ಕಾಸರಗೋಡು: ರಾಜ್ಯದಲ್ಲಿ ಮೀನುಗಾರಿಕೆ ಕೇಂದ್ರಗಳಿರುವ ಜಿಲ್ಲೆಗಳಲ್ಲಿ ವೈಜ್ಞಾನಿಕ ರೀತಿಯ ಮೀನುಗಾರಿಕೆಯನ್ನು ಖಚಿತಪಡಿಸಿಕೊಳ್ಳಲು ಸಾಧ್ಯವಾಗಲಿದೆ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ತಿಳಿಸಿದ್ದಾರೆ.
ಅವರು ಕಾಸರಗೋಡು ಕೀಯೂರ್ ಮತ್ತು ಮೀನುಗಾರಿಕಾ ಕೇಂದ್ರ ಸೇರಿದಂತೆ ಆಲಪ್ಪುಳ ತೊಟ್ಟಪ್ಪಲ್ಲಿ, ತ್ರಿಶೂರ್ ಅಝಿಕೋಡ್ ಮತ್ತು ಮಲಪ್ಪುರಂ ಪೆÇನ್ನಾನಿ ಮೀನುಗಾರಿಕಾ ಕೇಂದ್ರಗಳನ್ನು ಸೋಮವಾರ ಆನ್‍ಲೈನ್ ಮೂಲಕ ಉದ್ಘಾಟಿಸಿ ಮಾತನಾಡಿದರು. ಇದರೊಂದಿಗೆ ರಾಜ್ಯದ ಎಲ್ಲಾ ಕರಾವಳಿ ಜಿಲ್ಲೆಗಳಲ್ಲಿ ಮೀನುಗಾರಿಕಾ ಕೇಂದ್ರ ಸ್ಥಾಪನೆ ಸಾಧ್ಯವಾಗಿದೆ. ಮೀನುಗಾರಿಕೆ ವಲಯ ರಾಜ್ಯದ ಆರ್ಥಿಕತೆಯಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತಿದ್ದು, ಮೀನು ಉತ್ಪಾದನೆಯನ್ನು ಹೆಚ್ಚಿಸಲು ಸರ್ಕಾರ ಹಲವಾರು ಉಪಕ್ರಮಗಳನ್ನು ಕೈಗೊಂಡಿದೆ. ಮೀನುಗಾರಿಕೆ ನಿರ್ದೇಶನಾಲಯವು ಸಮುದ್ರದಲ್ಲಿ ರಕ್ಷಣಾ ಕಾರ್ಯಾಚರಣೆಗಳನ್ನು ನಡೆಸಲು ಮಾಸ್ಟರ್ ಕಂಟ್ರೋಲ್ ರೂಂ ಅನ್ನು ಸ್ಥಾಪಿಸಿದೆ, ಜತೆಗೆ ವಿಯಿಞ, ವೈಪಿನ್ ಮತ್ತು ಬೇಪೂರ್ ಮೀನುಗಾರಿಕಾ ಕೇಂದ್ರಗಳಲ್ಲಿ ಮೂರು ಪ್ರಾದೇಶಿಕ ನಿಯಂತ್ರಣ ಕೊಠಡಿಗಳನ್ನು ಹಾಗೂ ನಾಲ್ಕು ಹೊಸ ಮೀನುಗಾರಿಕಾ ಕೇಂದ್ರಗಳನ್ನು ಸ್ಥಾಪಿಸಲಾಗುತ್ತಿದೆ ಎಂದು ತಿಳಿಸಿದರು.
ಕೀಯೂರ್‍ನಲ್ಲಿ ನಡೆದ ಸಮಾರಂಭದಲ್ಲಿ ಮೀನುಗಾರಿಕೆ, ಸಂಸ್ಕøತಿ ಮತ್ತು ಯುವಜನ ವ್ಯವಹಾರಗಳ ಸಚಿವ ಸಾಜಿ ಚೆರಿಯನ್ ಅಧ್ಯಕ್ಷತೆ ವಹಿಸಿದ್ದರು. ಸಮುದ್ರ ಮೀನುಗಾರಿಕೆ ಜಂಟಿ ನಿರ್ದೇಶಕಿ ಸ್ಮಿತಾ ಆರ್ ನಾಯರ್ ವರದಿ ವಾಚಿಸಿದರು. ಶಾಸಕ ಎನ್.ಎ.ನೆಲ್ಲಿಕುನ್ನು, ಸಿ.ಎಚ್. ಕುಞಂಬು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಸಚಿವ ಸಜಿ ಚೆರಿಯನ್ ಮೀನುಗಾರರಿಗೆ ಜಿಪಿಎಸ್ ಉಪಕರಣ ಹಸ್ತಾಂತರಿಸಿದರು ವಿವಿಧ ಸಂಘಟನೆಗಳ ಪ್ರತಿನಿಧಿಗಳಾದ ಕಾಟಾಡಿ ಕುಮಾರನ್, ಆರ್.ಗಂಗಾಧರನ್, ಕೆ.ಬಾಲಕೃಷ್ಣನ್, ಬಿ.ಎಂ.ಅಶ್ರಫ್, ಯು.ಎಸ್.ಬಾಲನ್, ಮತ್ಸ್ಯಫೆಡ್ ಜಿಲ್ಲಾ ವ್ಯವಸ್ಥಾಪಕ ಕೆ.ಎಚ್.ಶರೀಫ್ ಮುಂತಾದವರು ಉಪಸ್ಥಿತರಿದ್ದರು.