ಕಠ್ಮಂಡು: ಭಾರತಕ್ಕೆ ಮೂರು ದಿನಗಳ ಭೇಟಿಗಾಗಿ ಆಗಮಿಸಿದ್ದ ನೇಪಾಳದ ಪ್ರಧಾನಿ ಶೇರ್ ಬಹದೂರ್ ದೇವುಬಾ ಅವರು ಇಂದು ಪ್ರಧಾನಿ ನರೇಂದ್ರ ಮೋದಿ ಅವರ ಜತೆ ಉಭಯರಾಷ್ಟ್ರಗಳ ಸಂಬಂಧ ಕುರಿತು ಮಾತುಕತೆ ನಡೆಸಿದ್ದಾರೆ.
ಕಠ್ಮಂಡು: ಭಾರತಕ್ಕೆ ಮೂರು ದಿನಗಳ ಭೇಟಿಗಾಗಿ ಆಗಮಿಸಿದ್ದ ನೇಪಾಳದ ಪ್ರಧಾನಿ ಶೇರ್ ಬಹದೂರ್ ದೇವುಬಾ ಅವರು ಇಂದು ಪ್ರಧಾನಿ ನರೇಂದ್ರ ಮೋದಿ ಅವರ ಜತೆ ಉಭಯರಾಷ್ಟ್ರಗಳ ಸಂಬಂಧ ಕುರಿತು ಮಾತುಕತೆ ನಡೆಸಿದ್ದಾರೆ.
ಈ ಸಂದರ್ಭದಲ್ಲಿ ಭಾರತ-ನೇಪಾಳ ಮಧ್ಯೆ ರೈಲು ಸಂಚಾರಕ್ಕೂ ಚಾಲನೆ ನೀಡಲಾಗಿದೆ.
ಇದೇ ಸಂದರ್ಭದಲ್ಲಿ ನೇಪಾಳದಲ್ಲಿನ ರುಪೇ ಸೇವೆಗೂ ಚಾಲನೆ ನೀಡಲಾಗಿದೆ. ಜತೆಗೆ ನೇಪಾಳದ ಸೋಲು ವಿದ್ಯುತ್ ಪ್ರಸರಣ ಮಾರ್ಗವನ್ನೂ ಉದ್ಘಾಟಿಸಲಾಯಿತು. ಅಲ್ಲದೆ ಪ್ರಮುಖ ಒಪ್ಪಂದಗಳಿಗೆ ಸಹಿ ಹಾಕಲಾಯಿತು.
ಮತ್ತೊಂದೆಡೆ ರೈಲ್ವೆ ಸಂಚಾರದಿಂದ ಮುಕ್ತಗೊಂಡಿರುವ ಭಾರತ-ನೇಪಾಳದ ಗಡಿ ಭಾಗ ಸಮಾಜಘಾತಕ ಶಕ್ತಿಗಳಿಂದ ದುರ್ಬಳಕೆ ಆಗಬಾರದು ಎಂಬುದಾಗಿಯೂ ಪ್ರಧಾನಿ ಮೋದಿ ತಾಕೀತು ಮಾಡಿದ್ದಾರೆ.