ಪೆರ್ಲ: ಎಣ್ಮಕಜೆ ಪಂಚಾಯತಿನ ಪಡ್ರೆ ಸಮೀಪದ ಕೊಡೆಂಕೀರಿ ಕಾಲನಿ ಪರಿಸರದಲ್ಲಿ ಹುಚ್ಚು ಹಿಡಿದು ನಾಯಿಯೊಂದರ ಕಡಿತಕ್ಕೆ ಜನ ವ್ಯಾಪಕವಾಗಿ ಒಳಗಾಗಿದ್ದು ಪರಿಸರದಲ್ಲಿ ವಿಭ್ರಾಂತಿ ಸೃಷ್ಠಿಸಿತ್ತು. ಇಲ್ಲಿನ ಮನೆಯೊಂದರ ಇಬ್ಬರು ಸದಸ್ಯರಿಗೆ ಹಾಗೂ ನೆರೆ ಮನೆಯಾತನಿಗೆ ಸಮೀಪದಲ್ಲಿದ್ದ ಸಾಕು ಪ್ರಾಣಿಗಳಿಗೂ ಹುಚ್ಚು ನಾಯಿ ಕಚ್ಚಿತ್ತು. ತಕ್ಷಣ ಸ್ಥಳೀಯ ವಾರ್ಡ್ ಸದಸ್ಯ ರಾಮಚಂದ್ರ ಎಂ.ಅವರ ನೇತೃತ್ವದಲ್ಲಿ ಆರೋಗ್ಯಾಧಿಕಾರಿಗಳಿಗೆ ಮಾಹಿತಿ ನೀಡಲಾಗಿತ್ತು. ಈ ಸಂದರ್ಭದಲ್ಲಿ ಸ್ಥಳಕ್ಕೆ ಭೇಟಿ ನೀಡಿದ ಪೆರ್ಲ ಸಮುದಾಯ ಆರೋಗ್ಯ ಕೇಂದ್ರ ಹಾಗೂ ಮೃಗಾಶ್ಪತ್ರೆ ಅಧಿಕಾರಿಗಳು ಮನೆ ಮನೆ ಸಂದರ್ಶಿಸಿ ಕಡಿತಕ್ಕೊಳಗಾದ ಸಾಕುಪ್ರಾಣಿಗಳಿಗೆ ಅಗತ್ಯ ಚುಚ್ಚು ಮದ್ದು ಹಾಗೂ ಕಡಿತಕ್ಕೊಳಗಾದವರನ್ನು ಚಿಕಿತ್ಸೆಗಾಗಿ ಕಾಸರಗೋಡು ಜನರಲ್ ಆಸ್ಪತ್ರೆಗೆ ದಾಖಲಿಸಲು ನಿರ್ದೇಶಿಸಿದ್ದರು.
ಪೆರ್ಲ ಸಮುದಾಯ ಆರೋಗ್ಯ ಕೇಂದ್ರದ ಡಾ.ದೀಪರಾಜ್, ಹೆಲ್ತ್ ಇನ್ಸ್ ಪೆಕ್ಟರ್ ಗಿರೀಶ್,ಜ್ಯೂ.ಹೆಲ್ತ್ ಇನ್ಸ್ ಪೆಕ್ಟರ್ ಹರೀಶ್, ಮೃಗಾಶ್ಪತ್ರೆಯ ಡಾ.ಬ್ರಿಜಿಟ್, ಲೋಕಲ್ ಇನ್ಸ್ ಪೆಕ್ಟರ್ ಮನು, ಆಶಾ ವರ್ಕರ್ ಚಂದ್ರಾವತಿ ಎ.ಟಿ,ಶೈಲಜಾ , ಪಂ.ಸದಸ್ಯ ರಾಮಚಂದ್ರ ಎಂ, ಮಾಜಿ ಪಂ.ಸದಸ್ಯ ರವಿ ವಾಣಿನಗರ ಮೊದಲಾದವರು ಸ್ಥಳ ಸಂದರ್ಶನ ನಡೆಸಿದ್ದರು.