HEALTH TIPS

ಲೋಕಸಭೆ: ಇಂಧನ ಬೆಲೆಗಳ ಏರಿಕೆ ವಿರುದ್ಧ ಪ್ರತಿಪಕ್ಷಗಳ ಗದ್ದಲ, ಪ್ರತಿಭಟನೆಯಿಂದ ಸದನ ಮುಂದೂಡಿಕೆ

                    ನವದೆಹಲಿ:ಹೆಚ್ಚುತ್ತಿರುವ ಇಂಧನಗಳ ಬೆಲೆಗಳ ವಿರುದ್ಧ ಮತ್ತು ಏಕರೂಪ ಭತ್ತ ಖರೀದಿ ನೀತಿಗೆ ಆಗ್ರಹಿಸಿ ಪ್ರತಿಪಕ್ಷಗಳ ಪ್ರತಿಭಟನೆಯಿಂದಾಗಿ ಮಂಗಳವಾರ ಲೋಕಸಭೆಯಲ್ಲಿ ಕಲಾಪಗಳು ಸ್ಥಗಿತಗೊಂಡವು.

            ಸದನದ ಬಾವಿಗೆ ನುಗ್ಗಿದ ಪ್ರತಿಪಕ್ಷ ಸದಸ್ಯರ ತೀವ್ರ ಗದ್ದಲ, ಪ್ರತಿಭಟನೆಯ ಬಳಿಕ ಕೆಳಮನೆಯನ್ನು ಮುಂದೂಡಲಾಯಿತು.

              ಘೋಷಣೆಗಳ ನಡುವೆಯೇ ಪ್ರಶ್ನೆವೇಳೆಯನ್ನು ನಡೆಸಲು ಸ್ಪೀಕರ್ ಓಂ ಬಿರ್ಲಾ ಪ್ರಯತ್ನಿಸಿದರಾದರೂ ಯಶ ಕಾಣದೆ ಸದನವನ್ನು ಅರ್ಧ ಗಂಟೆ ಕಾಲ ಮುಂದೂಡಿದರು.
             ಮಧ್ಯಾಹ್ನ 12 ಗಂಟೆಗೆ ಸದನವು ಮರುಸಮಾವೇಶಗೊಂಡಾಗ ಕಾಗದಪತ್ರಗಳನ್ನು ಮಂಡಿಸಲಾಯಿತಾದರೂ ಶೂನ್ಯವೇಳೆ ಕೆಲವೇ ನಿಮಿಷಗಳಿಗೆ ಸೀಮಿತವಾಗಿತ್ತು ಮತ್ತು ಸ್ಪೀಕರ್ ಸದನವನ್ನು ಮತ್ತೆ ಅಪರಾಹ್ನ ಎರಡು ಗಂಟೆಯವರೆಗೆ ಮುಂದೂಡಿದರು.

           ಕಾಂಗ್ರೆಸ್, ಡಿಎಂಕೆ, ಟಿಎಂಸಿ, ಎನ್ಸಿಪಿ, ಎಡಪಕ್ಷಗಳು ಮತ್ತು ಬಳಿಕ ಶಿವಸೇನೆ ಹೆಚ್ಚುತ್ತಿರುವ ಇಂಧನ ಬೆಲೆಗಳ ವಿರುದ್ಧ ಪ್ರತಿಭಟನೆ ನಡೆಸಿದರೆ ಟಿಆರ್‌ಎಸ್ ಸಂಸದರು ಭತ್ತ ಖರೀದಿ ವಿಷಯದಲ್ಲಿ ಗದ್ದಲವೆಬ್ಬಿಸಿದರು.
             ಶೂನ್ಯವೇಳೆಯಲ್ಲಿ ವಿಷಯವನ್ನು ಪ್ರಸ್ತಾಪಿಸಿದ ಟಿಎಂಸಿಯ ಅಸಿತ್ ಕುಮಾರ ಮಾಲ್ ಅವರು,'ದಿನನಿತ್ಯದ ಸಾಮಗ್ರಿಗಳ ಬೆಲೆ ಏರಿಕೆಯಿಂದ ಈ ದೇಶದ ಜನರು ತೀವ್ರ ಕ್ಷೋಭೆಗೊಳಗಾಗಿದ್ದಾರೆ. ಇದು ಮಿತಿಗಳನ್ನು ಮೀರುತ್ತಿದೆ.ಇದು ಎಲ್ಲಿಗೆ ನಿಲ್ಲಲಿದೆ? ಅಸಹನೀಯ ಬೆಲೆಏರಿಕೆಯನ್ನು ತಗ್ಗಿಸುವುದಾಗಿ ದೇಶವಾಸಿಗಳಿಗೆ ಭರವಸೆ ನೀಡುವಂತೆ ನಾನು ಪ್ರಧಾನಿಯವರಿಗೆ ಮನವಿ ಮಾಡಿಕೊಳ್ಳುತ್ತಿದ್ದೇನೆ 'ಎಂದರು.
            ಪ್ರತ್ಯೇಕವಾಗಿ ಟಿಆರ್‌ಎಸ್ ಸದಸ್ಯರು ಏಕರೂಪ ಭತ್ತ ಖರೀದಿ ನೀತಿಗಾಗಿ ಆಗ್ರಹಿಸಿ ಮತ್ತು ಭತ್ತ ಬೆಳೆಯುತ್ತಿರುವ ರಾಜ್ಯಗಳಿಗೆ ಅನ್ಯಾಯವೆಸಗದಂತೆ ಒತ್ತಾಯಿಸಿ ಭಿತ್ತಿಪತ್ರಗಳನ್ನು ಪ್ರದರ್ಶಿಸಿದರು.

ಸದನವು ಎರಡನೇ ಬಾರಿ ಮುಂದೂಡಲ್ಪಡುವ ಮುನ್ನ ಸಂಕ್ಷಿಪ್ತ ಅವಧಿಯಲ್ಲಿ ಬಿಜೆಪಿಯ ಸಂಘಮಿತ್ರ ವೌರ್ಯ ಅವರು ಸಾಮ್ರಾಟ ಅಶೋಕ ಜನ್ಮದಿನವನ್ನು ಅಂದು ಅವರ ಗೌರವಾರ್ಥ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಬಯಸುವವರಿಗಾಗಿ ಸಾಮ್ರಾಟ ಅಶೋಕ ಜಯಂತಿ ಎಂದು ಘೋಷಿಸುವಂತೆ ಕೇಂದ್ರವನ್ನು ಆಗ್ರಹಿಸಿದರು. ಅಶೋಕ ಜನ್ಮದಿನವನ್ನು ಸಾರ್ವಜನಿಕ ರಜೆಯನ್ನಾಗಿ ಘೋಷಿಸಲು ಸರಕಾರವು ಈಗಾಗಲೇ ತಿರಸ್ಕರಿಸಿರುವುದರಿಂದ ತಾನು ಈ ಬೇಡಿಕೆಯನ್ನು ಮುಂದಿಡುತ್ತಿದ್ದೇನೆ ಎಂದರು.
          ಈ ನಡುವೆ ನ್ಯಾಷನಲ್ ಕಾನ್ಫರೆನ್ಸ್ ನಾಯಕ ಫಾರೂಕ್ ಅಬ್ದುಲ್ಲಾ ಅವರು, ಜಮ್ಮು-ಕಾಶ್ಮೀರ ಲೋಕಸೇವಾ ಆಯೋಗ (ಜೆಕೆಪಿಎಸ್ಸಿ)ದ ಪರೀಕ್ಷೆಗಳಿಗೆ ಹಾಜರಾಗುವ ಅಭ್ಯರ್ಥಿಗಳ ಗರಿಷ್ಠ ವಯೋಮಿತಿಯನ್ನು ಇತರ ರಾಜ್ಯಗಳ ಅಭ್ಯರ್ಥಿಗಳ ಮಟ್ಟಕ್ಕೆ ಹೆಚ್ಚಿಸುವಂತೆ ಸರಕಾರಕ್ಕೆ ಮನವಿ ಮಾಡಿಕೊಂಡರು. ಜಮ್ಮು-ಕಾಶ್ಮೀರದಲ್ಲಿ ಸರಕಾರಿ ಉದ್ಯೋಗಾಕಾಂಕ್ಷಿಗಳಿಗೆ ಅನ್ಯಾಯವಾಗುತ್ತಿದೆ ಎಂದು ಅವರು ಬೆಟ್ಟು ಮಾಡಿದರು.

              ಇತರ ರಾಜ್ಯಗಳಲ್ಲಿ ಅಭ್ಯರ್ಥಿಗಳಿಗೆ ಪರೀಕ್ಷೆಗಳಿಗೆ ಹಾಜರಾಗಲು 30 ದಿನಗಳ ನೋಟಿಸ್ ನೀಡಲಾಗುತ್ತಿದ್ದರೆ ಜೆಕೆಪಿಎಸ್ಸಿ ಕೇವಲ ಏಳು ದಿನಗಳ ನೋಟಿಸ್ ನೀಡುತ್ತಿದೆ ಎಂದು ಹೇಳಿದ ಅವರು,'ಇತರ ಎಲ್ಲ ರಾಜ್ಯಗಳು ಪಿಎಸ್ಸಿ ಪರೀಕ್ಷೆಗೆ ಹಾಜರಾಗಲು 37ರಿಂದ 42 ವರ್ಷಗಳ ಗರಿಷ್ಠ ವಯೋಮಿತಿಯನ್ನು ಹೊಂದಿದ್ದರೆ, ಜಮ್ಮು-ಕಾಶ್ಮೀರದಲ್ಲಿ 32 ವರ್ಷಗಳ ಗರಿಷ್ಠ ವಯೋಮಿತಿಯಿದೆ. ಜಮ್ಮು-ಕಾಶ್ಮೀರದಲ್ಲಿಯ ಯುವಜನರಿಗೆ ಉದ್ಯೋಗಗಳನ್ನು ನಾವು ನಿರಾಕರಿಸಲು ಹೇಗೆ ಸಾಧ್ಯ? ಇತರ ರಾಜ್ಯಗಳಲ್ಲಿಯಂತೆ ಜಮ್ಮು-ಕಾಶ್ಮೀರದಲ್ಲಿಯೂ ವಯೋಮಿತಿಯನ್ನು ಹೆಚ್ಚಿಸುವಂತೆ ನಾನು ಕೋರುತ್ತೇನೆ 'ಎಂದರು.
           2021ರ ಅಧಿಸೂಚನೆಯಲ್ಲಿ ಜೆಕೆಪಿಎಸ್ಸಿ ಅಭ್ಯರ್ಥಿಗಳಿಗೆ ಗರಿಷ್ಠ ವಯೋಮಿತಿಯನ್ನು 32 ವರ್ಷಗಳಿಗೆ ತಗ್ಗಿಸಲಾಗಿದೆ,ಆದರೆ ಹೆಚ್ಚಿನ ಇತರ ರಾಷ್ಟ್ರಗಳಲ್ಲಿ ಗರಿಷ್ಠ ವಯೋಮಿತಿ 42 ವರ್ಷ ಆಗಿದೆ ಎಂದು ಅಬ್ದುಲ್ಲಾ ತಿಳಿಸಿದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries