ಇದು ಮಾವಿನ ಹಣ್ಣಿನ ಸೀಸನ್, ಜೊತೆಗೆ ಬೇಸಿಗೆ ಮಾವಿನ ಹಣ್ಣಿನ ಐಸ್‌ಕ್ರೀಮ್ ಸವಿಯಲು ಇದಕ್ಕಿಂತ ಬೆಸ್ಟ್ ಸಮಯ ಬೇಕೆ? ಮಾವಿನ ಹಣ್ಣಿನ ಐಸ್‌ಕ್ರೀಮ್ ಅನ್ನು ನೀವು ಮನೆಯಲ್ಲಿಯೇ ಮಾಡಿ ಸವಿಯಬಹುದು. ಅಲ್ಲದೆ ಈ ಐಸ್‌ಕ್ರೀಮ್ ಮಾಡಲು ನಿಮಗೆ ಹೆಚ್ಚಿನ ಸಾಮಗ್ರಿ ಬೇಕಾಗಿಲ್ಲ. ಮೂರೇ-ಮೂರು ವಸ್ತುಗಳನ್ನು ರುಚಿ-ರುಚಿಯಾದ ಮ್ಯಾಂಗೋ ಐಸ್‌ಕ್ರೀಮ್ ರೆಡಿ ಮಾಡಬಹುದು.
ಹೊರಗಡೆಯಿಂದ ತರುವುದಾದರೆ ಕೆಮಿಕಲ್ ಮಿಕ್ಸ್ ಮಾಡಿರಬಹುದೇ ಎಂಬ ಆತಂಕವಿರುತ್ತದೆ, ನೀವೇ ಮಾಡಿದರೆ ಆ ಚಿಂತೆಯಿಲ್ಲ, ಆರಾಮವಾಗಿ ಮಕ್ಕಳಿಗೆ ಸವಿಯಲು ನೀಡಬಹುದು. ಬನ್ನಿ ಇದನ್ನು ಮಾಡುವುದು ಹೇಗೆ ಎಂದು ನೋಡೋಣ:
ಮ್ಯಾಂಗೋಐಸ್ ಕ್ರೀಮ್ ರೆಸಿಪಿ
Mango Ice Cream Recipe,
PREP TIME 30 Mins COOK TIME 6M TOTAL TIME 36 Mins Recipe By: Reena TK Recipe Type: Serves: 4 INGREDIENTS ಬೇಕಾಗುವ ಸಾಮಗ್ರಿ * 200 ಗ್ರಾಂ ಹೆವಿ ಗ್ರೀಮ್ ಅಥವಾ ವ್ಹಿಪ್ಪಿಂಗ್ ಕ್ರೀಮ್ (heavy cream or whipping cream) 4 ಕಪ್ ಸಿಪ್ಪೆ, ಬೀಜ ತೆಗೆದ ಮಾವಿನ ಹಣ್ಣು * 1/2 ಕಪ್ ಸಕ್ಕರೆ
ಮಾಡುವ ವಿಧಾನ * ನೀವು ಮಾವಿನ ಹಣ್ಣಿನ ತುಂಡುಗಳನ್ನು ಜಾರ್‌ಗೆ ಹಾಕಿ ಸಕ್ಕರೆ ಸೇರಿಸಿ ಬ್ಲೆಂಡ್ ಮಾಡಿ. ಹೀಗೆ ಬ್ಲೆಂಡ್ ಮಾಡುವಾಗ ಸ್ವಲ್ಪ ನೀರು ಸೇರಿಸಬೇಡಿ. * ಹ್ಯಾಂಡ್ ಮಿಕ್ಸರ್‌ನಿಂದ ಐಸ್‌ಕ್ರೀಮ್ ಅನ್ನು ಚೆನ್ನಾಗಿ ಕದಡಿ. ಸ್ಟ್ಯಾಂಡ್ ಮಿಕ್ಸರ್ ಬಳಸಿದರೆ ಇನ್ನೂ ಒಳ್ಳೆಯದು. ಒಟ್ಟಿನಲ್ಲಿ ಚೆನ್ನಾಗಿ ಕದಡಬೇಕು. * ಈಗ ವ್ಹಿಪ್ಪಡ್ ಕ್ರೀಮ್‌ಗೆ ಮಾವಿನಹಣ್ಣಿನ ರಸ ಸೇರಿಸಿ, ನಂತರ ಹ್ಯಾಂಡ್ ಬ್ಲೆಂಡರ್‌ನಿಂದ ಮತ್ತೆ 2 ನಿಮಿಷ ಕದಡಿ, ಸಕ್ಕರೆ ಬೇಕಿದ್ದರೆ ಸೇರಿಸಿ. * ಈಗ ಮುಚ್ಚಳ ಇರುವ ಪಾತ್ರೆಯಲ್ಲಿ ಮಿಶ್ರಣವನ್ನು ಸುರಿಯಿರಿ. ನಂತರ 5-6 ಗಂಟೆ ಫ್ರೀಝರ್‌ನಲ್ಲಿಡಿ.
ಟಿಪ್ಸ್ * ನೀವು ಭಾರತದಲ್ಲಿದ್ದರೆ ಮದರ್ ಡೈರಿ, ಅಮೂಲ್ ಕ್ರೀಮ್ ಬಳಸಿ. * ಮಾವಿನ ರಸಕ್ಕೆ ರಕ್ಕಂತೆ ಸಕ್ಕರೆಯನ್ನು ಸೇರಿಸಿ. * ನಿಮ್ಮ ಮಾವಿನ ರಸದ ಶೇ.25ರಷ್ಟು ವ್ಹಿಪ್ಪಡ್ ಕ್ರೀಮ್ ಬಳಸಿ. * ಮಾವಿನ ಹಣ್ಣಿನ ಐಸ್‌ಕ್ರೀಮ್ ಮಾಡುವಾಗ ನೈಸರ್ಗಿಕವಾಗಿ ಹಣ್ಣಾದ ಮಾವಿನ ಹಣ್ಣುಗಳನ್ನು ಬಳಸಿ, ಇಲ್ಲದಿದ್ದರೆ ಸಿಹಿ ಇರಲ್ಲ. * ಮಾವಿನ ಹಣ್ಣಿನ ರಸ ಹಾಗೂ ವ್ಹಿಪ್ಪಡ್ ಕ್ರೀಮ್ ಅನ್ನು ತುಂಬಾ ಮಿಕ್ಸ್ ಹೊತ್ತು ಮಿಕ್ಸ್ ಮಾಡಬೇಡಿ. 1-2 ನಿಮಿಷ ಮಿಕ್ಸ್ ಮಾಡಿದರೆ ಸಾಕು.
NUTRITIONAL INFORMATION 1 ಸ್ಕೂಪ್ - ಕ್ಯಾಲೋರಿ - 3ಕ್ಯಾ ಕೊಬ್ಬು - 1 ಗ್ರಾಂ ಪ್ರೊಟೀನ್ - 1ಗ್ರಾಂ ಕಾರ್ಬ್ಸ್ - 1 ಗ್ರಾಂ