ನವದೆಹಲಿ: ತನ್ನ ಗೋದಾಮಿನಿಲ್ಲಿ ತುಂಬಿ ತುಳುಕುತ್ತಿರುವ ಗೋಧಿ ಹಾಗೂ ಅಕ್ಕಿಯನ್ನು ವಿಶ್ವಸಂಸ್ಥೆಯ ವಿಶ್ವ ಆಹಾರ ಯೋಜನೆ (ಡಬ್ಲುಎಫ್ಪಿ) ಮೂಲಕ ಯೆಮನ್, ಇಥಿಯೋಪಿಯಾ, ಸಿರಿಯಾ ಹಾಗೂ ಅಫ್ಘಾನಿಸ್ಥಾನಕ್ಕೆ ಕೊಡುಗೆಯಾಗಿ ನೀಡಲು ಭಾರತ ಯೋಜಿಸುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ನಡೆ ರಾಜತಾಂತ್ರಿಕ ಬಾಂಧವ್ಯದಲ್ಲಿ ಪ್ರಗತಿ ಸಾಧಿಸುವುದು ಮಾತ್ರವಲ್ಲದೆ, ಸರಕಾರಿ ಸ್ವಾಮ್ಯದ ಗೋದಾಮುಗಳಲ್ಲಿರುವ ಹೆಚ್ಚುವರಿ ಆಹಾರ ಧಾನ್ಯದ ದಾಸ್ತಾನು ಹಾಗೂ ಸಾಗಾಟ ವೆಚ್ಚವನ್ನು ಕೂಡ ಈ ಪ್ರಸ್ತಾವಿತ ಯೋಜನೆ ಇಳಿಕೆ ಮಾಡುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಭಾರತದ ಆಹಾರ ನಿಗಮ (ಎಫ್ಸಿಐ)ದಿಂದ ನಿರ್ವಹಿಸಲ್ಪಡುವ ಕೇಂದ್ರೀಯ ದಾಸ್ತಾನಿನಿಂದ ಈ ನಾಲ್ಕು ದೇಶಗಳಿಗೆ ಆಹಾರ ಧಾನ್ಯಗಳನ್ನು ರಫ್ತು ಮಾಡುವ ಯೋಜನೆ ಇದಾಗಿದೆ. ದೇಶದಲ್ಲಿ ಉತ್ಪಾದನೆಯಾಗುವ ಗೋಧಿಯಲ್ಲಿ ಶೇ. 35ರಷ್ಟನ್ನು ಕೇಂದ್ರೀಯ ದಾಸ್ತಾನಿಗಾಗಿ ಎಫ್ಸಿಐ ಖರೀದಿಸುತ್ತದೆ. ಕಳೆದ ಒಂದು ವರ್ಷಗಳಿಂದ ನಿರ್ವಹಣೆಯಾಗುತ್ತಿರುವ ಕೇಂದ್ರದ ಯೋಜನೆಯನ್ನು ಗ್ರಾಹಕರ ವ್ಯವಹಾರ, ಆಹಾರ ಹಾಗೂ ಸಾರ್ವಜನಿಕ ವಿತರಣೆ ಸಚಿವಾಲಯದ ಅಡಿಯಲ್ಲಿ ಬರುವ ಆಹಾರ ಹಾಗೂ ಸಾರ್ವಜನಿಕ ವಿತರಣೆ ಇಲಾಖೆ ಪ್ರಾಯೋಜಿಸುತ್ತಿದೆ.