ಅಸ್ಸಾಂ: ಈಶಾನ್ಯ ರಾಜ್ಯಗಳಲ್ಲಿ ಸೇನಾ ಪಡೆಗಳಿಗೆ ನೀಡಲಾಗಿರುವ ವಿಶೇಷಾಧಿಕಾರ (ಎಎಫ್ಎಸ್ ಪಿಎ) ಯನ್ನು ಸಂಪೂರ್ಣ ಹಿಂಪಡೆಯುವ ಬಗ್ಗೆ ಪ್ರಧಾನಿ ಸುಳಿವು ನೀಡಿದ್ದಾರೆ.
ಅಸ್ಸಾಮ್ ನಲ್ಲಿ ಪೀಸ್, ಯೂನಿಟಿ, ಡೆವಲ್ಪ್ಮೆಂಟ್ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಈಶಾನ್ಯ ರಾಜ್ಯಗಳ ಕೆಲವು ಪ್ರದೇಶಗಳಲ್ಲಿ ಕಳೆದ 8 ವರ್ಷಗಳಿಂದ ಕಾನೂನು ಸುವ್ಯವಸ್ಥೆ ಸುಧಾರಣೆ ಕಂಡಿದ್ದು ಅಂತಹ ಪ್ರದೇಶಗಳಿಂದ ಸೇನಾ ಪಡೆಗಳಿಗೆ ನೀಡಲಾಗಿರುವ ವಿಶೇಷ ಸ್ಥಾನಮಾನವನ್ನು ಹಿಂಪಡೆಯಬಹುದಾಗಿದೆ ಎಂದು ಹೇಳಿದ್ದಾರೆ.
ಪ್ರದೇಶದಲ್ಲಿ ಹಿಂಸಾಚಾರ ಇಳಿಕೆಯಾಗಿದ್ದು, ಕಾನೂನು ಜಾರಿಯಲ್ಲಿ ಹಲವು ಬದಲಾವಣೆಯಾಗಿವೆ. ಮೊದಲಿಗೆ ತ್ರಿಪುರಾದಿಂದ ಎಎಫ್ಎಸ್ ಪಿಎಯನ್ನು ತೆಗೆದುಹಾಕಲಾಯಿತು. ಆ ನಂತರ ಮೇಘಾಲಯದಲ್ಲಿ ತೆಗೆದುಹಾಕಲಾಯಿತು ಎಂದು ಮೋದಿ ತಿಳಿಸಿದ್ದಾರೆ.
ಕಳೆದ 8 ವರ್ಷಗಳಲ್ಲಿ ಈಶಾನ್ಯ ರಾಜ್ಯಗಳ ಪೈಕಿ ಹಲವು ಪ್ರದೇಶಗಳಲ್ಲಿ ಕಾನೂನು ಸುಧಾರಣೆಯಾಗಿರುವೆಡೆ ಎಎಫ್ಎಸ್ ಪಿಎಯನ್ನು ತೆಗೆದುಹಾಕಲಾಗಿದೆ. ಇನ್ನು ಉಳಿದ ಕಡೆಗಳಲ್ಲೂ ಅವುಗಳನ್ನು ತೆಗೆದುಹಾಕಲು ಯತ್ನಿಸುತ್ತಿದ್ದೇವೆ ಎಂದು ಮೋದಿ ಎಎಫ್ಎಸ್ ಪಿಎ ಹಿಂಪಡೆಯುವ ಸುಳಿವು ನೀಡಿದ್ದಾರೆ.