HEALTH TIPS

ಕನ್ನಡ ಭವನ ಗ್ರಂಥಾಲಯದಲ್ಲಿ ಕನ್ನಡ ಪಯಸ್ವಿನಿ ಪ್ರಶಸ್ತಿ ಪ್ರದಾನ, ಗೌರವಾರ್ಪಣೆ, ಕನ್ನಡ ಭವನದ ಕನ್ನಡ ಪರ ಚಟುವಟಿಕೆ ಅಪೂರ್ವದಲ್ಲಿ ಅಪೂರ್ವ : ಡಾ.ಸಿ.ಸೋಮಶೇಖರ್

 

                    ಕಾಸರಗೋಡು: ವಿಂಶತಿ ವರ್ಷಾಚರಣೆಯ ಅಂಗವಾಗಿ ನುಳ್ಳಿಪ್ಪಾಡಿಯ ಸೀತಮ್ಮ ಪುರುಷ ನಾಯಕ ಸ್ಮಾರಕ ಕನ್ನಡ ಭವನ ಮತ್ತು ಗ್ರಂಥಾಲಯದಲ್ಲಿ ಸಾಧಕರಿಗೆ ಕನ್ನಡ ಪಯಸ್ವಿನಿ ಪ್ರಶಸ್ತಿ ಪ್ರದಾನ, ಗೌರವಾರ್ಪಣೆ, ಅಭಿನಂದನೆ ನಡೆಯಿತು. 

                  ಕಾಸರಗೋಡು ಜಿಲ್ಲೆಯ ಸಂಘ ಸಂಸ್ಥೆಗಳ ಪ್ರತಿನಿಧಿಗಳೊಂದಿಗೆ  ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಡಾ.ಸಿ.ಸೋಮಶೇಖರ್ ಅವರು ಕಾಸರಗೋಡಿನ ಕನ್ನಡಿಗರು ಅನುಭವಿಸುತ್ತಿರುವ ಸಮಸ್ಯೆಗಳ ಬಗ್ಗೆ ಚರ್ಚಿಸಿದರು.  

              ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳ ಸಾಧಕರಾದ ಪತ್ರಕರ್ತ ಪ್ರದೀಪ್ ಬೇಕಲ್, ಪತ್ರಕರ್ತ ರವಿ ನಾಯ್ಕಾಪು ಅವರಿಗೆ ಕನ್ನಡ ಪಯಸ್ವಿನಿ ಪ್ರಶಸ್ತಿಯನ್ನು ಪ್ರಾಧಿಕಾರ ಅಧ್ಯಕ್ಷ ಡಾ.ಸಿ.ಸೋಮಶೇಖರ್ ಪ್ರದಾನ ಮಾಡಿದರು. 

                    ಹಿರಿಯ ಪತ್ರಕರ್ತ ರಾಧಾಕೃಷ್ಣ ಕೆ.ಉಳಿಯತ್ತಡ್ಕ, ಹರಿದಾಸ ಜಯಾನಂದ ಕುಮಾರ್ ಹೊಸದುರ್ಗ, ಸಂಘಟಕ ಜಗದೀಶ್ ಕೂಡ್ಲು, ವಸಂತ ಕೆರೆಮನೆ ಅವರಿಗೆ ಗೌರವಾಭಿನಂದನೆ ನಡೆಯಿತು. ಇದೇ ಸಂದರ್ಭದಲ್ಲಿ ಖ್ಯಾತ ಕವಿ, ಸಾಹಿತಿ ಕೆ.ಸಿ.ಶಿವಪ್ಪ ಮತ್ತು ಶಿಕ್ಷಣ ತಜ್ಞ ಡಾ.ಕೆ.ಇ.ರಾಧಾಕೃಷ್ಣ ಅವರನ್ನು ಕನ್ನಡ ಭವನದ ವತಿಯಿಂದ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಪ್ರಾಧಿಕಾರದ ಕಾರ್ಯದರ್ಶಿ ಪ್ರಕಾಶ್ ಮತ್ತೀಹಳ್ಳಿ, ಗೋಪಾಲ ಶೆಟ್ಟಿ ಅರಿಬೈಲು, ಕನ್ನಡ ಪತ್ರಕರ್ತರ ಸಂಘದ ಅಧ್ಯಕ್ಷ ಎ.ಆರ್.ಸುಬ್ಬಯ್ಯಕಟ್ಟೆ ಮೊದಲಾದವರು ಉಪಸ್ಥಿತರಿದ್ದರು.

              ಕನ್ನಡ ಭವನ ಗ್ರಂಥಾಲಯದ ನಿಸ್ವಾರ್ಥ ಕನ್ನಡ ಪರ ಚಟುವಟಿಕೆ ಗಳಿಗೆ ತುಂಬಾ ಹರ್ಷ ಹಾಗೂ ಮೆಚ್ಚುಗೆ ವ್ಯಕ್ತಪಡಿಸಿದರು. ಹೆಚ್ಚಿನ ಮಟ್ಟದಲ್ಲಿ ಕಾರ್ಯ ನಿರ್ವಹಿಸಲು ಅನುದಾನ ನೀಡಲು ಮುಂದೆ ಬಂದ ಪ್ರಾಧಿಕಾರದ ಭರÀವಸೆಯನ್ನು ಯಾವುದೇ ಅನುದಾನ ವಂತಿಗೆ, ದೇಣಿಗೆ ಪಡೆಯದ ವಾಮನ್ ರಾವ್ ಬೇಕಲ್ ಗೌರವಪೂರ್ವಕ ನಯವಾಗಿ ತಿರಸ್ಕರಿಸಿದ್ದನ್ನು ಅಧ್ಯಕ್ಷರು ಕನ್ನಡ ಭವನದ ಬಗ್ಗೆ ಹೆಮ್ಮೆ ಪಟ್ಟು ಶ್ಲಾಘಿಸಿದರು. ಸ್ವಂತ ಖರ್ಚಿನಲ್ಲಿ ಇಷ್ಟೆಲ್ಲ ಕನ್ನಡ ಪರ ಕೆಲಸ ಮಾಡುವ ಈ ಪರಿ ಮುಂದೆ ಚರಿತ್ರೆಯಾಗುವುದು. ಇದು ಅಪೂರ್ವದಲ್ಲಿ ಅಪೂರ್ವ ಎಂದು ನುಡಿದರು.

                 ಕನ್ನಡ ಭವನದ ಸ್ಥಾಪಕ ವಾಮನ್ ರಾವ್ ಬೇಕಲ್ ಸ್ವಾಗತಿಸಿದರು. ಜಗದೀಶ್ ಕೂಡ್ಲು ಕಾರ್ಯಕ್ರಮ ನಿರೂಪಿಸಿದರು. ಕೋಶಾಧಿಕಾರಿ ಸಂಧ್ಯಾರಾಣಿ ಟೀಚರ್ ವಂದಿಸಿದರು. 



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries