ಉಪ್ಪಳ: ಯಕ್ಷ ಮೌಕ್ತಿಕ ಮಹಿಳಾ ಕೂಟ ಮಂಗಲ್ಪಾಡಿ ವತಿಯಿಂದ ಜರಗುತ್ತಿರುವ ತಾಳಮದ್ದಳೆ ಸಪ್ತಾಹದ ಎರಡನೇ ದಿನ ಹಿರಿಯ ಅರ್ಥಧಾರಿ ಬೆಳ್ಳಿಗೆ ನಾರಾಯಣ ಮಣಿಯಾಣಿಯವರನ್ನು ಗಣ್ಯರ ಸಮಕ್ಷಮ ಗೌರವಿಸಲಾಯಿತು. ಖ್ಯಾತ ಸಾಹಿತಿ, ಕವಿ ವಿ. ಬಿ. ಕುಳಮರ್ವ ಸಭಾಧ್ಯಕ್ಷತೆ ವಹಿಸಿದ್ದು, ಯಕ್ಷ ಮೌಕ್ತಿಕ ತಂಡದ ಗುರುಗಳೂ ಆಗಿರುವ ಹರೀಶ್ ಬಳಂತಿಮೊಗರು ಉಪಸ್ಥಿತರಿದ್ದರು. ಸಭಾ ಕಾರ್ಯಕ್ರಮದ ತರುವಾಯ ಮಹಿಳಾ ಯಕ್ಷಕೂಟ ಪೆÇನ್ನೆತ್ತೋಡಿ ತಂಡದವರಿಂದ ಕರ್ಣಾವಸಾನ ತಾಳಮದ್ದಳೆ ಜರಗಿತು.