ಕೋಝಿಕ್ಕೋಡ್: ಬೇಸಿಗೆಯಲ್ಲಿ ಸಾಕಷ್ಟು ಹಣ್ಣುಗಳನ್ನು ತಿನ್ನುವಂತೆ ಆರೋಗ್ಯ ತಜ್ಞರು ಸಲಹೆ ನೀಡುತ್ತಾರೆ. ಆದರೆ ದೇಹವನ್ನು ತಂಪಾಗಿಸಲು ಬೇಕಾಗುವ ಈ ಹಣ್ಣುಗಳ ಬೆಲೆಯಿಂದ ಜನ ಬೇಸತ್ತಿದ್ದಾರೆ. ಎರಡು ವಾರಗಳ ಹಿಂದೆ 80 ರೂಪಾಯಿ ಇದ್ದ ಒಂದು ಕಿಲೋ ನಿಂಬೆ ಹಣ್ಣಿನ ಬೆಲೆ ಇಂದು 180 ರೂಪಾಯಿ ಆಗಿದೆ. ಹತ್ತು ದಿನದಲ್ಲಿ ಕಿಲೋ ಕಲ್ಲಂಗಡಿ ಬೆಲೆ 12 ರಿಂದ 30 ರೂ.ಗೆ ಏರಿಕೆಯಾಗಿದೆ.
ಸಾಮಾನ್ಯ ಜನರ ಹಣ್ಣು ಎಂದೇ ಬಿಂಬಿಸಲ್ಪಡುವ ಬಾಳೆ ಹಣ್ಣಿಗೆ ಕಿಲೋ ಒಂದರ ಬೆಲೆ 50 ರೂ.ವರೆಗೆ ಏರಿಕೆಯಾಗಿದೆ. ಜ್ಯೂಸ್ ಮಾಡಲು ಬಳಸುವ ಶಮ್ಮಾ ಕಳೆದ ಎರಡು ವಾರಗಳಲ್ಲಿ ಕೆಜಿಗೆ 35 ರೂ., ಕಿತ್ತಳೆ ಮತ್ತು ಅನಾನಸ್ ಕೆಜಿಗೆ 30 ರೂ.ಏರಿಕೆಯಾಗಿದೆ. ವ್ಯಾಪಾರಸ್ಥರ ಪ್ರಕಾರ, ಬೇರೆ ರಾಜ್ಯಗಳಿಂದ ಹಣ್ಣುಗಳ ಆಮದು ಕಡಿಮೆಯಾದ ಕಾರಣ ಬೆಲೆಯಲ್ಲಿ ತೀವ್ರ ಏರಿಕೆಯಾಗಿದೆ. ಇದಲ್ಲದೆ, ಉಪವಾಸದ ಸಮಯದಲ್ಲಿ ಹಣ್ಣುಗಳ ಬೆಲೆ ಏರುವುದು ಸಾಮಾನ್ಯವಾಗಿದೆ.