಾಶಂಸನೆಗೈದರು. ಅಶ್ರಫ್ ಬಾಯಾರ್ ಸ್ವಾಗತಿಸಿ, ಪೀಪಲ್ಸ್ ಫೌಂಡೇಶನ್ ನ ಏರಿಯಾ ಸಂಯೋಜಕ ಅಬ್ದುಲ್ಲ ಲತೀಫ್ ಕುಂಬಳೆ ವಂದಿಸಿದರು.