HEALTH TIPS

ಬಸ್ಸಿನೊಳಗೆ ಕುಸಿದು ಬಿದ್ದ ಯುವಕನಿಗೆ ಪುನರ್ಜನ್ಮ ನೀಡಿದ ನರ್ಸ್​ಗೆ ಮೆಚ್ಚುಗೆಯ ಮಹಾಪೂರ!

                  ಅಂಗಮಾಲಿ: ನರ್ಸ್​ ಒಬ್ಬರ ಸಮಯ ಪ್ರಜ್ಞೆಯಿಂದಾಗಿ ಬಸ್​ನಲ್ಲೇ ಕುಸಿದು ಬಿದ್ದ ವ್ಯಕ್ತಿಯ ಪ್ರಾಣ ಉಳಿದಿರುವ ಘಟನೆ ಕೇರಳದ ಎರ್ನಾಕುಲಂನಲ್ಲಿ ಗುರುವಾರ (ಏ.21) ಬೆಳಗ್ಗೆ ನಡೆದಿದೆ.

          ಎರ್ನಾಕುಲಂನಲ್ಲಿರುವ ಅಪೊಲೊ ಅಡ್ಲಕ್ಷ್​ ಆಸ್ಪತ್ರೆಯಲ್ಲಿ ಸ್ಟಾಫ್​ ನರ್ಸ್​ ಆಗಿ ಸೇವೆ ಸಲ್ಲಿಸುತ್ತಿರುವ ಶಿಬಾ ಅನೀಶ್ ಅವರು ಗುರುವಾರ ಬೆಳಗ್ಗೆ ಕೆಲಸ ಮುಗಿಸಿಕೊಂಡು ಕೆಎಸ್​ಆರ್​ಟಿಸಿ ಬಸ್​ ಮೂಲಕ ತಮ್ಮ ಮನೆಗೆ ಹಿಂತಿರುಗುತ್ತಿದ್ದರು.

              ಪ್ರಯಾಣದ ನಡುವೆ ಯುವಕನೊಬ್ಬ ಬಸ್ಸಿನೊಳಗೆ ಇದ್ದಕ್ಕಿದ್ದಂತೆ ಕುಸಿದುಬಿದ್ದಿದ್ದ. ಈ ವೇಳೆ ತಕ್ಷಣ ನೆರವಿಗೆ ಧಾವಿಸಿದ ಶಿಬಾ ಆತನನ್ನು ಆರೈಕೆ ಮಾಡಿ ಜೀವ ಉಳಿಸಿದ್ದಾರೆ. ಬಸ್​ನಿಂದ ಕೆಳಗಡೆ ಇಳಿಸಿ, ಆತನನ್ನು ಪರೀಕ್ಷಿಸಿದಾಗ ನಾಡಿ ಮಿಡಿತ ದರ್ಬಲವಾಗಿರುವುದನ್ನು ಶಿಬಾ ಕಂಡುಕೊಂಡರು.

ಇದಾದ ಬಳಿಕ ಶಿಬಾ ಎದೆಯನ್ನು ಒತ್ತುವ ಮೂಲಕ ಕಾರ್ಡಿಯೋ ಪಲ್ಮನರಿ ರಿಸಸಿಟೇಷನ್​ (ಸಿಪಿಆರ್​) ಚಿಕಿತ್ಸೆ ನೀಡುವ ಮೂಲಕ ಆತನಿಗೆ ಮತ್ತೆ ಪ್ರಜ್ಞೆ ಬರುವಂತೆ ಮಾಡಿದರು. ನಂತರ ಹೆಚ್ಚಿನ ಚಿಕಿತ್ಸೆಗೆ ಯುವಕ ಸ್ಥಳೀಯ ಆಸ್ಪತ್ರೆಗೆ ದಾಖಲಾದನು. ಶಿಬಾ ಅವರ ಮಾನವೀಯ ಕಾರ್ಯಕ್ಕರ ಭಾರೀ ಮೆಚ್ಚುಗೆ ವ್ಯಕ್ತವಾಯಿತು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries