HEALTH TIPS

ಪರಮಾಣು ಶಕ್ತಿ ಆಯೋಗದ ಮುಖ್ಯಸ್ಥ ವ್ಯಾಸ್‌ ಸೇವಾವಧಿ ವಿಸ್ತರಣೆ

          ನವದೆಹಲಿ: ಪರಮಾಣು ಶಕ್ತಿ ಆಯೋಗದ ಅಧ್ಯಕ್ಷ ಕಮಲೇಶ್ ನೀಲಕಂಠ ವ್ಯಾಸ್ ಅವರಿಗೆ ಸರ್ಕಾರ ಒಂದು ವರ್ಷದ ಸೇವಾವಧಿ ವಿಸ್ತರಣೆಯನ್ನು ನೀಡಿದೆ.

          ಕ್ಯಾಬಿನೆಟ್ ನೇಮಕಾತಿ ಸಮಿತಿಯು ವ್ಯಾಸ್ ಅವರ ಸೇವೆಯನ್ನು ಮೇ 3, 2022 ರ ನಂತರ ಒಂದು ವರ್ಷದವರೆಗೆ ಅಥವಾ ಮುಂದಿನ ಆದೇಶದವರೆಗೆ ವಿಸ್ತರಿಸಲು ಅನುಮೋದಿಸಿದೆ ಎಂದು ಸಿಬ್ಬಂದಿ ಸಚಿವಾಲಯದ ಹೇಳಿಕೆಯಲ್ಲಿ ತಿಳಿಸಲಾಗಿದೆ.

           ಸೆಪ್ಟೆಂಬರ್ 2018 ರಲ್ಲಿ ಮೊದಲ ಬಾರಿಗೆ ಹುದ್ದೆಗೆ ನೇಮಕಗೊಂಡ ವ್ಯಾಸ್ ಅವರಿಗೆ ಇದು ಎರಡನೇ ವಿಸ್ತರಣೆಯಾಗಿದೆ. ವ್ಯಾಸ್ ಅವರು ವಡೋದರದ ಒS ವಿಶ್ವವಿದ್ಯಾಲಯದಿಂದ ಮೆಕ್ಯಾನಿಕಲ್ ಇಂಜಿನಿಯರ್ ಆಗಿದ್ದು, 1979 ರಲ್ಲಿ ಃಂಖಅ ತರಬೇತಿ ಶಾಲೆಯಲ್ಲಿ ತರಬೇತಿಯನ್ನು ಪೂರ್ಣಗೊಳಿಸಿದ ನಂತರ, ಅವರು ಃಂಖಅನ ರಿಯಾಕ್ಟರ್ ಎಂಜಿನಿಯರಿಂಗ್ ವಿಭಾಗದ ಇಂಧನ ವಿನ್ಯಾಸ ಮತ್ತು ಅಭಿವೃದ್ಧಿ ವಿಭಾಗದಲ್ಲಿ ಸೇವೆ ಸಲ್ಲಿಸಿದರು. ಅಂತೆಯೇ ಪರಮಾಣು ರಿಯಾಕ್ಟರ್ ಇಂಧನಗಳ ವಿನ್ಯಾಸ ಮತ್ತು ವಿಶ್ಲೇಷಣೆಗಾಗಿ ಅವರು ಕೆಲಸ ಮಾಡಿದ್ದಾರೆ. ಆಯಕಟ್ಟಿನ ಅನ್ವಯಗಳಿಗೆ ಹೊಸ ಇಂಧನದ ವಿನ್ಯಾಸ ಮತ್ತು ಅಭಿವೃದ್ಧಿಗೆ ಅವರು ಜವಾಬ್ದಾರರಾಗಿದ್ದರು ಎಂದು ತಿಳಿದುಬಂದಿದೆ.

              ವ್ಯಾಸ್ ಅವರು ಥರ್ಮಲ್ ಹೈಡ್ರಾಲಿಕ್ಸ್ ಮತ್ತು ರಿಯಾಕ್ಟರ್ ಕೋರ್ ಘಟಕಗಳ ಒತ್ತಡ ವಿಶ್ಲೇಷಣೆಯಲ್ಲಿ ವ್ಯಾಪಕವಾಗಿ ಕೆಲಸ ಮಾಡಿದ್ದಾರೆ. ಇಂಡಿಯನ್ ನ್ಯೂಕ್ಲಿಯರ್ ಸೊಸೈಟಿ ಅತ್ಯುತ್ತಮ ಸೇವಾ ಪ್ರಶಸ್ತಿ 2011, ಹೋಮಿ ಭಾಭಾ ವಿಜ್ಞಾನ ಮತ್ತು ತಂತ್ರಜ್ಞಾನ ಪ್ರಶಸ್ತಿ 2006 ಮತ್ತು 2007, 2008, 2012 ಮತ್ತು 2013 ರಲ್ಲಿ ಆಂಇ ಪ್ರಶಸ್ತಿಗಳನ್ನು ಒಳಗೊಂಡಂತೆ ಹಲವಾರು ಪ್ರಶಸ್ತಿಗಳನ್ನು ಅವರಿಗೆ ನೀಡಲಾಗಿದೆ.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries