ನವದೆಹಲಿ: ಜನಪ್ರಿಯ ರೇಡಿಯೋ ಕಾರ್ಯಕ್ರಮ ಮನ್ ಕಿ ಬಾತ್'ಗಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಸಲಹೆಗಳನ್ನು ಆಹ್ವಾನಿಸಿದ್ದಾರೆ.
ತಿಂಗಳಿಗೆ ಒಮ್ಮೆ ಪ್ರಸಾರವಾಗುವ ಮನ್ ಕಿ ಬಾತ್ ಕಾರ್ಯಕ್ರಮದ 88ನೇ ಸಂಚಿಕೆ ಏಪ್ರಿಲ್ 24 ರಂದು ಮನ್ ಕಿ ಬಾತ್ ಪ್ರಸಾರವಾಗಲಿದೆ. ಈ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿಯವರು ಸಾರ್ವಜನಿಕರಿಂದ ಸಲಹೆಗಳ ಆಹ್ವಾನಿಸಿದ್ದಾರೆ.
ಈ ಬಾರಿಯ ಕಾರ್ಯಕ್ರಮಕ್ಕೆ ಪ್ರಧಾನಿ ಮೋದಿಯವರು ವಿಶೇಷ ವಿಷಯವೊಂದನ್ನು ಆರಿಸಿಕೊಂಡಿದ್ದು, ತಳಮಟ್ಟದಲ್ಲಿ ಬದಲಾವಣೆಗೆ ದುಡಿಯುತ್ತಿರುವವರು ಹಾಗೂ ಅವಿಶ್ರಾಂತ ಶ್ರಮಿಸುತ್ತಿರುವವರ ಬಗ್ಗೆ ಮಾತನಾಡಿದ್ದಾರೆ.
ನಿಮಗೂ ಅಂಥ ಸ್ಫೂರ್ತಿದಾಯಕ ಚೇತನಗಳ ವಿವರ ತಿಳಿದಿದ್ದರೆ ನನ್ನ ಗಮನಕ್ಕೆ ತನ್ನಿ’ ಎಂದು ಮೋದಿ ಕೋರಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರ ಮನ್ ಕಿ ಬಾತ್ಗಾಗಿ ಮಾಹಿತಿ ನೀಡಲು ಇಚ್ಛಿಸುವವರು ನಮೋ ಆ್ಯಪ್ ಅಥವಾ MyGov ಆ್ಯಪ್ಗಲ (ವೆಬ್ಸೈಟ್) ಮೂಲಕ ತಮ್ಮ ಅನಿಸಿಕೆ ಹಂಚಿಕೊಳ್ಳಬಹುದು. 1800-11-7800 ಟೋಲ್ಫ್ರೀ ಸಂಖ್ಯೆಗೆ ಕರೆ ಮಾಡಿ ಮೆಸೇಜ್ ರೆಕಾರ್ಡ್ ಮಾಡಬಹುದು.