ಬದಿಯಡ್ಕ: ಪಶ್ಚಿಮ ಘಟ್ಟಗಳ ಪ್ರದೇಶವು ಮಳೆಯ ಕೊರತೆಯನ್ನು ಹೊಂದಿರುವ ಪ್ರದೇಶವಲ್ಲ ಆದರೆ ಇದೀಗ ಅನೇಕ ಪ್ರದೇಶಗಳು ಗಣನೀಯ ಪ್ರಮಾಣದ ನೀರಿನ ಕೊರತೆಯನ್ನು ಎದುರಿಸುತ್ತಿರುವುದು ಸಾಮಾನ್ಯವೆಂಬಂತಾಗಿದೆ. ಕಾಸರಗೋಡು ಜಿಲ್ಲೆಯು ವಾರ್ಷಿಕ 3500 ಮಿಮೀ ಮಳೆಯನ್ನು ಪಡೆಯುತ್ತದೆ. ಇದು ಒಂದು ಎಕರೆ ಭೂಮಿಯಲ್ಲಿ ಬೀಳುವ 1a4 ಮಿಲಿಯನ್ ಲೀಟರ್ (1.4 ಕೋಟಿ) ಮಳೆನೀರು. ಕಾಸರಗೋಡು ಒಂದು ಬ್ಲಾಕ್ ಝೋನ್ ಎಂದು ಗುರುತಿಸಲಾಗಿದೆ. ಈ ಪ್ರದೇಶದಲ್ಲಿ, ಸುರಂಗ ಎಂಬ ಸಾಂಪ್ರದಾಯಿಕ ನೀರನ್ನು ಹೊರತೆಗೆಯುವ ವ್ಯವಸ್ಥೆ - ನೀರಿಗಾಗಿ ಮಾನವ ನಿರ್ಮಿತ ಗುಹೆಗಳು -- ಈಗಲೂ ಜೀವಂತವಾಗಿದೆ.
ಇಡೀ ಕಾಸರಗೋಡು ಜಿಲ್ಲೆಯಲ್ಲಿ ಕನಿಷ್ಠ 6000-7000 ಸುರಂಗಾರುಗಳಿರಬಹುದು ಎಂದು ಅಂದಾಜಿಸಲಾಗಿದೆ. ಸುರಂಗ ಅಗೆಯುವ ಕಲೆ ನಶಿಸುತ್ತಿದೆಯಾದರೂ, ಬೆರಳೆಣಿಕೆಯಷ್ಟು ವೃತ್ತಿಪರ ಅಗೆಯುವವರು ಬಾಯಾರು, ಪಡ್ರೆ ಮತ್ತು ನೆರೆಯ ಮಾಣಿಲ (ದಕ್ಷಿಣ ಕನ್ನಡ ಜಿಲ್ಲೆ, ಕರ್ನಾಟಕ) ಗ್ರಾಮಗಳಲ್ಲಿ ನೆಲೆಸಿದ್ದಾರೆ. ಈ ಗ್ರಾಮೀಣ ಎಂಜಿನಿಯರಿಂಗ್ ಕೌಶಲ್ಯದ ಆಳವಾದ ವೈಜ್ಞಾನಿಕ ಅಧ್ಯಯನಗಳು ಮತ್ತು ದಾಖಲೀಕರಣವನ್ನು ಇಲ್ಲಿಯವರೆಗೆ ಮಾಡಲಾಗಿಲ್ಲ.
ಮಳೆಗಾಲದಲ್ಲಿ ಈ ಸುರಂಗಗಳಲ್ಲಿ ನೀರಿನ ಹರಿವು ಹೆಚ್ಚಾಗಿರುತ್ತದೆ. ಅನೇಕ ಸಂದರ್ಭಗಳಲ್ಲಿ, ಸುರಂಗ ನೀರನ್ನು ನೇರವಾಗಿ ಕುಡಿಯಲು ತೆಗೆದುಕೊಳ್ಳುವುದನ್ನು ಹೊರತುಪಡಿಸಿ, ಮಣ್ಣಿನ ಸಂಗ್ರಹಣಾ ತೊಟ್ಟಿಯಲ್ಲಿ ನೀರನ್ನು ಸಂಗ್ರಹಿಸಲಾಗುತ್ತದೆ. ತೊಟ್ಟಿಯಿಂದ, ರೈತರು ತಮ್ಮ ತೋಟಗಳಿಗೆ (ಗುರುತ್ವಾಕರ್ಷಣೆ) ನೀರಾವರಿ ಮಾಡಲು ಬಳಸುತ್ತಾರೆ. ಸ್ಪ್ರಿಂಕ್ಲರ್ ಜೆಟ್ ಅಥವಾ ಡ್ರಿಪ್ ಅನ್ನು ಸಹ ಬಳಸುತ್ತಾರೆ.
ಸಾಮಾನ್ಯವಾಗಿ, ಬೆಟ್ಟದ ಹಿಂಭಾಗದಲ್ಲಿ ಸುರಂಗವನ್ನು ಅಗೆಯಲಾಗುತ್ತದೆ. ಆದರೆ ಇಲ್ಲಿ ಸಾಂಪ್ರದಾಯಿಕ ಊಹೆಗಳ ಆಧಾರದಲ್ಲಷ್ಟೇ ಸುರಂಗ ಕೊರೆಯುತ್ತಾರೆ ಎಂಬುದು ವಿಶೇಷ. ಬಹುತೇಕ ಸಂದರ್ಭಗಳಲ್ಲೂ ಯಶಸ್ವಿಯಾಗಿವೆ.
ಸಾಧನೆಗಳ ಮೂಲಕ ಯಶಸ್ಸಿನ ಮೆಟ್ಟಲುಗಳನ್ನು ಹತ್ತಬಹುದೆಂಬುದು ಹಿರಿಯರ ಅನುಭವದ ನುಡಿಗಳು. ಸಾಧನೆಗಳ ಮೆಟ್ಟಲುಗಳು ಅಂದಾಜಿಸಿದಷ್ಟು ಸುಲಭ ಅಥವಾ ಸುಲಲಿತವೇನೂ ಆಗಿರುವುದಿಲ್ಲ. ಹತ್ತಾರು ಸವಾಲುಗಳಿಗೆ ತಲೆಯೊಡ್ಡಿ ದಿಟ್ಟ ನಿರಂತರ ಪ್ರಯತ್ನದಿಂದ ಏನಾದರೊಂದು ಸಾ|ಧಿಸಬಹುದು ಎನ್ನುವುದನ್ನು ಕುಂಬ್ಡಾಜೆ ಸಮೀಪದ ಅಳಕ್ಕೆ ಸುಬ್ರಾಯ ನಾಯ್ಕ ಅವರು ಮಾಡಿ ತೋರಿಸಿದ್ದಾರೆ. ಹಿರಿಯರ ಆಶೋತ್ತರದಂತೆ ರಾಜಾ ಭಗೀರಥ ಸುರ ನಗರಿಯ ಗಂಗೆಯನ್ನೇ ಧರೆಗೆ ಕರೆತಂದ ಸಾಧಕನಾಗಿ ನಮ್ಮಿದಿರಿನ ಅಸದ|ಳದ ವ್ಯಕ್ತಿತ್ವದವನಾಗಿ ಈಗಲೂ ಜೀವಿಸುತ್ತಿದ್ದರೆ ಸುಬ್ರಾಯ ನಾಯ್ಕರ ಈ ಸಾಧನೆ ಭಗೀರಥನ ಪ್ರಯತ್ನಕ್ಕೆ ಸದೃಶವಾದುದು ಎನ್ನಲು ಅಡ್ಡಿಯಿಲ್ಲ.
ಸಾಮಾನ್ಯ ಬಡ ಕುಟುಂ|ಬದ ಸುಬ್ರಾಯ ನಾಯ್ಕರು ವಾಸಿಸುವ ಅಳಕ್ಕೆ ಕುಗ್ರಾಮ. ಇವರ ಕುಟುಂಬಕ್ಕೆ ನಿತ್ಯ ಅಗತ್ಯದ ನೀರಿಗಾಗಿ ಕಳೆದ ಹಲವು ವರ್ಷಗಳಿಂದ ಭಾರೀ ಸಮಸ್ಯೆಗಳು ಎದುರಾಗಿತ್ತು. ಜೊತೆಗೆ ಇವರ ಮನೆಗೆ ರಸ್ತೆ ಸೌಕರ್ಯದ ಕೊರತೆ ಇರುವುದರಿಂದ ಬೇರೆಡೆಗಳಿಂದ ನೀರಿನ ಪೂರೈಕೆಗೂ ತೊಡಕಾಗುತ್ತಿತ್ತು. ಇದರಿಂದ ಸುಬ್ರಾಯ ನಾಯ್ಕ ಅವರು ಸ್ವತಃ ತಮ್ಮ ನಿವೇಶನದಲ್ಲಿ ಸುರಂಗ ಕೊರೆದು ಯ|ಶಸ್ವಿಯಾಗಿ ಜಲಧಾರೆ ಹರಿಸಿದ್ದಾರೆ.
ಕಳೆದ ವರ್ಷ ಎಂದರೆ 2021ರ ಡಿಸೆಂಬರ್ ತಿಂಗಳ 24 ರಂದು ಕೊನೆಗೂ ಸುರಂಗ ರಚನೆಗೆ ಮುಂದಾದರು. ಅಪರಾಹ್ನ ಬಳಿಕ 3 ರಿಂದ ಮಧ್ಯರಾತ್ರಿ 12ರ ವರೆಗೂ ನಿರಂತರವಾಗಿ ಅಗೆದು ಸುಮಾರು ನಾಲ್ಕು ತಿಂಗಳಲ್ಲಿ ಮಾ.19 ರಂದು ನೀರಿನ ಒರತೆ ಸಾಕಾರಗೊಂಡಿತು.
ಸುಮಾರು 32 ಮೀಟರ್(42 ಕೋಲು) ಉದ್ದದ ನೂತನ ಸುರಂಗ 6 ಪೀಟ್ ನಷ್ಟು ಎತ್ತರವಿದೆ. ತಾವು ಓರ್ವರೇ ತಲೆಗೊಂದು ಹೆಡ್ ಲೈಟ್, ಹಾರೆ ಪಿಕಾಸಿಗಳನ್ನು ಬಳಸಿ ಈ ಸುರಂಗ ನಿರ್ಮಿಸಿದ್ದು ಯಾವುದೇ ಅನುಭವವಿಲ್ಲದ ಸುಬ್ರಾಯ ನಾಯ್ಕ ಅವರು ಭರವಸೆಯ ಬೆಳಕಲ್ಲಿ ಗಂಗೆಯನ್ನು ಅ|ಂಗಳಕ್ಕೆ ಹರಿಸಿದ್ದಾರೆ. ಸುರಂಗ ಕೊರೆದಂತೆ ಒಳಗಿನ ಮಣ್ಣಿನ ವಿಲೇವಾರಿ ಮೊದಮೊದಲು ಸವಾಲಾಗಿದ್ದು ಬಳಿಕ ತಾವೇ ಸ್ವತಃ ಕಂಡುಕೊಂಡ ವಿಧಾನದ ಮೂಲಕ ಮಣ್ಣಿನ ವಿಲೇವಾರಿ ಮಾಡಿದ್ದಾರೆ. ಇದೀಗ ಯತೇಚ್ಚ ನೀರು ಲಭ್ಯವಾಗಿದ್ದು ಶ್ರಮಕ್ಕೆ ಲಭಿಸಿದ ಯಶಸ್ಸು ಸುಬ್ರಾಯ ನಾಯ್ಕ ಹಾಗು ಅವರ ಕುಟುಂಬದ ನೆಮ್ಮದಿಯ ನಿಟ್ಟುಸಿರಿಗೆ ಕಾರಣವಾಗಿದೆ.
ಅಂದಹಾಗೆ ಈ ಬಗೆಗಿನ ಮಾಹಿತಿಯನ್ನು ಹೊರಜಗತ್ತಿಗೆ ಮೊದಲು ತೊರಿಸಿದವರು ಸಮರಸ ಸುದ್ದಿಯ ಅ|ಭಿಮಾನಿ ಓದುಗರೂ, ಕೃಷಿ ಬರಹಗಾರರಾದ ಚಂದ್ರಶೇಖರ ಏತಡ್ಕ ಅವರು.
ಅಭಿಮತ:
ಕುಡಿಯುವ ನೀರಿನ ತೀವ್ರ ಕೊರತೆಯಿಂದ ಗತ್ಯಂತರವಿಲ್ಲದೆ ಡಿಸೆಂಬರ್ ನಲ್ಲಿ ಸುರಂಗ ಕೊರೆಯಲು ತೊಡಗಿಸಿಕೊ|ಂಡೆ. ಹೆಚ್ಚಿನ ಭರವಸೆಗಳೇನೂ ಇದ್ದಿರಲಿಲ್ಲ. ಆದರೂ ಸಾಧಿಸುವ ಛಲದಿಂದ ಮುಂದುವರಿದೆ. ತಾನೋರ್ವನೇ ಕೊರೆದದ್ದರಿಂದ ಹೆಚ್ಚಿನ ಖರ್ಚು ವೆಚ್ಚ ಬಂದಿಲ್ಲ. ದೈಹಿಕ ಶ್ರಮವಷ್ಟೇ ಆಗಿದೆ. ಒಂದೊಮ್ಮೆ ನಿಲ್ಲಿಸಿ ಬಿಡಲೇ ಎಂಬ ಚಿಂತೆ ಇದ್ದರೂ ಮುಂದುವರಿಸಿದೆ. ಇದೀಗ ನೀರು ಲಭ್ಯವಾಗಿರುವುದು ಖುಷಿ ನೀಡಿದೆ.
-ಸುಬ್ರಾಯ ನಾಯ್ಕ
ಸುರಂಗ ಕೊರೆದ ಸಾ|ಧಕ. ಅಳಕೆ. ಕುಂಬ್ಡಾಜೆ.